For Quick Alerts
  ALLOW NOTIFICATIONS  
  For Daily Alerts

  ಲಾಕ್ ಡೌನ್ ನಿಯಮ ಉಲ್ಲಂಘನೆ, ಬಂಧನ: ನಟಿ ಪೂನಂ ಪಾಂಡೆ ಹೇಳಿದ್ದೇನು?

  |

  ಬಾಲಿವುಡ್ ಹಾಟ್ ನಟಿ ಪೂನಂ ಪಾಂಡೆ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದ ಹಿನ್ನಲೆ ಮುಂಬೈ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎನ್ನುವ ಸುದ್ದಿಯನ್ನು ತಳ್ಳಿಹಾಕಿದ್ದಾರೆ. ಪೂನಂ ಪಾಂಡೆ ಅರೆಸ್ಟ್ ಆಗಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಬಗ್ಗೆ ನಟಿ ಪೂನಂ ಈಗ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

  "ನಾನು ಕಳೆದ ರಾತ್ರಿ ಸಿನಿಮಾ ಮ್ಯಾರಥಾನ್ ಗೆ ಹೋಗಿದ್ದೆ. ನಾನು ಬ್ಯಾಕ್ ಟು ಬ್ಯಾಕ್ 3 ಸಿನಿಮಾಗಳನ್ನು ವೀಕ್ಷಿಸಿದೆ. ತುಂಬಾ ಖುಷಿಯಾಯಿತು. ನನ್ನನ್ನು ಅರೆಸ್ಟ್ ಮಾಡಲಾಗಿದೆ ಎಂದು ಕಳೆದ ರಾತ್ರಿಯಿಂದ ನನಗೆ ತುಂಬಾ ಕರೆಗಳು ಬರುತ್ತಿವೆ. ದಯವಿಟ್ಟು ಇಂತಹ ಸುದ್ದಿಗಳನ್ನು ಬರೆಯಬೇಡಿ. ನಾನು ಮನೆಯಲ್ಲಿಯೇ ಇದ್ದೀನಿ. ಮತ್ತು ನಾನು ಚೆನ್ನಾಗಿದ್ದೀನಿ. ಲವ್ ಯು ಆಲ್" ಎಂದು ಹೇಳುವ ಮೂಲಕ ಬಂಧನದ ಸುದ್ದಿಯನ್ನು ತಳ್ಳಿಹಾಕಿದ್ದಾರೆ.

  ಲಾಕ್ ಡೌನ್ ನಿಯಮ ಉಲ್ಲಂಘನೆ: ನಟಿ ಪೂನಂ ಪಾಂಡೆ ಬಂಧನಲಾಕ್ ಡೌನ್ ನಿಯಮ ಉಲ್ಲಂಘನೆ: ನಟಿ ಪೂನಂ ಪಾಂಡೆ ಬಂಧನ

  ಕಳೆದ ಭಾನುವಾರ ಪೂನಂ ಪಾಂಡೆ ಮತ್ತು ಬಾಯ್ ಫ್ರೆಂಡ್ ಸ್ಯಾಮ್ ಅಹಮದ್ ನನ್ನು ಮುಂಬೈ ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದ ಆರೋಪದಡಿ ಮುಂಬೈನ ಮರೀನ್ ಡ್ರೈವ್ ಪೊಲೀಸರು ಅರೆಸ್ಟ್ ಮಾಡಿದ್ದರು ಎನ್ನಲಾಗಿದೆ.

  29 ವರ್ಷದ ಪೂನಂ ಮತ್ತು ಆಕೆಯ ಬಾಯ್ ಫ್ರೆಂಡ್ ಸ್ಯಾಮ್ ಅಹಮದ್ ಇಬ್ಬರು ಲಾಕ್ ಡೌನ್ ನಡುವೆಯೂ ಕಾರಣ ಇಲ್ಲದೆ ಐಶಾರಾಮಿ ಕಾರಿನಲ್ಲಿ ಸುತ್ತಾಡುತ್ತಿದ್ದರು. ಈ ವೇಳೆ ಪೊಲೀಸರು ಬಂಧಿಸಿ, ಇಬ್ಬರ ವಿರುದ್ಧ ಸೆಕ್ಷನ್ 269 ಮತ್ತು 188ರ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ, ಎಂದು ಹೇಳಲಾಗುತ್ತಿ. ಆದರೀಗ ಈ ಸುದ್ದಿಯನ್ನು ಪೂನಂ ತಳ್ಳಿಹಾಕಿದ್ದಾರೆ.

  English summary
  Poonam Pandey Reaction About Arrested For Violating Lockdown.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X