Don't Miss!
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Automobiles
ಭಾರತದಲ್ಲಿ ಮೊದಲ ಬಾರಿಗೆ 2.5 ಕೋಟಿ ಕಾರುಗಳ ಮಾರಾಟ ಮೈಲಿಗಲ್ಲು ಸಾಧಿಸಿದ ಜನಪ್ರಿಯ ಕಂಪನಿ
- Sports
IND vs NZ: 2ನೇ ಟಿ20 ಪಂದ್ಯದಲ್ಲಿ ಕಳಪೆ ಪಿಚ್ ನಿರ್ಮಾಣ; ಲಕ್ನೋ ಪಿಚ್ ಕ್ಯುರೇಟರ್ ವಜಾ
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- News
ಯೂಟ್ಯೂಬ್ ನೋಡಿ ಕಳ್ಳತನ ಕಲಿತ ಜೋಡಿ: ಶಶಿಕಲಾ ಜೊಲ್ಲೆ ಮಾಲೀಕತ್ವದ ಬ್ಯಾಂಕ್ಗೆ ಕನ್ನ
- Technology
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪಂಜಾಬಿನ ವಿವಾದಾತ್ಮಕ ಗಾಯಕ, ಕಾಂಗ್ರೆಸ್ ಮುಖಂಡ ಸಿಧು ಮೂಸೆ ವಾಲಾಗೆ ಗುಂಡಿಕ್ಕಿ ಹತ್ಯೆ!
ಪಂಜಾಬಿನ ವಿವಾದಾತ್ಮಕ ಗಾಯಕ ಹಾಗೂ ಕಾಂಗ್ರೆಸ್ ಪಕ್ಷದ ನಾಯಕ ಸಿಧು ಮೂಸೆ ವಾಲಾ ಅವರ ಹತ್ಯೆಯಾಗಿದೆ. ಭಾನುವಾರ ( ಮೇ 29) ಮಾನ್ಸಾ ಜಿಲ್ಲೆಯಲ್ಲಿ ಜವಹಾರ್ಕೆ ಗ್ರಾಮದಲ್ಲಿ ಸಿಧು ಮೇಲೆ ಗುಂಡಿನ ದಾಳಿ ಮಾಡಿ ಹತ್ಯೆ ಮಾಡಲಾಗಿದೆ. ಸಿಧು ಮೂಸೆ ವಾಲಾ ಈ ದಾಳಿಯಲ್ಲಿ ಮೃತಪಟ್ಟಿದ್ದರೆ, ಇನ್ನಿಬ್ಬರು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಪಂಜಾಬ್‌ನ ಮುಖ್ಯಮಂತ್ರಿ ಭಗವಂತ್ ಮಾನ್ ಇತ್ತೀಚೆಗೆ ಸುಮಾರು 424 ಮಂದಿಗೆ ನೀಡಿದ್ದ ಭದ್ರತೆಯನ್ನು ಹಿಂಪಡೆದಿದ್ದರು. ಇದರಲ್ಲಿ ಸಿಧು ಮೂಸೆ ವಾಲಾ ಕೂಡ ಸೇರಿದ್ದರು. ಭದ್ರತೆಯನ್ನು ಹಿಂಪಡೆದ ಕೇವಲ ಒಂದು ದಿನದ ಬಳಿಕ ಸಿಧು ಮೂಸೆ ವಾಲಾರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ನಟ,
ಹೋರಾಟಗಾರ
ದೀಪ್
ಸಿಧು
ಅಪಘಾತದಲ್ಲಿ
ನಿಧನ

ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮೂಸೆ ವಾಲಾ
ಪಂಜಾಬಿನ ಜನಪ್ರಿಯ ಗಾಯಕ ಸಿಧು ಮೂಸೆ ವಾಲಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಸಿಧು ಮೂಸೆ ವಾಲಾ ಕಾಂಗ್ರೆಸ್ ಪಕ್ಷ ಮನ್ಸಾ ಜಿಲ್ಲೆಯಿಂದ ಟಿಕೆಟ್ ನೀಡಿತ್ತು. ಆದರೆ, ವಿಧಾನ ಸಭಾ ಚುನಾವಣೆಯಲ್ಲಿ ಎಎಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಡಾ. ವಿಜಯ್ ಸಿಂಗ್ಲಾ ವಿರುದ್ಧ ಸೋಲುಂಡಿದ್ದರು. ಸಿಧು ಮೂಸೆ ವಾಲಾ ಹಾಗೂ ಡಾ ವಿಜಯ್ ಸಿಂಗ್ಲಾ ನಡುವೆ 63,323 ವೋಟ್ ಅಂತರದಿಂದ ಸೋತಿದ್ದರು. ಸಿಧು ಮೂಸೆ ವಾಲಾಗೆ ಕಾಂಗ್ರೆಸ್ ಟಿಕೆಟ್ ನೀಡುತ್ತಿದ್ದಂತೆ ಪಕ್ಷದಲ್ಲೇ ವಿರೋಧ ವ್ಯಕ್ತವಾಗಿತ್ತು. ಮಾನ್ಸದ ಶಾಸಕರಾಗಿದ್ದ ನಜರ್ ಸಿಂಗ್ ಕಾಂಗ್ರೆಸ್ ಪಕ್ಷದ ನಡೆ ಹಾಗೂ ಸಿಧು ಮೂಸೆ ವಾಲಾರನ್ನು ವಿರೋಧಿಸಿ ಬಂಡಾಯವೆದ್ದಿದ್ದರು.

