Don't Miss!
- Sports
ಗ್ಲೆನ್ ಮ್ಯಾಕ್ಸ್ವೆಲ್ ಕೈಯಿಂದ ಆರೆಂಜ್ ಕ್ಯಾಪ್ ಕಸಿದುಕೊಂಡ ಧವನ್
- News
ಉತ್ತರ ಪ್ರದೇಶ ಕೊರೊನಾ ದಾಖಲೆ; ಭಾನುವಾರ ಲಾಕ್ಡೌನ್!
- Finance
ಕೊರೊನಾವೈರಸ್ ಎರಡನೇ ಅಲೆ: ಆರ್ಥಿಕ ಅನಿಶ್ಚಿತತೆಗೆ ಕಾರಣವಾಗಬಹುದು!
- Automobiles
ಆಫ್ಟರ್ ಮಾರ್ಕೆಟ್ ಬಾಡಿ ಕಿಟ್ನೊಂದಿಗೆ ಅಡ್ವೆಂಚರ್ ಬೈಕಿನಂತೆ ಮಾಡಿಫೈಗೊಂಡ ಮಹೀಂದ್ರಾ ಮೊಜೊ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿಫಲ ಹೇಗಿದೆ?
- Education
Ninasam Diploma Admission 2020-21: ಮೇ ತಿಂಗಳಲ್ಲಿ ನೀನಾಸಂ ಡಿಪ್ಲೋಮಾ ಪ್ರವೇಶಾತಿ ಆರಂಭ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕಾಲಿಗೆ ಕಚಗುಳಿ ಕೊಟ್ಟ ದಕ್ಷಿಣದ ಖ್ಯಾತ ನಟನ ಕಪಾಳಕ್ಕೆ ಹೊಡೆದ ರಾಧಿಕಾ!
ಯಾರಿಗೂ ಹೆದರದೆ, ಅವಕಾಶಗಳಿಗಾಗಿ ಅಂಜದೆ, ಯಾವ ಸ್ಟಾರ್ ಗೂ ಕೇರ್ ಮಾಡದೆ, ನಡೆದಿರುವ ಘಟನೆಗಳ ಕುರಿತು ನೇರವಾಗಿ ಹೇಳುವುದರಲ್ಲಿ ನಟಿ ರಾಧಿಕಾ ಆಪ್ಟೆ ಸದಾ ಮುಂದು. ಚಿತ್ರರಂಗದಲ್ಲಿ ಇರುವ ಲೈಂಗಿಕ ಕಿರುಕುಳದ ಬಗ್ಗೆ ಸ್ಫೋಟಕ ಮಾಹಿತಿ ನೀಡಿದ್ದ ನಟಿಯರ ಪೈಕಿ ರಾಧಿಕಾ ಆಪ್ಟೆ ಕೂಡ ಒಬ್ಬರು.
''ನಾವೊಂದು ಬಾಲಿವುಡ್ ಸಿನಿಮಾ ಮಾಡುತ್ತಿದ್ದೇವೆ. ನಾನು ನಿರ್ದೇಶಕರನ್ನು ಪರಿಚಯ ಮಾಡಿಸುತ್ತೇನೆ. ನಿಮಗೆ ಅವರ ಜೊತೆಗೆ ಹಾಸಿಗೆ ಹಂಚಿಕೊಳ್ಳಲು ಏನೂ ಅಭ್ಯಂತರ ಇಲ್ಲ ತಾನೆ'' ಎಂದು ಬಾಲಿವುಡ್ ನಿರ್ಮಾಪಕರೊಬ್ಬರು ರಾಧಿಕಾ ಆಪ್ಟೆ ಬಳಿ ಕೇಳಿದ್ದರಂತೆ. ಈ ಘಟನೆಯನ್ನ ನೆನೆಯುತ್ತಾ ಮಾಧ್ಯಮಗಳ ಮುಂದೆ ಒಮ್ಮೆ ರಾಧಿಕಾ ಆಪ್ಟೆ ಕಿಡಿಕಾರಿದ್ದರು.
ಇದೀಗ ಇಂಥದ್ದೇ ವಿಷಯಕ್ಕೆ ಮತ್ತೊಮ್ಮೆ ರಾಧಿಕಾ ಆಪ್ಟೆ ಸದ್ದು ಮಾಡಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಟರೊಬ್ಬರು ರಾಧಿಕಾ ಆಪ್ಟೆ ಬಳಿ ಅಸಭ್ಯವಾಗಿ ನಡೆದುಕೊಂಡಿದ್ದರಂತೆ. 'ಆ' ನಟನ ವರ್ತನೆ ಬಗ್ಗೆ ರಾಧಿಕಾ ಇದೀಗ ಬಾಯ್ಬಿಟ್ಟಿದ್ದಾರೆ. ಸಂಪೂರ್ಣ ವರದಿ ಇಲ್ಲಿದೆ ಓದಿರಿ...

