ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ರಾಧಿಕಾ ಆಪ್ಟೆ.!
ಇತ್ತಿಚೀನ ದಿನಗಳಲ್ಲಿ ಲೈಂಗಿಕ ಕಿರುಕುಳ ಎನ್ನುವುದು ಸಿನಿಮಾ ರಂಗದಲ್ಲಿ ಹೆಚ್ಚು ಸುದ್ದಿಯಾಗುತ್ತಿದೆ. ಅದರಲ್ಲೂ ಸ್ಟಾರ್ ನಟಿಯರು ಎನಿಸಿಕೊಂಡಿರುವ ಕಲಾವಿದರೇ ಇಂತಹ ಸ್ಪೋಟಕ ರಸಹ್ಯವನ್ನ ಬಿಚ್ಚಿಡುತ್ತಿದ್ದಾರೆ.
ಈಗ ಬಹುಭಾಷೆಗಳಲ್ಲಿ ಖ್ಯಾತಿಗಳಿಸಿಕೊಂಡಿರುವ ನಟಿ ರಾಧಿಕಾ ಆಪ್ಟೆ ಸಿನಿಮಾ ಇಂಡಸ್ಟ್ರಿಯಲ್ಲಿ ನಡೆಯುತ್ತಿರುವ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ.
ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಈ ಬಗ್ಗೆ ತಮ್ಮ ಅನುಭವ ಮತ್ತು ಅಭಿಪ್ರಾಯ ಹಂಚಿಕೊಂಡಿರುವ ರಾಧಿಕಾ, ಮಹಿಳೆಯರಷ್ಟೇ ಅಲ್ಲ, ಪುರಷರು ಹೆಚ್ಚು ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂಬ ಬೆಚ್ಚಿಬೀಳಿಸುವ ರಹಸ್ಯವನ್ನ ಹೊರಹಾಕಿದ್ದಾರೆ. ಹಾಗಿದ್ರೆ, ರಾಧಿಕಾ ಆಪ್ಟೆ ಹೇಳಿದ್ದೇನು? ಎಂದು ಮುಂದೆ ಓದಿ.....

ಮಹಿಳೆಯರಷ್ಟೇ ಅಲ್ಲ, ಪುರುಷರು ಒಳಗಾಗಿದ್ದಾರೆ
ಚಿತ್ರರಂಗದಲ್ಲಿ ಕೇವಲ ಮಹಿಳೆಯರಷ್ಟೇ ಅಲ್ಲ, ಪುರುಷರು ಕೂಡ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ. ಪುರುಷರ ಮೇಲೂ ದೌರ್ಜನ್ಯ ಆಗಿದೆ ಎಂಬ ಭಯಾನಕ ಸುದ್ದಿಯನ್ನ ಬಾಲಿವುಡ್ ನಟಿ ರಾಧಿಕಾ ಆಪ್ಟೆ ಹೇಳಿಕೊಂಡಿದ್ದಾರೆ.

ತಮ್ಮ ಗಮನಕ್ಕೆ ಬಂದಿದೆ
''ಕಾಸ್ಟಿಂಗ್ ಕೌಚ್ ಇಲ್ಲಿನ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಎಲ್ಲಾ ರಂಗದಲ್ಲಿಯೂ ಇದೆ. ಆದ್ರೆ, ನಾನು ಬರಿ ಚಿತ್ರರಂಗದಲ್ಲಿರುವ ಕಾಸ್ಟಿಂಗ್ ಕೌಚ್ ಬಗ್ಗೆ ಹೇಳುತ್ತಿದ್ದೇನೆ. ದೌರ್ಜನ್ಯಕ್ಕೊಳಗಾದ ಹಲವರು ನನ್ನ ಬಳಿ ಹೇಳಿಕೊಂಡಿದ್ದಾರೆ'' ಎಂದು ಸಂದರ್ಶನದಲ್ಲಿ ನಟಿ ರಾಧಿಕಾ ಹೇಳಿದ್ದಾರೆ.

ಅಧಿಕಾರ ಇದ್ದರೇ ದೌರ್ಜನ್ಯ ಮಾಡ್ತಾರೆ
''ಅಧಿಕಾರ ಹೊಂದಿರುವ ಒಬ್ಬ ವ್ಯಕ್ತಿ ಮಹಿಳೆಯರನ್ನು ಯಾವ ರೀತಿ ದುರ್ಬಳಕೆ ಮಾಡಿಕೊಳ್ಳುತ್ತಾನೆ ಎನ್ನುವ ಕುರಿತು ಹಲವಾರು ನಟರುಗಳು ಮಾತನಾಡಿಕೊಳ್ಳುತ್ತಿದ್ದಾರೆ ಎಂದು ರಾಧಿಕಾ ತಮ್ಮ ಪರದೆ ಹಿಂದಿನ ಸತ್ಯ ಬಿಚ್ಚಿಟ್ಟಿದ್ದಾರೆ.

ರಾಧಿಕಾ ಆಪ್ಟೆಗೂ ಅನುಭವ ಆಗಿತ್ತು
ಈ ಹಿಂದೆ ನಟಿ ರಾಧಿಕಾ ಆಪ್ಟೆಗೂ ಕಾಸ್ಟಿಂಗ್ ಕೌಚ್ ಎದುರಾಗಿತ್ತು. ಬಾಲಿವುಡ್ ನಿರ್ಮಾಪಕನೊಬ್ಬ ರಾಧಿಕಾ ಅವರನ್ನ ಮಂಚಕ್ಕೆ ಕರೆದಿದ್ದರಂತೆ. ನಂತರ ಆ ನಿರ್ಮಾಪಕನಿಗೆ ಸರಿಯಾಗಿ ಬೈಯ್ದು ಬಂದಿದ್ದರಂತೆ ರಾಧಿಕಾ ಆಪ್ಟೆ.

ಹಾರ್ವೇನ್ ವೈನ್ ಸ್ಟೈನ್ ಹಗರಣ
ಇತ್ತೀಚೆಗೆ ಹಾಲಿವುಡ್ ನಲ್ಲಿ ಹಾರ್ವೇನ್ ವೈನ್ ಸ್ಟೈನ್ ಹಗರಣ ಬೆಳಕಿಗೆ ಬಂದಿತ್ತು. ಈ ಘಟನೆಯ ನಂತರ ಹಲವು ಜನ ಸಿನಿ ಕಲಾವಿದರು ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡುತ್ತಿದ್ದಾರೆ.


Click it and Unblock the Notifications










