For Quick Alerts
  ALLOW NOTIFICATIONS  
  For Daily Alerts

  ಮುರಿದು ಬಿತ್ತು ಪ್ರಿಯಾಂಕ ಚೋಪ್ರ ಸಹೋದರನ ಮದುವೆ: ನಿಜವಾದ ಕಾರಣ ಇಲ್ಲಿದೆ

  |

  ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರ ಅಣ್ಣನ ಮದುವೆ ಸಂಭ್ರಮದಲ್ಲಿ ಬ್ಯುಸಿಯಾಗಿದ್ದರು. ಪಿಗ್ಗಿ ಅಮೇರಿಕಾದ ಗಾಯಕ ನಿಕ್ ಜೋನಸ್ ಜೊತೆ ಮದುವೆಯಾದ ನಂತರ ಯು ಎಸ್ ನಲ್ಲೆ ವಾಸವಾಗಿದ್ದರು. ಆದ್ರೆ ಸಹೋದರನ ಮದುವೆ ಹಿನ್ನಲೆ ಕೆಲವುದಿನಗಳಿಂದ ಪ್ರಿಯಾಂಕ ಮುಂಬೈನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು.

  ಇಡೀ ಪ್ರಿಯಾಂಕ ಕುಟುಂಬ ಮನೆ ಮಗ ಸಿದ್ಧಾರ್ಥ್ ಮದುವೆ ಸಡಗರದಲ್ಲಿ ಇತ್ತು. ಇನ್ನೇನು ಆ ಶುಭಗಳಿಗೆ ಬಂದೆಬಿಟ್ಟಿತು ಎನ್ನುವಷ್ಟೊತ್ತಿಗೆ ದಿಢೀರನೆ ಮದುವೆ ನಿಂತುಹೋಗಿದೆ. ಪಿಗ್ಗಿ ಮನೆಯ ಮದುವೆ ಮುರಿದು ಬಿದ್ದಿದ್ದು ನೋಡಿ ಬಾಲಿವುಡ್ ನಲ್ಲಿ ತರಹೇವಾರಿ ಮಾತುಗಳು ಹೊರಬರಲು ಶುರುವಾಗಿದೆ.

  ಕಳೆದ ವಾರವೇ ನಡೆಯಬೇಕಿದ್ದ ಪ್ರಿಯಾಂಕ ಅಣ್ಣನ ಮದುವೆ ನಿಂತು ಹೋಯ್ತಾ?

  ಆದ್ರೆ ಪ್ರಿಯಾಂಕ ಕುಟುಂಬ ಮದುವೆ ನಿಂತುಹೋಗಿಲ್ಲ, ಇಶಿತಾಗೆ ಆರೋಗ್ಯ ಸರಿ ಇಲ್ಲದ ಕಾರಣ ಮುಂದಕ್ಕೆ ಹೋಗಿದೆ ಎಂದು ಹೇಳುತ್ತಿದ್ದರು. ಆದ್ರೀಗ ಮದುವೆ ನಿಲ್ಲಲು ನಿಜವಾದ ಕಾರಣ ಬಯಲಾಗಿದೆ. ಸಿದ್ಧಾರ್ಥ್ ಮತ್ತು ಇಶಿತಾ ನಡುವಿನ ಭಿನ್ನಾಭಿಪ್ರಾಯವೇ ಇಬ್ಬರ ಮದುವೆ ಮುರಿದು ಬೀಳಲು ಕಾರಣ ಎಂದು ಹೇಳಲಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಇಶಿತಾ ಇನ್ಸ್ಟಾಗ್ರಾಮ್ ನಲ್ಲಿ ಹೋಟೆಲ್ ನಲ್ಲಿ ಕುಳಿತಿರುವ ಫೋಟೋ ಶೇರ್ ಮಾಡುವ ಜೊತೆಗೆ "ಸುಂದರ ಅಂತ್ಯಕ್ಕೆ ವಿದಾಯ ಹೇಳಿ, ಹೊಸ ಆರಂಭಕ್ಕೆ ಚಿಯರ್ ಹೇಳಿ ಎಂದು ಹಾಕಿಕೊಂಡಿದ್ದಾರೆ" ಈ ಪೋಸ್ಟರ್ ಈಗ ಇಬ್ಬರ ಮದುವೆ ನಿಂತು ಹೋಗಿದೆ ಎನ್ನುವುದರ ಬಗ್ಗೆ ಸುಳಿವು ನೀಡುತ್ತಿದೆ.

  ಸಿದ್ಧಾರ್ಥ ಮತ್ತು ಇಶಿಕಾ ಇಬ್ಬರು ಫೆಬ್ರವರಿ 27ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ದೆಹಲಿಯಲ್ಲಿ ನಡೆದ ಅದ್ಧೂರಿ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಪ್ರಿಯಾಂಕ ಕುಟುಂಬದವರು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರು ಭಾಗಿಯಾಗಿದ್ದರು. ಈ ಸಂಭ್ರಮವನ್ನು ಪ್ರಿಯಾಂಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಎಲ್ಲವು ಸರಿಯಾಗಿದ್ದರೆ ಮದುವೆ ಕೂಡ ಈಗಾಗಲೆ ನಡೆದು ಹೋಗಬೇಕಿತ್ತು. ಆದ್ರೀಗ ಸಿದ್ಧಾರ್ಥ ಮತ್ತು ಇಶಿತಾ ಮದುವೆ ಮುರಿದು ಬಿದ್ದಿದೆ.

  English summary
  Bollywod actress Priyanka chopra's brother siddharth and isha broke up a few days before. Ishita has posted a new picture with the caption, “Cheers to new beginnings. With a goodbye kiss to beautiful endings.” While this hints at her and Siddharth’s breakup.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X