»   » ಟ್ರಂಪ್ ವಿರೋಧಿ ಮಹಿಳಾ ಪ್ರತಿಭಟನೆಗೆ ಪಿಗ್ಗಿ ಬೆಂಬಲ

ಟ್ರಂಪ್ ವಿರೋಧಿ ಮಹಿಳಾ ಪ್ರತಿಭಟನೆಗೆ ಪಿಗ್ಗಿ ಬೆಂಬಲ

Written By:
Subscribe to Filmibeat Kannada

ಅಮೆರಿಕಾದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ನಂತರ ವಾಷಿಂಗ್ಟನ್ ನಲ್ಲಿ ಸಿಕ್ಕಾಪಟ್ಟೆ ಮಹಿಳಾ ಪ್ರತಿಭಟನಾ ಮೆರವಣಿಗೆ ನಡೆಯುತ್ತಿದೆ. ಈ ಮಹಿಳಾ ಪ್ರತಿಭಟನಾ ಮೆರವಣಿಗೆಗೆ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಸಂಪೂರ್ಣ ಬೆಂಬಲ ನೀಡಿದ್ದಾರೆ.

priyanka chopra

"ಸಿನಿಮಾ ಶೂಟಿಂಗ್ ವೇಳಾಪಟ್ಟಿಯಿಂದಾಗಿ ವಾಷಿಂಗ್ಟನ್ ನಲ್ಲಿ ನಡೆಯುತ್ತಿರುವ ಶಾಂತಿಯುತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ" ಎಂದು ಪ್ರಿಯಾಂಕ ಚೋಪ್ರಾ ಟ್ವಿಟರ್ ಮೂಲಕ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

priyanka tweet

"ವಾಷಿಂಗ್ಟನ್ ನಲ್ಲಿ ಮಾರ್ಚ್‌ ನಲ್ಲಿ ಭಾಗವಹಿಸುತ್ತಿರುವ ನನ್ನ ಸಹೋದರ ಸಹೋದರಿಯರ ಬಗ್ಗೆ ಹೆಮ್ಮೆ ಇದೆ. ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಬೇಕೆಂದುಕೊಂಡಿದ್ದೆ. ಆದರೆ ಸಾಧ್ಯವಾಗುತ್ತಿಲ್ಲ" ಎಂದು ಪ್ರಿಯಾಂಕ ಚೋಪ್ರಾ ಟ್ವೀಟ್ ಮಾಡಿದ್ದಾರೆ.

ಅಂದಹಾಗೆ ಬಾಲಿವುಡ್ ಅಂಗಳ ದಿಂದ ಹಾಲಿವುಡ್ ಗೆ ಜಂಪ್ ಆಗಿರುವ ಪಿಗ್ಗಿ ಸದ್ಯದಲ್ಲಿ 'ಬೇ ವಾಚ್' ಸಿನಿಮಾ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

English summary
Actress Priyanka Chopra extended her support for the Women's March that was organised in Washington DC, a day after Donald Trump was sworn in as the 45th president of the United States of America.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada