For Quick Alerts
  ALLOW NOTIFICATIONS  
  For Daily Alerts

  ಟ್ರೋಲ್ ಬಳಿಕ 'ವ್ಯಾಲೆಂಟೈನ್ಸ್ ಡೇ' ಫೋಟೋ ಡಿಲೀಟ್ ಮಾಡಿದ ಬಾಲಿವುಡ್ ನಟ

  |

  ಬಾಲಿವುಡ್ ನಟ ಪ್ರತೀಕ್ ಬಬ್ಬರ್ ಪ್ರೇಮಿಗಳ ದಿನದ ವಿಶೇಷವಾಗಿ ತನ್ನ ಪತ್ನಿ ಜೊತೆಗಿರುವ ರೋಮ್ಯಾಂಟಿಕ್ ಫೋಟೋವೊಂದನ್ನ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದರು. ಇಬ್ಬರು ಅರೆನಗ್ನವಾಗಿರುವ ಫೋಟೋ ಇದಾಗಿತ್ತು. ಇದರಲ್ಲಿ ಪ್ರತೀಕ್ ಪತ್ನಿ ಸಾನ್ಯ ಸಾಗರ್ ಟಾಪ್ ಲೆಸ್ ಆಗಿದ್ದರು.

  ಪ್ರತೀಕ್ ಮತ್ತು ಆತನ ಪತ್ನಿಯ ಈ ಫೋಟೋ ಅಪಾಯಕಾರಿಯಾಗಿದೆ ಎಂದು ನೆಟ್ಟಿಗರು ಟ್ರೋಲ್ ಮಾಡಲು ಶುರು ಮಾಡಿದ್ದಾರೆ. ಬಗೆಬಗೆಯ ಕಾಮೆಂಟ್ ಗಳ ಮೂಲಕ ಕಾಲೆಳೆದರು. ಕೆಲವರು ಅಸಭ್ಯವಾತಿ ಕಾಮೆಂಟ್ ಮಾಡಿದ್ರು. ಇದನ್ನ ಗಮನಿಸಿದ ಪ್ರತೀಕ್ ತಮ್ಮ ಪೋಸ್ಟ್ ಡಿಲೀಟ್ ಮಾಡಿದ್ದಾರೆ.

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನಟ ಪ್ರತೀಕ್ ಬಬ್ಬರ್

  ಪ್ರತೀಕ್ ಬಬ್ಬರ್ ಮತ್ತು ಸಾನ್ಯ ಸಾಗರ್ ಜನವರಿ ತಿಂಗಳಲ್ಲಿ ಮದುವೆಯಾಗಿದ್ದರು. ಕಳೆದ ಕೆಲ ವರ್ಷಗಳಿಂದ ಪ್ರೀತಿಯಲ್ಲಿದ್ದ ಇವರಿಬ್ಬರು ಮಹಾರಾಷ್ಟ್ರದ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

  ಅಂದ್ಹಾಗೆ, ಪ್ರತೀಕ್ ಬಬ್ಬರ್ ಬಾಲಿವುಡ್ ನ ಹಿರಿಯ ನಟಿ ಸ್ಮಿತಾ ಪಾಟೀಲ್ ಮತ್ತು ರಾಜ್ ಬಾಬರ್ ದಂಪತಿಯ ಮಗ. 2008ರಲ್ಲಿ ಸಿನಿಪಯಣ ಅರಂಭಿಸಿದ್ದ ಪ್ರತೀಕ್ ಬಾಬರ್, ಜಾನೇ ತು ಜಾನೇ ನಾ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶ ಮಾಡಿದರು.

  ಧಮ್ ಮಾರೋ ಧಮ್, ಮೈ ಫ್ರೆಂಡ್ ಪಿಂಟು, ಏಕ್ ದಿವಾನ ತಾ, ಭಾಗಿ 2 ಚಿತ್ರಗಳು ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

  Read more about: valentines day bollywood
  English summary
  Prateik Babbar has deleted a risque Valentine’s Day picture with wife Sanya Sagar, after getting trolled online.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X