ಚಿತ್ರೀಕರಣದ ಮೊದಲ ದಿನ ಆಗಿದ್ದೇನು.?
''ಅಂದು ದಕ್ಷಿಣ ಭಾರತ ಚಿತ್ರವೊಂದರ ಚಿತ್ರೀಕರಣದಲ್ಲಿ ನನ್ನ ಮೊದಲ ದಿನ. ಅಲ್ಲಿ ನನಗೆ ಯಾರೂ ಪರಿಚಯ ಇರಲಿಲ್ಲ. ದಕ್ಷಿಣದ ಪ್ರಖ್ಯಾತ ನಟರೊಬ್ಬರು, ನನ್ನ ಕಾಲಿಗೆ ಕಚಗುಳಿ ಇಡಲು ಶುರು ಮಾಡಿದರು. ನನಗೆ ಶಾಕ್ ಆಯ್ತು. ನಾನು ಅವರನ್ನ ಈ ಹಿಂದೆ ಭೇಟಿ ಆಗಿರಲಿಲ್ಲ. ಅವರು ತೋರಿದ ವರ್ತನೆಯಿಂದಾಗಿ ನಾನು ಅವರ ಕಪಾಳಕ್ಕೆ ಹೊಡೆದೆ'' ಎಂದು ರಾಧಿಕಾ ಆಪ್ಟೆ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
'ಕ್ಯಾಸ್ಟಿಂಗ್ ಕೌಚ್' ಭೂತ ರಾಧಿಕಾ ಆಪ್ಟೆ ಅವರನ್ನೂ ಬಿಟ್ಟಿಲ್ಲಾ

ಯಾರು 'ಆ' ನಟ.?
''ದಕ್ಷಿಣದ ಪ್ರಖ್ಯಾತ ನಟ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದರು. ನಾನು ಅವರ ಕಪಾಳಕ್ಕೆ ಹೊಡೆದೆ'' ಎಂದು ರಾಧಿಕಾ ಆಪ್ಟೆ ಹೇಳಿದ್ದಾರೆ ಹೊರತು, 'ಆ' ಪ್ರಖ್ಯಾತ ನಟ ಯಾರು ಎಂಬ ಗುಟ್ಟನ್ನ ರಾಧಿಕಾ ಆಪ್ಟೆ ಬಿಟ್ಟುಕೊಟ್ಟಿಲ್ಲ.
ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ರಾಧಿಕಾ ಆಪ್ಟೆ.!

ಪದೇ ಪದೇ ಫೋನ್ ಮಾಡುತ್ತಿದ್ದರು.!
''ನಾನು ತಂಗಿದ್ದ ರೂಮ್ ಗೆ ದಕ್ಷಿಣದ ಪ್ರಖ್ಯಾತ ನಟ ಪದೇ ಪದೇ ಫೋನ್ ಮಾಡುತ್ತಿದ್ದ. ತುಂಬಾ ಹತ್ತಿರವಾಗಲು ಪ್ರಯತ್ನಿಸಿದ. ಅವರೊಂದಿಗೆ ನಾನು ಒರಟಾಗಿ ನಡೆದುಕೊಂಡಿದ್ದೆ'' ಎಂದು ಕೆಲವು ದಿನಗಳ ಹಿಂದೆ ರಾಧಿಕಾ ಆಪ್ಟೆ ಬಾಯ್ಬಿಟ್ಟಿದ್ದರು. ಅಂದು ಕೂಡ 'ಆ' ನಟ ಯಾರು ಅಂತ ರಾಧಿಕಾ ಬಾಯಿ ಬಿಟ್ಟಿರಲಿಲ್ಲ.

ದಕ್ಷಿಣದಲ್ಲಿ ರಾಧಿಕಾ ಆಪ್ಟೆ ನಟಿಸಿರುವ ಸಿನಿಮಾಗಳು ಯಾವುವು.?
ತೆಲುಗಿನಲ್ಲಿ 'ರಕ್ತ ಚರಿತ್ರ', 'ಲೆಜೆಂಡ್', 'ಧೋನಿ', ತಮಿಳಿನಲ್ಲಿ 'ಧೋನಿ', 'ಆಲ್ ಇನ್ ಆಲ್ ಅಳಗು ರಾಜಾ', 'ವೇಟ್ರಿ ಸೆಲ್ವನ್' ಹಾಗೂ 'ಕಬಾಲಿ' ಸಿನಿಮಾಗಳಲ್ಲಿ ರಾಧಿಕಾ ಆಪ್ಟೆ ನಟಿಸಿದ್ದಾರೆ. ಈ ಸಿನಿಮಾಗಳಲ್ಲಿ ಅಭಿನಯಿಸಿರುವ ಸ್ಟಾರ್ ನಟರ ಪೈಕಿ ರಾಧಿಕಾ ಆಪ್ಟೆ ಜೊತೆಗೆ ಅಸಭ್ಯವಾಗಿ ವರ್ತಿಸಿದವರು ಯಾರು ಎಂಬುದೇ ಸದ್ಯದ ಕುತೂಹಲ.