For Quick Alerts
  ALLOW NOTIFICATIONS  
  For Daily Alerts

  ಭಾರತೀಯ ಚಿತ್ರಗಳಿಗೆ ನಿಷೇಧ ಹೇರಿದ ಪಾಕಿಸ್ತಾನ

  By Bharath Kumar
  |

  ಭಾರತೀಯ ಚಿತ್ರಗಳು, ಅದರಲ್ಲೂ ಬಾಲಿವುಡ್ ಸಿನಿಮಾಗಳು ವರ್ಲ್ಡ್ ವೈಡ್ ತೆರೆಕಾಣುತ್ತೆ. ಹಿಂದಿಯ ಬಹುತೇಕ ಎಲ್ಲ ಚಿತ್ರವೂ ನೆರೆರಾಷ್ಟ್ರ ಪಾಕಿಸ್ತಾನದಲ್ಲಿ ಪ್ರದರ್ಶನವಾಗುತ್ತೆ. ಆದ್ರೀಗ, ತಾತ್ಕಲಿಕವಾಗಿ ಭಾರತೀಯ ಚಿತ್ರಗಳಿಗೆ ಪಾಕ್ ನಿ‍ಷೇಧ ಹೇರಿದೆ.

  ಈದ್ ಹಬ್ಬ ಮುಗಿಯವರೆಗೂ ಯಾವುದೇ ಬಾಲಿವುಡ್ ಸಿನಿಮಾಗಳನ್ನ ಪಾಕ್ ನಲ್ಲಿ ಬಿಡುಗಡೆ ಮಾಡದಂತೆ ಪಾಕಿಸ್ತಾನದ ಮಾಹಿತ ಮತ್ತು ಪ್ರಸರಣ ಇಲಾಖೆ ಅಧಿಸೂಚನೆ ಹೊರಡಿಸಿದೆ.

  ಈ ಕುರಿತು ಕಾರಣ ನೀಡಿರುವ ಪಾಕಿಸ್ತಾನ ಸರ್ಕಾರ ''ಈ ನಿರ್ಧಾರವನ್ನ ಪಾಕಿಸ್ತಾನದ ವಿತರಕರು, ನಿರ್ಮಾಪಕರು, ಹಾಗೂ ಪ್ರದರ್ಶಕ ಮನವಿಯ ಮೆರೆಗೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

  ಅಂದ್ಹಾಗೆ, ಭಾಲಿವುಡ್ ಹಾಗೂ ಹಾಲಿವುಡ್ ಸಿನಿಮಾಗಳಿಗೆ ಪಾಕಿಸ್ತಾನದಲ್ಲಿ ಹೆಚ್ಚು ಬೇಡಿಕೆ ಇದ್ದು, ಇದರಿಂದ ಪಾಕಿಸ್ತಾನ ಚಿತ್ರಗಳ ಕಲೆಕ್ಷನ್ ಮೇಲೆ ಪರಿಣಾಮ ಬೀರುತ್ತಿದ ಎಂಬ ಕಾರಣಕ್ಕೆ ಈ ನಿರ್ಧಾರ ಮಾಡಲಾಗಿದೆಯಂತೆ.

  ಈದ್ ಹಬ್ಬದ ಪ್ರಯುಕ್ತ ಆಡಿಯೆನ್ಸ್ ಹೆಚ್ಚಾಗಿರುವ ಕಾರಣ, ಸ್ಥಳೀಯ ಚಿತ್ರಗಳಿಗೆ ಉತ್ತಮ ಲಾಭ ಆಗುವ ನಿರೀಕ್ಷೆಯಲ್ಲಿದೆ ಪಾಕ್ ಚಲನಚಿತ್ರ ಮಂಡಳಿ. ಇದರಿಂದ ಬಾಲಿವುಡ್ ಸಿನಿಮಾ ರಂಗಕ್ಕೆ ಯಾವುದೇ ನಷ್ಟವಾಗುವುದಿಲ್ಲವಾದರೂ, ಪಾಕ್ ಇದರಿಂದ ಲಾಭವಾಗುತ್ತೆ ಎಂಬ ಲೆಕ್ಕಾಚಾರ ಮಾಡಲಾಗಿದೆ. ಇನ್ನು ಹಿಂದಿಯಲ್ಲಿ ಸಲ್ಮಾನ್ ಖಾನ್ ಅಭಿನಯದ 'ರೇಸ್-3' ಸಿನಿಮಾ ಈದ್ ಹಬ್ಬದ ಪ್ರಯುಕ್ತ ತೆರೆಕಾಣುತ್ತಿದೆ.

  English summary
  Pakistan has issued a temporary ban on the screening of Indian films during next month's Eid holidays. Salman Khan starrer Race 3 is one of the big ticket Eid releases this year.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X