»   » ನಿಮ್ಗೊತ್ತಾ? ಪಿಗ್ಗಿ ಕೂಡ ಹಲವು ಬಾರಿ ಆತ್ಮಹತ್ಯೆಗೆ ಟ್ರೈ ಮಾಡಿದ್ದರಂತೆ

ನಿಮ್ಗೊತ್ತಾ? ಪಿಗ್ಗಿ ಕೂಡ ಹಲವು ಬಾರಿ ಆತ್ಮಹತ್ಯೆಗೆ ಟ್ರೈ ಮಾಡಿದ್ದರಂತೆ

Posted By: ಸೋನು ಗೌಡ
Subscribe to Filmibeat Kannada

ಹಿಂದಿ ಕಿರುತೆರೆ ಕ್ಷೇತ್ರದ ನಟಿ ಪ್ರತ್ಯೂಷ ಬ್ಯಾನರ್ಜಿ ಅವರ ಆತ್ಮಹತ್ಯೆಯ ಸುದ್ದಿಯಾದ ಬೆನ್ನಲ್ಲೇ ಮಾಜಿ ವಿಶ್ವಸುಂದರಿ ನಟಿ ಪ್ರಿಯಾಂಕ ಚೋಪ್ರಾ ಅವರ ಎಕ್ಸ್ ಮ್ಯಾನೇಜರ್ ಒಂದು ಸ್ಫೋಟಕ ಸುದ್ದಿಯೊಂದನ್ನು ಹೊರ ಹಾಕಿದ್ದಾರೆ.

ಹೌದು ಬಾಲಿವುಡ್ ನ ಕ್ಯೂಟ್ ನಟಿ ಪ್ರಿಯಾಂಕ ಚೋಪ್ರಾ ಅವರ ಎಕ್ಸ್ ಮ್ಯಾನೇಜರ್ ಪ್ರಕಾಶ್ ಜಾಜು ಅವರು ಹೊರ ಹಾಕಿರುವ ಸುದ್ದಿ ಏನಪ್ಪಾ ಅಂದ್ರೆ ಸದ್ಯಕ್ಕೆ ಬಾಲಿವುಡ್ ಸೇರಿದಂತೆ ಹಾಲಿವುಡ್ ಕ್ಷೇತ್ರದಲ್ಲೂ ಸಕ್ರೀಯರಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ನಟಿ ಪಿಗ್ಗಿ ಅವರು ಕೂಡ ಎರಡು-ಮೂರು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿ ಪ್ರಾಣಾಪಾಯದಿಂದ ಪಾರಾಗಿದ್ದಾರಂತೆ.[ಕಿರುತೆರೆ ನಟಿ ಪ್ರತ್ಯೂಷ ಸಾವಿನ ಬಗ್ಗೆ ರಾಖಿ ಸಾವಂತ್ ಹೇಳಿದ್ದೇನು?]

Priyanka Chopra Tried To Commit SUICIDE Twice, Says Ex-Manager

''ತುಂಬಾ ಗಟ್ಟಿಗಿತ್ತಿ ಆಗಿರುವ ನಟಿ ಪ್ರಿಯಾಂಕ ಚೋಪ್ರಾ ಅವರು ಕೂಡ ಮಾನಸಿಕವಾಗಿ ತುಂಬಾ ದುರ್ಬಲರಾಗಿದ್ದರು. ಪದೇ ಪದೇ ತಮ್ಮ ಎಕ್ಸ್ ಬಾಯ್ ಫ್ರೆಂಡ್ ಆಸೀಮ್ ಮರ್ಚೆಂಟ್ ಜೊತೆ ಜಗಳ ಮಾಡುತ್ತಿದ್ದರು. ಆದಾದ ನಂತರ ಮಧ್ಯರಾತ್ರಿ ನನಗೆ ಅಳುತ್ತಾ ಫೋನ್ ಮಾಡುತ್ತಿದ್ದರು. ಆ ವೇಳೆ ಪ್ರಿಯಾಂಕ ಮೇಡಂಗೆ ನಾನು ಸಮಾಧಾನ ಮಾಡುತ್ತಿದ್ದೆ'' ಎಂದು ಟ್ವೀಟ್ ಮೂಲಕ ಮ್ಯಾನೇಜರ್ ಪ್ರಕಾಶ್ ಜಾಜು ಹೇಳಿಕೊಂಡಿದ್ದಾರೆ.['ಆಸ್ಕರ್ ಪ್ರಶಸ್ತಿ'ಯಲ್ಲಿ ಮಿಂಚಲು ಪಿಗ್ಗಿ ಮಾಡಿದ ಖರ್ಚೆಷ್ಟು?]