ಸಿಧು ಮೂಸೆ ವಾಲ ಹಿನ್ನೆಲೆಯೇನು?
ಸಿಧು ಮೂಸೆ ವಾಲಾನ ಅಸಲಿ ಹೆಸರು ಶುಭದೀಪ್ ಸಿಂಗ್ ಸಿಧು. ಗಾಯಕರಾಗಿ ಗುರುತಿಸಿಕೊಂಡಿದ್ದರಿಂದ ಇವರ ಹೆಸರನ್ನು ಸಿಧು ಮೂಸೆ ವಾಲಾ ಎಂದು ಬದಲಾಯಿಸಿಕೊಂಡಿದ್ದರು. ಸಿಧು ಮಾನ್ಸ ಜಿಲ್ಲೆಯ ಮೂಸೆ ವಾಲಾ ಗ್ರಾಮದವರಾಗಿದ್ದು, ತಮ್ಮ ಸಂಗೀತದಿಂದಲೇ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಸಿಧು ಮೂಲೆ ವಾಲಾ ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದರು. ಕಾಲೇಜಿನಲ್ಲಿ ಓದುವಾಗಲೇ ಸಿಧು ಸಂಗೀತ ಕಲಿತಿದ್ದರು. ಬಳಿಕ ಕೆನಾಡಗೆ ಶಿಫ್ಟ್ ಆಗಿದ್ದರು. ಸಿಧು ಮೂಸೆ ವಾಲಾ ಪಂಜಾಬಿನ ವಿವಾದಾತ್ಮಕ ಗಾಯಕರಲ್ಲಿ ಒಬ್ಬರು. ತಮ್ಮ ಹಾಡುಗಳಲ್ಲಿ ಬಂದೂಕಿನ ಸಂಸ್ಕೃತಿಯನ್ನು ವೈಭವೀಕರಿಸುತ್ತಿದ್ದರು ಎಂಬ ಆರೋಪ ಇವರ ಮೇಲಿದೆ.

ಸಿಧು ವಿವಾದಾತ್ಮಕ ಹಾಡುಗಳು
2019 ಸೆಪ್ಟೆಂಬರ್‌ನಲ್ಲಿ ಸಿಧು ಮೂಸೆ ವಾಲಾ 'ಜಟ್ಟಿ ಜಿಯೊನಾಯ್ ಮೊರ್ಹ್ ದಿ ಬಂದೂಕ್ ವರ್ಗಿ' ಎಂಬ ಸಾಂಗ್ ಅನ್ನು ರಿಲೀಸ್ ಮಾಡಿದ್ದರು. ಈ ಹಾಡು ವಿವಾದಕ್ಕೆ ಸಿಲುಕಿತ್ತು. ಪಂಜಾಬಿನ 18ನೇ ಶತಮಾನದ ಸಿಕ್ ಯೋಧ ಮಾಯ್ ಭಾಗೊ ಮೇಲೆ ಈ ಹಾಡನ್ನು ಕಂಪೋಸ್ ಮಾಡಲಾಗಿತ್ತು. ಸಿಕ್ ಯೋಧವನ್ನು ಅವಹೇಳನಕಾರಿಯಾಗಿ ತೋರಿದ್ದರು ಎಂದು ವಿವಾದ ಏರ್ಪಟ್ಟಿತ್ತು. ಬಳಿಕ ಸಿಧು ಮೂಸೆ ವಾಲಾ ಕ್ಷಮೆ ಕೇಳಿದ್ದರು.

FIR ಬುಕ್ ಮಾಡಲು ಒತ್ತಡ
ಭದ್ರತೆಯನ್ನು ಹಿಂಪಡೆದಿದ್ದಕ್ಕೆ ಬಿಜೆಪಿ ಮುಖಂಡ ಮಂಜಿಂದರ್ ಸಿಂಗ್ ಸಿರ್ಸಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹತ್ಯೆಗೆ ಪಂಜಾಬ್ ನೂತನ ಸಿಎಂ ಭಗವಂತ್ ಮನ್ ಕಾರಣ. ಸಿಧು ಮೂಸೆ ವಾಲಾ ಭ್ರದತೆಯನ್ನು ಹಿಂಪಡೆದಿದ್ದರಿಂದಲೇ ಈ ಹತ್ಯೆ ನಡೆದಿದ್ದು, ಪಂಜಾಬ್ ಸಿಎಂ ಹಾಗೂ ಅರವಿಂದ್ ಕೇಜ್ರಿವಾಲ ವಿರುದ್ಧ FIR ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.