»   » ಧೋನಿ ಬಗ್ಗೆ ಪ್ರಶ್ನಿಸಿದ್ದಕ್ಕೆ ನಟಿ ಲಕ್ಷ್ಮಿ ರೈ ಹೀಗೆ ಹೇಳೋದಾ.?

ಧೋನಿ ಬಗ್ಗೆ ಪ್ರಶ್ನಿಸಿದ್ದಕ್ಕೆ ನಟಿ ಲಕ್ಷ್ಮಿ ರೈ ಹೀಗೆ ಹೇಳೋದಾ.?

Posted By:
Subscribe to Filmibeat Kannada

ದಕ್ಷಿಣ ಭಾರತದ ಖ್ಯಾತ ನಟಿ ಲಕ್ಷ್ಮಿ ರೈ ಬಾಲಿವುಡ್ ನಲ್ಲಿ ಹೆಚ್ಚು ಸುದ್ದಿಯಲ್ಲಿದ್ದಾರೆ. 'ಜ್ಯೂಲಿ-2' ಚಿತ್ರದಲ್ಲಿ ನಾಯಕಿ ಆಗಿ ಅಭಿನಯಿಸಿರುವ ಲಕ್ಷ್ಮಿ ರೈ ಬಿಟೌನ್ ನಲ್ಲಿ ಈಗ ಹಾಟ್ ಟಾಪಿಕ್.

'ಜ್ಯೂಲಿ-2' ಬಾಲಿವುಡ್ ನಲ್ಲಿ ಲಕ್ಷ್ಮಿಗೆ ಚೊಚ್ಚಲ ಸಿನಿಮಾ. ಆದ್ರೆ, ಲಕ್ಷ್ಮಿ ರೈ ಪರಿಚಯ ಬಾಲಿವುಡ್ ಗೆ ಇದಕ್ಕು ಮೊದಲೇ ಇದೆ. ಅದಕ್ಕೆ ಕಾರಣ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ.

ಹೌದು, ಧೋನಿ ಮತ್ತು ಲಕ್ಷ್ಮಿ ರೈ ನಡುವೆ ಪ್ರೇಮಾಂಕುರವಾಗಿತ್ತು. ಇವರಿಬ್ಬರ ಮಧ್ಯೆ ಸಂಥಿಂಗ್ ಇತ್ತು ಎನ್ನಲಾಗಿತ್ತು. ಆದ್ರೆ, ಅದ್ಯಾಕೋ ಆಮೇಲೆ ಇವರಿಬ್ಬರು ''ನಾನೊಂದು ತೀರಾ, ನೀನೊಂದು ತೀರಾ'' ಆಗ್ಬಿಟ್ರು. ಈಗ ಧೋನಿ ಬಗ್ಗೆ ಮಾತನಾಡಿ ಮತ್ತೆ ಸುದ್ದಿಯಾಗಿದ್ದಾಳೆ ಲಕ್ಷ್ಮಿ ರೈ. ಹಾಗಿದ್ರೆ, ಧೋನಿ ಬಗ್ಗೆ ಲಕ್ಷ್ಮಿ ಏನಂದ್ರು? ಮುಂದೆ ಓದಿ......

'ಧೋನಿ ಯಾರು'? ಎಂದು ಕೇಳಿದ ಲಕ್ಷ್ಮಿ

'ಜ್ಯೂಲಿ 2' ಚಿತ್ರದ ಪ್ರಮೋಷನ್ ವೇಳೆ ಪತ್ರಕರ್ತರೊಬ್ಬರು ಲಕ್ಷ್ಮಿ ರೈಗೆ ''ನಿಮ್ಮ ಮತ್ತು ಧೋನಿ ಅವರ ಸಂಬಂಧ ಈಗ ಹೇಗಿದೆ'' ಎಂದು ಕೇಳಿದರು. ಇದಕ್ಕೆ ಉತ್ತರ ಕೊಟ್ಟ ಲಕ್ಷ್ಮಿ 'ಧೋನಿ ಯಾರು' ಎಂದು ಕೇಳಿ? ಎಲ್ಲರಿಗೂ ಆಶ್ಚರ್ಯ ಉಂಟುಮಾಡಿದರು.

