»   » ಚುನಾವಣಾ ಕಣಕ್ಕೆ ಡ್ರಾಮಾ ಕ್ವೀನ್ ರಾಖಿ ಸಾವಂತ್

ಚುನಾವಣಾ ಕಣಕ್ಕೆ ಡ್ರಾಮಾ ಕ್ವೀನ್ ರಾಖಿ ಸಾವಂತ್

By: ಉದಯರವಿ
Subscribe to Filmibeat Kannada
ಡ್ರಾಮಾ ಕ್ವೀನ್ ಎಂದೇ ಖ್ಯಾತರಾಗಿರುವ ರಾಖಿ ಸಾವಂತ್ ಇನ್ನೊಂದು ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಈ ಬಾರಿ ಅವರು ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ ಅವರು ಸ್ಪರ್ಧಿಸುತ್ತಿರುವುದು ಯಾವುದೇ ರಾಜಕೀಯ ಕ್ಷೇತ್ರದಲ್ಲಿ ಅಲ್ಲವೇ ಅಲ್ಲ.

ಸಿನಿಮಾ ಮತ್ತು ಟಿವಿ ಆರ್ಟಿಸ್ಟ್ಸ್ ಅಸೋಸಿಯೇಷನ್ (CINTAA) ಚುನಾವಣೆ 2013ರಲ್ಲಿ ಸ್ಪರ್ಧಿಸುತ್ತಿದ್ದಾರೆ. ಕಲಾವಿದರ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದಿದ್ದಾರೆ ರಾಖಿ. "ಬನ್ನಿ ನನ್ನೊಂದಿಗೆ ಕೈಜೋಡಿಸಿ ವ್ಯವಸ್ಥೆಯನ್ನು ಬದಲಾಯಿಸೋಣ" ಎಂಬುದು ರಾಖಿ ಸಾವಂತ್ ಅಜೆಂಡಾ.

ಕಲಾವಿದರ ಸಮಸ್ಯೆಗಳ ಬಗ್ಗೆ ಮಾತನಾಡಿರುವ ರಾಖಿ, "ಕಲಾವಿದರಿಗೆ ಸಿಗಬೇಕಾದ ಗೌರವ ಸಿಗುತ್ತಿಲ್ಲ. ಅವರಿಗೆ ಸಿಗಬೇಕಾದ ಸಂಬಳ ಸವಲತ್ತುಗಳು ಸಿಗುತ್ತಿಲ್ಲ. ಜೀವನದಲ್ಲಿ ನೊಂದು ಕೆಲವರು ಆತ್ಮಹತ್ಯೆಗೆ ಯತ್ನಿಸುತ್ತಿದ್ದಾರೆ. ತಾನೂ ಒಬ್ಬ ಕಲಾವಿದೆಯಾಗಿ ನನ್ನ ಕೈಲಾದ ಸೇವೆ ಸಲ್ಲಿಸುತ್ತೇನೆ". ಅದಕ್ಕಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದಿದ್ದಾರೆ.

ಎರಡು ವರ್ಷಗಳಿಗೊಮ್ಮೆ ಸಿಂಟಾ (CINTAA) ಚುನಾವಣೆಗಳು ನಡೆಯುತ್ತವೆ. ಒಂದು ವೇಳೆ ತಾವು ಮಾತುಕೊಟ್ಟಂತೆ ನಡೆಯದಿದ್ದರೆ ಕೂಡಲೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನನ್ನನ್ನು ಗೆಲ್ಲಿಸಿ ಎಂದು ಅವರು ವಿನಂತಿಸಿಕೊಂಡಿದ್ದಾರೆ.

ಕೇವಲ ನಿಮ್ಮ ಸೇವೆಗಾಗಿ ನಾನು ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದಿದ್ದಾರೆ. ಸದ್ಯಕ್ಕೆ ಲೈಫ್ ಓಕೆ ವಾಹಿನಿಯಲ್ಲಿ ರಾಖಿ ಸೆಲೆಬ್ರಿಟಿ ಶೋ ಒಂದನ್ನು ನಡೆಸಿಕೊಡುತ್ತಿದ್ದಾರೆ. ಅದುಬಿಟ್ಟರೆ ಅವರ ಕೈಯಲ್ಲಿ ಯಾವುದೇ ಚಿತ್ರಗಳು ಇಲ್ಲ.

English summary
Controversy queen Rakhi Sawant is set to contest the Cine and TV Artists Association (CINTAA) elections 2013. Her motto is to "change the system" to make things better for artists.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada