»   » ನಟಿ ರಾಖಿ ಸಾವಂತ್ ಕೈಗೆ ಹಸಿಮೆಣಸಿನಕಾಯೇ ಗತಿ

ನಟಿ ರಾಖಿ ಸಾವಂತ್ ಕೈಗೆ ಹಸಿಮೆಣಸಿನಕಾಯೇ ಗತಿ

By: ಉದಯರವಿ
Subscribe to Filmibeat Kannada

ಬಾಲಿವುಡ್ ನ ಡ್ರಾಮ ಕ್ವೀನ್ ರಾಖಿ ಸಾವಂತ್ ಅವರಿಗೆ ಈ ರಾಜಕೀಯ ಶೋಕಿ ಯಾಕೆ ಬೇಕಿತ್ತೋ ಏನೋ? ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಖಿ ಸಾವಂತ್ ಅವರನ್ನು ಮತದಾರ ಪ್ರಭುಗಳು ಸಾರಸಗಟಾಗಿ ತಿರಸ್ಕರಿಸಿ ಕೈಗೆ ಹಸಿ ಮೆಣಸಿನಕಾಯಿ ಕೊಟ್ಟಿದ್ದಾರೆ.

ಸ್ವತಃ ತಾನೇ ಪಕ್ಷ ಕಟ್ಟಿ ಈ ಬಾರಿಯ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಹಸಿ ಮೆಣಸಿನಕಾಯಿ (Greeen Chilli) ಚಿನ್ಹೆಯೊಂದಿಗೆ ಬಿಸಿಬಿಸಿ ಪ್ರಚಾರವನ್ನೂ ಮಾಡಿದ್ದರು. ಆದರೆ ಕಡೆಗೆ ರಾಖಿ ಪಾಲಿಗೆ ಮೆಣಸಿನಕಾಯಿ ಸಖತ್ ಹಾಟ್ ಆಗಿ ಪರಿಣಮಿಸಿದೆ. [ಚುನಾವಣೆಯಲ್ಲಿ ಗೆದ್ದ ಮತ್ತು ಬಿದ್ದ ಸೆಲೆಬ್ರಿಟಿಗಳು
]

Rakhi Sawant

ಇಷ್ಟಕ್ಕೂ ರಾಖಿ ಸಾವಂತ್ ಅವರಿಗೆ ಮೊದಲ ಮೂರು ಸುತ್ತಿನ ಮತ ಎಣಿಕೆ ಮುಗಿಯುವ ವೇಳೆಗೆ ಬಂದ್ದು ಕೇವಲ 15 ಮತಗಳು! ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಸಖತ್ ಜೋಕ್ಸ್ ಹರಿದಾಡಿದವು. ರಾಖಿ ಸಾವಂತ್ ಈಗ ಮೆಣಸಿನಕಾಯಿ ಇಟ್ಟುಕೊಂಡು ಅದೇನು ವೆರೈಟಿ ಸಾಂಬಾರ್ ಮಾಡಿಕೊಳ್ತಾರೋ ಏನೋ?

ಮೆಟ್ರೋ ನಗರಗಳಲ್ಲಿ ಮಹಿಳೆಯರಿಗೆ ರಕ್ಷಣೆ...ಭದ್ರತೆ ಕಲ್ಪಿಸುತ್ತೇನೆ ಎಂಬ ಧ್ಯೇಯವಾಕ್ಯದೊಂದಿಗೆ ಕಣಕ್ಕಿಳಿದ ರಾಖಿಗೆ ಕಡೆಗೆ ಮತದಾರರು ಕೈಹಿಡಿಯಲಿಲ್ಲ. ಇದರಿಂದ ತೀವ್ರ ಬೇಸರಗೊಂಡ ರಾಖಿ ಸಾವಂತ್ ತಾನೇ ಕಟ್ಟಿದ ರಾಷ್ಟ್ರೀಯ ಆಮ್ ಪಕ್ಷಕ್ಕೆ (RAP) ರಾಜೀನಾಮೆ ಬಿಸಾಕಿದ್ದಾರೆ.

ಮುಂಬೈನ ವಾಯುವ್ಯ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಖಿಗೆ ಬಿದ್ದ ಒಟ್ಟು ಮತಗಳು ಕೇವಲ 1,995. ಚುನಾವಣೆಯಲ್ಲಿ ತನ್ನ ಬಳಿ ಮತದಾರರಿಗೆ ಹಂಚುವಷ್ಟು ಹಣ ಇಲ್ಲದೆ ಇದ್ದದ್ದೇ ಸೋಲಿಗೆ ಕಾರಣ ಎಂದಿದ್ದಾರೆ ರಾಖಿ.

ಅದೇನೋ ಹೇಳ್ತಾರಲ್ಲಾ ಕುಣಿಯಲಾರದವಳು... ಎಂಬಂತಾಗಿದೆ ರಾಖಿ ಸಾವಂತ್ ಪರಿಸ್ಥಿತಿ. ಹೋಗ್ಲಿ ಬಿಡಿ ರಾಜಕೀಯದಲ್ಲಿ ಇರದಿದ್ದರೇನಂತೆ ಬಾಲಿವುಡ್ ಐಟಂ ಡಾನ್ಸ್ ಗಳಲ್ಲಿ ರಾಖಿ ಇದ್ದೇ ಇರುತ್ತಾರಲ್ಲಾ ಎಂದು ಆಕೆಯ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

English summary
Bollywood item-girl-turned politician Rakhi Sawant has finally learnt her lesson after failing in her electoral debut this Lok Sabha polls. Rakhi resigned from her own party Rashtriya Aam Party (RAP) on Sunday. She managed to secure only 1,995 votes from from Mumbai North-West parliamentary constituency.
Please Wait while comments are loading...