'ಜ್ಯೂಲಿ'ಯ ಬಿಕಿನಿ ಮೈಮಾಟಕ್ಕೆ 'ವಾಹ್' ಎನ್ನುತ್ತಿರುವ ಚಿತ್ರಜಗತ್ತು

ಇಲ್ಲಿಗೆ ಎಲ್ಲ ಮುಗಿದ ಅಧ್ಯಾಯ

ನಂತರ ಧೋನಿ ಬಗ್ಗೆ ಮಾತನಾಡಿದ ಲಕ್ಷ್ಮಿ ''ಇದು ಇಲ್ಲಿಗೆ ಮುಗಿಯಬೇಕು. ಅದೆಲ್ಲ ಮುಗಿದು ವರ್ಷಗಳೆ ಕಳೆದಿವೆ. ಸದ್ಯ ಅವರು ಸಂತೋಷದಿಂದಲೇ ಮದುವೆಯಾಗಿದ್ದಾರೆ, ಜತೆಗೆ ಮಕ್ಕಳು ಇದ್ದಾರೆ'' ಎಂದು ಧೋನಿ ಜೊತೆಗಿನ ಸಂಬಂಧಕ್ಕೆ ಅಂತ್ಯವಾಡಿದರು.

ಧೋನಿ ಮೇಲೆ ನನಗೆ ಗೌರವ ಇದೆ

ಕೆಲವರು ಹೀಗೆ, ಸ್ವಲ್ಪ ಸಲಿಗೆಯಿಂದ ಇದ್ದರೇ ಸಾಕು ಅವರು ಲವ್ ಮಾಡ್ತಿದ್ದಾರೆ, ಮದ್ವೆ ಆಗ್ತಾರೆ ಎಂದುಕೊಳ್ಳುತ್ತಾರೆ. ಈ ಬಗ್ಗೆ ನನಗೆ ಮಾತನಾಡಲು ಇಷ್ಟವಿಲ್ಲ. ಯಾಕಂದ್ರೆ ಧೋನಿ ಅವರ ಮೇಲೆ ನನಗೆ ಗೌರವಿದೆ'' ಎಂದು ಪುಲ್ ಸ್ಟಾಪ್ ಇಟ್ಟರು.

ಹೊಸ ಬಾಯ್ ಫ್ರೆಂಡ್ ಇದ್ದಾರಂತೆ!

ಇನ್ನು ನಟಿ ಲಕ್ಷ್ಮಿ ರೈ ನೃತ್ಯ ಸಂಯೋಜಕ ಮತ್ತು ನಟ ವೀರ್ ಆರ್ಯನ್ ಅವರ ಜೊತೆ ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗಿದೆ.

'ಜ್ಯೂಲಿ-2' ಯಾವಾಗ ಬಿಡುಗಡೆ

ದೀಪಕ್‌ ಶಿವದಾಸನಿ ನಿರ್ದೇಶನದ ಈ ಚಿತ್ರದಲ್ಲಿ ಲಕ್ಷ್ಮಿ ರೈ ಜತೆಗೆ ರತಿ ಅಗ್ನಿಹೋತ್ರಿ, ಸಾಹಿಲ್, ಅದಿತ್ಯಾ ಶ್ರೀವಾತ್ಸವ ನಟಿಸಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ನಿರ್ಮಾಣವಾಗುತ್ತಿರುವ ಈ ಚಿತ್ರದ ಅಕ್ಟೋಬರ್ 6 ರಂದು ಬೆಳ್ಳಿತೆರೆಯ ಮೇಲೆ ಬರಲಿದೆ.

English summary
While actor Raai Laxmi is hitting headlines with her upcoming flick, Julie 2, here's what she has to say about her earlier break-up with Mahendra Singh Dhoni.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X