5ನೇ ಬಾರಿ 'ಸೆಕ್ಸಿಯೆಸ್ಟ್ ಏಷ್ಯನ್ ವುಮನ್' ಪಟ್ಟ ಗಿಟ್ಟಿಸಿಕೊಂಡ ಪ್ರಿಯಾಂಕಾ
'ಕ್ವಾಂಟಿಕೋ' ಸುಂದರಿ, ಬಾಲಿವುಡ್ ನ ಪಿಗ್ಗಿ ಚಾಪ್ಸ್ ಪ್ರಿಯಾಂಕಾ ಚೋಪ್ರಾ ಮುಡಿಗೆ ಮತ್ತೊಂದು ಗರಿ ಸಿಕ್ಕಿದೆ. ಪ್ರಿಯಾಂಕಾ ಚೋಪ್ರಾ 'ಸೆಕ್ಸಿಯೆಸ್ಟ್ ಏಷ್ಯನ್ ವುಮನ್ 2017 ಎಂಬ ಬಿರುದಿಗೆ ಪಾತ್ರರಾಗಿದ್ದಾರೆ. ಲಂಡನ್ ಮೂಲದ ವಾರ ಪತ್ರಿಕೆ 'ಈಸ್ಟರ್ನ್ ಐ' ಪ್ರತಿ ವರ್ಷ ನಡೆಸುವ ಈ ಸ್ಪರ್ಧೆಯಲ್ಲಿ ಅತೀ ಹೆಚ್ಚು ಮತಗಳನ್ನ ಪಡೆದುಕೊಂಡು ಸೆಕ್ಸಿಯೆಸ್ಟ್ ಏಷ್ಯನ್ ವುಮನ್ ಪಟ್ಟವನ್ನ ಅಲಂಕರಿಸಿದ್ದಾರೆ.
ಕಳೆದ ವರ್ಷ ನಟಿ ದೀಪಿಕಾ ಪಡುಕೋಣೆ 'ಸೆಕ್ಸಿಯೆಸ್ಟ್ ಏಷ್ಯನ್ ವುಮನ್ ಗೌರವಕ್ಕೆ ಪಾತ್ರರಾಗಿದ್ದರು. ಈ ಬಾರಿ ದೀಪಿಕಾರನ್ನ ಹಿಂದಿಕ್ಕಿ ಪ್ರಿಯಾಂಕಾ ಚೋಪ್ರಾ ಮೊದಲ ಸ್ಥಾನವನ್ನ ಪಡೆದುಕೊಂಡಿದ್ದಾರೆ.

ಅತ್ಯಂತ ಪ್ರತಿಭಾವಂತೆ, ಬುದ್ಧಿವಂತೆ, ಬಹುಮುಖಿ ಸಾಧಕಿ, ಸೌಂದರ್ಯವಂತೆ, ಸಾಮಾಜಿಕ ಪ್ರಜ್ಞೆಯ ಜೊತೆಗೆ ಅಂತಾರಾಷ್ಟ್ರೀಯ ಮಟ್ಟದ ಹಾಡುಗಾರ್ತಿ, ಮ್ಯೂಸೀಷಿಯನ್ ಕೂಡ ಆಗಿರುವ ಪ್ರಿಯಾಂಕಾ ಐದನೇ ಬಾರಿ ಈ ಸ್ಥಾನವನ್ನ ಪಡೆದುಕೊಳ್ಳುವ ಮೂಲಕ ತಮ್ಮ ಹೆಸರಿನಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.

50 ಸೆಕ್ಸಿಸ್ಟ್ ಏಷ್ಯನ್ ಮಹಿಳೆಯರಲ್ಲಿ ಮೊದಲ ಸ್ಥಾನ ಪ್ರಿಯಾಂಕ ಚೋಪ್ರಾ ಪಾಲಾಗಿದ್ದು ಮೂರನೇ ಸ್ಥಾನವನ್ನ ನಟಿ ದೀಪಿಕಾ ಪಡುಕೋಣೆ ಪಡೆದುಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ನಟಿ ಪ್ರಿಯಾಂಕ ಚೋಪ್ರಾ ಈ ಕ್ರೆಡಿಟ್ ಅನ್ನು ನಾನು ನನ್ನ ತಂದೆ-ತಾಯಿ ಮತ್ತು ನಮ್ಮ ಪೂರ್ವಜರಿಗೆ ನೀಡಲು ಬಯಸುತ್ತೇನೆ. ನನಗೆ ವೋಟ್ ಮಾಡಿದ ಅಭಿಮಾನಿಗಳಿಗೆ ಈ ಮೂಲಕ ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾರೆ. ಇನ್ನುಳಿದಂತೆ ಭಾರತೀಯ ಖ್ಯಾತ ಟಿವಿ ತಾರೆ ನಿಯಾ ಶರ್ಮಾ ಎರಡನೇ ಸ್ಥಾನ, ನಟಿ ಆಲಿಯಾ ಭಟ್ ನಾಲ್ಕನೇ ಸ್ಥಾನ, ಮಹೀರಾ ಖಾನ್ ಐದನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.


Click it and Unblock the Notifications











