»   » ಐಟಂಗಾಗಿ ರು.2.8 ಕೋಟಿ ಎಣಿಸಿದ ಪ್ರಿಯಾಂಕಾ

ಐಟಂಗಾಗಿ ರು.2.8 ಕೋಟಿ ಎಣಿಸಿದ ಪ್ರಿಯಾಂಕಾ

Posted By:
Subscribe to Filmibeat Kannada

ದುಡ್ಡು ಎಷ್ಟು ಬಿಚ್ಚಿದರೆ ಬಟ್ಟೆ ಎಷ್ಟು ಬಿಚ್ಚಬೇಕು ಎಂಬ ಲೆಕ್ಕಾಚಾರ ಬಾಲಿವುಡ್ ನಲ್ಲಿ ಶುರುವಾಗಿದೆ. ಹಾಗಾಗಿ ಇಲ್ಲಿ ನಾಯಕಿಯರೇ ಐಟಂ ಬೆಡಗಿಯರಾಗಿ ಬದಲಾಗುತ್ತಿದ್ದಾರೆ. ಅವರ ವಸ್ತ್ರ ಕಿರಿದಾದಷ್ಟು ಸಂಭಾವನೆ ಹಿರಿದಾಗುತ್ತಿದೆ.

ಇಷ್ಟು ದಿನ ಸುಮ್ಮನಿದ್ದ ಪ್ರಿಯಾಂಕಾ ಚೋಪ್ರಾ ಕೂಡ ಈಗ ಐಟಂ ಡಾನ್ಸ್ ಗೆ ಮನಸ್ಸು ಮಾಡಿದ್ದಾರೆ. ಶೂಟೌಟ್ ಅಟ್ ವಾಡಾಲಾ ಚಿತ್ರದಲ್ಲಿ ತಮ್ಮ ಸೊಂಟ ಕುಣಿಸುತ್ತಿದ್ದಾರೆ. ಇದಕ್ಕಾಗಿ ಬರೋಬ್ಬರಿ ರು.2.8 ಕೋಟಿ ಎಣಿಸಿದ್ದಾರೆ.

ಬಬ್ಲಿ ಬದ್ಮಾಷ್ ಎಂಬ ಹಾಡಿಗಾಗಿ ಇದೇ ಮೊದಲ ಬಾರಿಗೆ ಪ್ರಿಯಾಂಕಾ ಐಟಂ ಡಾನ್ಸ್ ಮಾಡುತ್ತಿದ್ದಾರೆ. ಸದ್ಯಕ್ಕೆ ಝಂಜೀರ್ ಹಾಗೂ ಗುಂಡೇ ಎಂಬೆರಡು ಚಿತ್ರಗಳಲ್ಲಿ ಪ್ರಿಯಾಂಕಾ ಬಿಜಿಯಾಗಿದ್ದಾರೆ. ಪುರುಸೊತ್ತಿಲ್ಲದಂತಿದ್ದರೂ ಐಟಂ ಹಾಡನ್ನು ಬಿಟ್ಟಿಲ್ಲ ಎನ್ನುತ್ತವೆ ಬಾಲಿವುಡ್ ಮೂಲಗಳು.

ಬಾಲಾಜಿ ಮೋಷನ್ ಪಿಕ್ಚರ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಈ ಐಟಂ ಹಾಡು ಪ್ರಮುಖ ಆಕರ್ಷಣೆಯಾಗಿ ನಿಲ್ಲಲಿದೆಯಂತೆ. ಮೇ.1ಕ್ಕೆ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

ಈ ಚಿತ್ರದ ಉಳಿದ ಪಾತ್ರವರ್ಗದಲ್ಲಿ ಜಾನ್ ಅಬ್ರಹಾಂ, ಅನಿಲ್ ಕಪೂರ್, ಕಂಗನಾ ರನೌತ್, ಸೋನು ಸೂದ್, ಮನೋಜ್ ಬಾಜ್‌ಪೇಯಿ ಹಾಗೂ ತುಷಾರ್ ಕಪೂರ್ ಇದ್ದಾರೆ. ಈಗಾಗಲೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಮುಂಬೈ ಪೊಲೀಸರ ಎನ್‌ಕೌಂಟರ್ ಒಂದರ ಕಥೆಯನ್ನು ಚಿತ್ರ ಒಳಗೊಂಡಿದೆ.

ನವೆಂಬರ್ 1, 1982ರಲ್ಲಿ ಮುಂಬೈನ ವಾಡಾಲಾ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್ ನಲ್ಲಿ ಗ್ಯಾಂಗ್‌ಸ್ಟರ್ ಮಾನ್ಯ ಸುರ್ವೆ ಪೊಲೀಸರ ಗುಂಡಿಗೆ ಬಲಿಯಾದ. ಇದೇ ಕಥೆಯನ್ನು ಆಧಾರವಾಗಿಟ್ಟುಕೊಂಡು ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಮೇ.1ರಂದು ಚಿತ್ರ ಬಿಡುಗಡೆಯಾಗಲಿದೆ. (ಏಜೆನ್ಸೀಸ್)

English summary
Actress Priyanka Chopra demanding Rs. 2.8 crore for the song Babli Badmaash in Sanjay Gupta's Shootout At Wadala. This will be Piggy Chops' first ever item song in a film.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada