»   » ವಿಡಿಯೋ: ದೃಶ್ಯ ವೈಭವ ಸೃಷ್ಟಿಸಿದ 'ಪದ್ಮಾವತಿ' ಟ್ರೇಲರ್ ಮಿಸ್ ಮಾಡದೇ ನೋಡಿ

ವಿಡಿಯೋ: ದೃಶ್ಯ ವೈಭವ ಸೃಷ್ಟಿಸಿದ 'ಪದ್ಮಾವತಿ' ಟ್ರೇಲರ್ ಮಿಸ್ ಮಾಡದೇ ನೋಡಿ

Posted By:
Subscribe to Filmibeat Kannada

ಅಂತೂ 'ಪದ್ಮಾವತಿ' ಸಿನಿಮಾದ ಟ್ರೇಲರ್ ಬಂದೇ ಬಿಟ್ಟಿದೆ. ಬಾಲಿವುಡ್ ಸಿನಿಪ್ರಿಯರು ಇಷ್ಟು ದಿನ ಕಾಯುತ್ತಿದ್ದ ಈ ಚಿತ್ರದ ಟ್ರೇಲರ್ ಕೊನೆಗೂ ಪ್ರೇಕ್ಷಕರ ಮನ ತಣಿಸಿದೆ.

ದೀಪಿಕಾ ಪಡುಕೋಣೆ 'ಪದ್ಮಾವತಿ' ಚಿತ್ರದ ಫಸ್ಟ್ ಲುಕ್ ಬಿಡುಗಡೆ

ಒಂದೇ ಮಾತಿನಲ್ಲಿ ಹೇಳಬೇಕು ಅಂದರೆ 'ಪದ್ಮಾವತಿ' ಟ್ರೇಲರ್ ಹೊಸ ದೃಶ್ಯ ವೈಭವ ಸೃಷ್ಟಿಸಿದೆ. ಟ್ರೇಲರ್ ನೋಡುಗರನ್ನು ಬೇರೆಯದೆ ಜಗತ್ತಿಗೆ ಕರೆದುಕೊಂಡು ಹೋಗುತ್ತದೆ. ಎಂದಿನಂತೆ ಈ ಚಿತ್ರದಲ್ಲಿಯೂ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರು ಮ್ಯಾಜಿಕ್ ಮಾಡಿದ್ದಾರೆ.

'Padmavati' movie trailer is out

ಚಿತ್ರದಲ್ಲಿ ದೀಪಿಕಾ ಪಡುಕೋಣೆ ರಾಣಿ 'ಪದ್ಮಾವತಿ' ಆಗಿ, ಶಾಹಿದ್ ಕಪೂರ್ 'ಮಹಾರಾವಲ್ ರತನ್ ಸಿಂಗ್' ಮತ್ತು ರಣ್ವೀರ್ ಸಿಂಗ್ 'ಅಲಾವುದ್ದೀನ್ ಖಿಲ್ಜಿ' ಅವತಾರ ತಾಳಿದ್ದಾರೆ. ಯೂಟ್ಯೂಬ್ ನಲ್ಲಿ ಟ್ರೇಲರ್ ಬಿಡುಗಡೆಯಾಗಿ 2 ಗಂಟೆಗಳಲ್ಲಿ 1.73 ಲಕ್ಷಕ್ಕೂ ಹೆಚ್ಚು ಜನರು 'ಪದ್ಮಾವತಿ'ಯ ದರ್ಶನ ಪಡೆದಿದ್ದಾರೆ.

'Padmavati' movie trailer is out

'ರಾಮ್ ಲೀಲಾ' ಮತ್ತು 'ಬಾಜೀರಾವ್ ಮಸ್ತಾನಿ' ಚಿತ್ರಗಳ ಬಳಿಕ ಮತ್ತೆ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಇಲ್ಲಿ ಒಂದಾಗಿರುವುದು ಮತ್ತೊಂದು ವಿಶೇಷವಾಗಿದೆ. ಅಂದಹಾಗೆ, ಪದ್ಮಾವತಿ ಸಿನಿಮಾ ಡಿಸೆಂಬರ್ 1ಕ್ಕೆ ವಿಶ್ವದಾದ್ಯಂತ ತೆರೆಗೆ ಬರಲಿದೆ.

English summary
Watch video : Deepika Padukone's 'Padmavati' movie trailer is out.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X