For Quick Alerts
  ALLOW NOTIFICATIONS  
  For Daily Alerts

  ಉಂಗುರ ಬದಲಿಸಿಕೊಂಡ ಬಾಲಿವುಡ್ ನಟ ಪ್ರತೀಕ್ ಬಬ್ಬರ್

  By Harshitha
  |

  ಸಿನಿ ಲೋಕದಲ್ಲಿ ಸದ್ಯ ಮದುವೆ ಸಂಭ್ರಮ ಜೋರಾಗಿದೆ. ಅನುಷ್ಕಾ ಶರ್ಮಾ-ವಿರಾಟ್ ಕೋಹ್ಲಿ, ಭಾವನಾ-ನವೀನ್, ನಮಿತಾ ಸೇರಿದಂತೆ ಹಲವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಬಾಲಿವುಡ್ ನಟ ಪ್ರತೀಕ್ ಬಬ್ಬರ್ ಸರದಿ.

  ಬಾಲಿವುಡ್ ನ ಖ್ಯಾತ ನಟ ರಾಜ್ ಬಬ್ಬರ್ ಹಾಗೂ ಖ್ಯಾತ ನಟಿ ಸ್ಮಿತಾ ಪಾಟೀಲ್ ರವರ ಪುತ್ರ ಪ್ರತೀಕ್ ಬಬ್ಬರ್ ನಿಶ್ಚಿತಾರ್ಥ ನಿನ್ನೆ ಲಕ್ನೋದಲ್ಲಿ ನಡೆದಿದೆ. ತಮ್ಮ ದೀರ್ಘ ಕಾಲದ ಗೆಳತಿ ಸಾನ್ಯ ಸಾಗರ್ ಜೊತೆ ಪ್ರತೀಕ್ ಬಬ್ಬರ್ ರಿಂಗ್ ಎಕ್ಸ್ ಚೇಂಜ್ ಮಾಡಿಕೊಂಡಿದ್ದಾರೆ.

  ಎಂಟು ವರ್ಷಗಳಿಂದ ಲವ್ ಮಾಡುತ್ತಿರುವ ಪ್ರತೀಕ್ ಬಬ್ಬರ್ ಹಾಗೂ ಸಾನ್ಯ ನಿನ್ನೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಲಕ್ನೋದಲ್ಲಿ ಇರುವ ಸಾನ್ಯ ಅವರ ಫಾರ್ಮ್ ಹೌಸ್ ನಲ್ಲಿ ಎಂಗೇಜ್ ಮೆಂಟ್ ನಡೆದಿದೆ. ಮದುವೆ ದಿನಾಂಕ ಇನ್ನೂ ನಿಗದಿ ಆಗಿಲ್ಲ.

  ಅಂದ್ಹಾಗೆ, 'ಜಾನೆ ತು ಯಾ ಜಾನೆ ನಾ', 'ಧೋಬಿ ಘಾಟ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ಪ್ರತೀಕ್ ಬಬ್ಬರ್ ಅಭಿನಯಿಸಿದ್ದಾರೆ.

  English summary
  Bollywood Actor Prateik Babbar got engaged to Girlfriend Sanya Sagar on Monday (Jan 22nd) in Lucknow.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X