'ಒಂದು ಬಾರಿ ಪ್ರಿಯಾಂಕ ಚೋಪ್ರಾ ಅವರು ಸುಮಾರು 18-19ನೇ ವಯಸ್ಸಿನಲ್ಲಿರುವಾಗ ಆಸೀಮ್ ಅವರ ಜೊತೆ ಜಗಳ ಮಾಡಿಕೊಂಡು ಮುಂಬಯಿನ ವಾಸಾಯಿ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದರು. ಆ ವೇಳೆ ಪ್ರಕಾಶ್ ಅವರೇ ಸಮಾಧಾನ ಮಾಡಿ ಮನವೊಲಿಸಿ ವಾಪಸ್ ಕರೆತಂದಿದ್ದರಂತೆ.

ತದನಂತರ 2002ರಲ್ಲಿ ಆಸೀಮ್ ಮರ್ಚೆಂಟ್ ಅವರ ತಾಯಿ ತೀರಿಕೊಂಡಾಗಲೂ ಎತ್ತರದ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆಗೆ ಪ್ರಯತ್ಮಪಟ್ಟಿದ್ದರು. ಆಸೀಮ್ ಅವರ ತಾಯಿಯನ್ನು ಪಿಗ್ಗಿ ಅತಿಯಾಗಿ ಹಚ್ಚಿಕೊಂಡಿದ್ದರು' ಎಂದು ಪ್ರಕಾಶ್ ಸರಣಿ ಟ್ವೀಟ್ ಮಾಡಿದ್ದಾರೆ.[ಸದ್ಯದಲ್ಲೇ ಹಸೆಮಣೆ ಏರ್ತಾರಂತೆ ಪ್ರಿಯಾಂಕ ಚೋಪ್ರಾ]

ಈ ಹಿಂದೆ ನಟಿ ಪ್ರಿಯಾಂಕ ಚೋಪ್ರಾ ಅವರ ಮಾನೇಜರ್ ಆಗಿದ್ದ ಪ್ರಕಾಶ್ ಜಾಜು ಅವರನ್ನು ಕಾರಣಾಂತರಗಳಿಂದ ಮ್ಯಾನೇಜರ್ ಪೋಸ್ಟ್ ನಿಂದ ತೆಗೆದು ಹಾಕಲಾಗಿತ್ತು.[ಜಿಯಾಖಾನ್ ಸಾವಿನ ಪ್ರಕರಣ ಎಫ್ ಬಿಐ ತನಿಖೆಗೆ?]

ಪಿಗ್ಗಿ ಆತ್ಮಹತ್ಯೆ ಪ್ರಯತ್ನದ ಬಗ್ಗೆ ಮ್ಯಾನೇಜರ್ ಪ್ರಕಾಶ್ ಜಾಜು ಮಾಡಿರುವ ಸರಣಿ ಟ್ವೀಟ್ ಗಳನ್ನು ನೋಡಲು ಕೆಳಗಿನ ಸ್ಲೈಡ್ಸ್ ಗಳನ್ನು ಒಂದೊಂದಾಗಿ ಕ್ಲಿಕ್ ಮಾಡುತ್ತಾ ಹೋಗಿ...

-
-
-
-
-
-
-
-
-
-
-
-
-
-
-
-
-
-
-
English summary
Bollywood Actress Priyanka Chopra's ex manager Prakash Jaju claims that even Priyanka Chopra tried to commit suicide when her career was going down.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada