»   » 10 ವರ್ಷದ ನಂತರ ಮತ್ತೆ ಒಂದಾದ ಸಲ್ಮಾನ್-ಪ್ರಿಯಾಂಕಾ

10 ವರ್ಷದ ನಂತರ ಮತ್ತೆ ಒಂದಾದ ಸಲ್ಮಾನ್-ಪ್ರಿಯಾಂಕಾ

Posted By:
Subscribe to Filmibeat Kannada

ಬಾಲಿವುಡ್ ನಿಂದ ದೂರವಿರುವ ಪ್ರಿಯಾಂಕಾ ಚೋಪ್ರಾ ಮತ್ತೆ ಬಿಟೌನ್ ಗೆ ಕಮ್ ಬ್ಯಾಕ್ ಆಗಿದ್ದಾರೆ. ಸುಮಾರು 2 ವರ್ಷದ ನಂತರ ಮತ್ತೆ ಹಿಂದಿ ಸಿನಿಮಾದಲ್ಲಿ ಪಿಗ್ಗಿ ನಟಿಸಲು ಮುಂದಾಗಿದ್ದಾರೆ. ಹಿಂದಿ ಚಿತ್ರಕ್ಕೆ ಹಿಂತಿರುಗಲು ಪ್ರಿಯಾಂಕಾ ಆಯ್ಕೆ ಮಾಡಿಕೊಂಡಿರುವ ಸಿನಿಮಾ ಅಲಿ ಅಬ್ಬಾಸ್ ಖಾನ್ ಅವರ 'ಭಾರತ್' ಸಿನಿಮಾ.

ಈ ಚಿತ್ರದ ಇನ್ನೊಂದು ವಿಶೇಷ ಅಂದ್ರೆ 'ಭಾರತ್' ಚಿತ್ರದ ನಾಯಕ ಸೂಪರ್ ಸ್ಟಾರ್ ಸಲ್ಮಾನ್ ಖಾನ್. ಈ ಮೂಲಕ ಸುಮಾರು 10 ವರ್ಷಗಳ ನಂತರ ಸಲ್ಮಾನ್ ಜೊತೆಯಲ್ಲಿ ಸಿನಿಮಾ ಮಾಡ್ತಿದ್ದಾರೆ ಕ್ವಾಂಟಿಕೋ ಸುಂದರಿ.

2004ರ 'ಮುಜೇ ಶಾದಿ ಕರೋಗಿ', 2007ರ 'ಸಲೀಮ್ ಈ ಇಷ್ಕ್', 2008ರ 'ಗಾಡ್ ತುಸಿ ಗ್ರೇಟ್ ಹೋ' ಚಿತ್ರಗಳಲ್ಲಿ ಸಲ್ಮಾನ್ ಖಾನ್ ಜೊತೆಯಲ್ಲಿ ಪ್ರಿಯಾಂಕಾ ಅಭಿನಯಿಸಿದ್ದರು. ಇದೀಗ, 10 ವರ್ಷಗಳ ನಂತರ 'ಭಾರತ್' ಚಿತ್ರದಲ್ಲಿ ಮತ್ತೆ ಒಂದಾಗಿ ನಟಿಸುತ್ತಿದೆ ಈ ಜೋಡಿ.

Priyanka Chopra to romance Salman Khan after 10 years

ಈಗಾಗಲೇ ಕಥೆ ಕೇಳಿರುವ ಪ್ರಿಯಾಂಕಾ ಚೋಪ್ರಾ, 'ಭಾರತ್' ಸಿನಿಮಾದಲ್ಲಿ ಅಭಿನಯಿಸಲು ಕಾತುರರಾಗಿದ್ದಾರಂತೆ. ಜೊತೆ ಸಲ್ಲು ಜೊತೆ ಮತ್ತೆ ತೆರೆ ಹಂಚಿಕೊಳ್ಳುತ್ತಿರುವುದು ಮತ್ತಷ್ಟು ಖುಷಿ ನೀಡಿದೆಯಂತೆ. ಸದ್ಯ, ಹಾಲಿವುಡ್ ಸಿನಿಮಾಗಾಗಿ ಲಂಡನ್ ನಲ್ಲಿರುವ ಪಿಗ್ಗಿ ಆದಷ್ಟು ಬೇಗ ಭಾರತಕ್ಕೆ ಬರಲಿದ್ದಾರೆ.

ಅಂದ್ಹಾಗೆ, 'ಭಾರತ್' ಸಿನಿಮಾ ಐತಿಹಾಸಿಕ ಚಿತ್ರವಾಗಿದ್ದು, 1947ರಲ್ಲಿ ಆರಂಭವಾಗಿ 2000ನೇ ಇಸವಿಯಲ್ಲಿ ಅಂತ್ಯವಾಗುವಂತಹ ಕಥೆ ಮಾಡಿದ್ದಾರಂತೆ ನಿರ್ದೇಶಕರು. ಇದು ದೇಶ ಮತ್ತು ವ್ಯಕ್ತಿಯ ಜರ್ನಿ ಹೊಂದಿರುವ ಕಥೆ. ಸಲ್ಮಾನ್ ಖಾನ್ ಚಿತ್ರದಲ್ಲಿ ಒಟ್ಟು 5 ಗೆಟಪ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ, ಚಿತ್ರೀಕರಣ ಆರಂಭಿಸಿರುವ 'ಭಾರತ್' 2019 ರ ಈದ್ ಹಬ್ಬಕ್ಕೆ ತೆರೆಮೇಲೆ ಬರುವ ತಯಾರಿಯಲ್ಲಿದೆ.

English summary
Ali Abbas Zafar's period drama Bharat will feature Priyanka Chopra opposite Salman Khan. The Quantico actress returns to Bollywood screens after 2 year.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X