»   » ಅಸ್ಸಾಂ ಪ್ರವಾಸೋದ್ಯಮ ರಾಯಭಾರಿಯಾದ ಪ್ರಿಯಾಂಕಾ ಚೋಪ್ರಾ

ಅಸ್ಸಾಂ ಪ್ರವಾಸೋದ್ಯಮ ರಾಯಭಾರಿಯಾದ ಪ್ರಿಯಾಂಕಾ ಚೋಪ್ರಾ

Posted By:
Subscribe to Filmibeat Kannada

ಕ್ರಿಕೆಟ್ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್‌ ತೆಂಡೂಲ್ಕರ್ ನಂತರ ಅಸ್ಸಾಂ ಸರ್ಕಾರ ತನ್ನ ಪ್ರವಾಸೋದ್ಯಮ ಇಲಾಖೆಯ ರಾಯಭಾರಿಯಾಗಿ ಬಾಲಿವುಡ್‌ ತಾರೆ ಪ್ರಿಯಾಂಕಾ ಚೋಪ್ರಾ ರವರನ್ನ ಆಯ್ಕೆ ಮಾಡಿದೆ.

ಹೌದು, ಪ್ರಿಯಾಂಕಾ ಚೋಪ್ರಾ ಅಸ್ಸಾಂ ಪ್ರವಾಸೋದ್ಯಮ ರಾಯಭಾರಿಯಾಗಿ ಎರಡು ವರ್ಷಗಳ ಅವಧಿಗೆ ಸಹಿ ಹಾಕಿದ್ದಾರೆ. ಈ ವರ್ಷ ಪೂರ್ತಿ ಬಾಲಿವುಡ್‌ ಬಿಟ್ಟು ಹಾಲಿವುಡ್‌ ಸಿನಿಮಾಗಳ ಶೂಟಿಂಗ್ ನಲ್ಲಿ ಬಿಜಿಯಾಗಿದ್ದ ಪ್ರಿಯಾಂಕ, 2017 ರಲ್ಲಿ ಎರಡು ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸಲಿದ್ದಾರಂತೆ.

ಪ್ರಿಯಾಂಕಾ ಚೋಪ್ರಾ 2 ವರ್ಷಗಳ ಅವಧಿಗೆ ರಾಯಭಾರಿ

ಸಚಿನ್‌ ತೆಂಡೂಲ್ಕರ್‌ ಅವಧಿ ಮುಗಿದ ಬಳಿಕ 4-5 ಸೆಲೆಬ್ರಿಟಿಗಳನ್ನು ರಾಯಭಾರಿ ಹೊಣೆಗಾಗಿ ಅಸ್ಸಾಂ ಸರ್ಕಾರ ಭೇಟಿ ಮಾಡಿತ್ತು. ಕೊನೆಗೆ ಪ್ರಿಯಾಂಕಾ ಚೋಪ್ರಾ ರವರನ್ನ ಫೈನಲ್‌ ಮಾಡಿರುವ ಬಗ್ಗೆ ಅಸ್ಸಾಂ ಪ್ರವಾಸೋದ್ಯಮ ಸಚಿವರಾದ ಹಿಮಂತ ಬಿಸ್ವ ಶರ್ಮಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಿಯಾಂಕಾಗೆ ಸಂಭಾವನೆ ಇಲ್ಲ..!

ಒಪ್ಪಂದದ ಪ್ರಕಾರ ಪ್ರಿಯಾಂಕಾ ಚೋಪ್ರಾ ರವರಿಗೆ ಯಾವುದೇ ಸಂಭಾವನೆ ನೀಡುತ್ತಿಲ್ಲ. ಆದರೆ ಶೂಟಿಂಗ್ ಮತ್ತು ಮುದ್ರಣ ಮಾಧ್ಯಮದ ಜಾಹೀರಾತಿಗೆ ಮಾತ್ರ ಹಣ ನೀಡಲಾಗುತ್ತದೆ ಎಂದು ಹೇಳಲಾಗಿದೆ. [ಸಂಭಾವನೆಯಲ್ಲಿ ದೀಪಿಕಾರನ್ನು ಹಿಂದಿಕ್ಕಿದ ಪ್ರಿಯಾಂಕ ಚೋಪ್ರಾ]

ಗುವಾಹಟಿಗೆ ಡಿಸೆಂಬರ್ 24 ರಂದು ಪ್ರಿಯಾಂಕಾ ಭೇಟಿ

"ಪ್ರಿಯಾಂಕಾ ಚೋಪ್ರಾ ಗುವಾಹಟಿಗೆ ಡಿಸೆಂಬರ್ 24 ರಂದು ಭೇಟಿ ನೀಡಲಿದ್ದು, ಅಂತರರಾಷ್ಟ್ರೀಯ ಪ್ರವಾಸೋದ್ಯಮದ ಬಗ್ಗೆ ವೈಯಕ್ತಿಕ ಸಭೆ ನಡೆಸಲಿದ್ದಾರೆ" ಎಂದು ಶರ್ಮಾ ರವರು ಹೇಳಿದ್ದಾರೆ. [ಪ್ರಿಯಾಂಕ ಚೋಪ್ರಾ ತಮ್ಮ ಮೇಕಪ್ಪ್ ಗೆ ಮಾಡೋ ಖರ್ಚೆಷ್ಟು ಗೊತ್ತಾ?]

2017 ರಲ್ಲಿ ಪ್ರಿಯಾಂಕಾ ಚೋಪ್ರಾ ಹೊಸ ಸಿನಿಮಾಗಳು

ಪ್ರಿಯಾಂಕಾ ಈಗಾಗಲೇ ಅಂತರರಾಷ್ಟ್ರೀಯ ಮಟ್ಟದ ನಟಿ ಎಂಬುದು ಎಲ್ಲರಿಗೂ ತಿಳಿದೇ ಇದೆ. ಈ ವರ್ಷವೆಲ್ಲಾ ಅಮೆರಿಕನ್‌ ಸೀರೀಸ್ 'ಕ್ವಾಂಟಿಕೊ' ಮತ್ತು ಹಾಲಿವುಡ್‌ನ 'ಬೇವಾಚ್' ಸಿನಿಮಾ ಶೂಟಿಂಗ್ ನಲ್ಲಿ ಬಿಜಿಯಾಗಿದ್ದ, ಪ್ರಿಯಾಂಕ 2017 ರಲ್ಲಿ ಎರಡು ಹೊಸ ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸಲಿರುವ ಬಗ್ಗೆ ಹೇಳಿದ್ದಾರೆ. ಆ ಸಿನಿಮಾಗಳು ಯಾವುವು ಎಂದು ಜನವರಿ ಅಂತ್ಯದೊಳಗೆ ತಿಳಿಸಲಿದ್ದಾರಂತೆ.

English summary
Bollywood Actress Priyanka Chopra named Assam Tourism Brand Ambassador.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada