For Quick Alerts
ALLOW NOTIFICATIONS
For Daily Alerts

ಜಿಯಾ ಖಾನ್ ಆತ್ಮಹತ್ಯೆ ಬಗ್ಗೆ ಮೌನ ಮುರಿದ ವರ್ಮಾ

By Rajendra

ಆತ್ಮಹತ್ಯೆಗೆ ಶರಣಾದ ಬಾಲಿವುಡ್ ತಾರೆ ಜಿಯಾ ಖಾನ್ ಬಗ್ಗೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಮೌನ ಮುರಿದಿದ್ದಾರೆ. ಉದಯೋನ್ಮುಖ ತಾರೆಯೊಬ್ಬಳು ದಿಢೀರ್ ಎಂದು ಕಣ್ಮರೆಯಾದ ಬಗ್ಗೆ ಬಾಲಿವುಡ್ ಚಿತ್ರರಂಗ ಚಿಂತಾಕ್ರಾಂತವಾಗಿದೆ.

ಆಕೆಯ ಆತ್ಮಹತ್ಯೆ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ರಾಮು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹೀಗೆ ಹೇಳಿಕೊಂಡಿದ್ದಾರೆ. "ನಾನು ನಿಶ್ಯಬ್ಧ್ ಚಿತ್ರದಲ್ಲಿ ಆಕೆಯ ಜೊತೆ ಕೆಲಸ ಮಾಡಬೇಕಾದರೆ ಒಂದು ಸಂಗತಿ ಗಮನಿಸಿದೆ...ಆಕೆ ತುಂಬಾ ಶಾರ್ಪ್. ಉತ್ಸಾಹದ ಬುಗ್ಗೆಯಂತಿದ್ದರು... "

ಮೊದಲ ಚಿತ್ರದಲ್ಲಿ ಅಷ್ಟೊಂದು ಉತ್ಸಾಹದಿಂದ ಇರುವವರನ್ನು ನಾನು ಎಲ್ಲೂ ನೋಡಿರಲಿಲ್ಲ. ನಿಶ್ಯಬ್ಧ್ ಚಿತ್ರದಲ್ಲಿ ಆಕೆಯ ಪಾತ್ರ ಫಿಲಾಸಪಿಕಲ್ ಆಗಿದ್ದರೂ ಎಲ್ಲವನ್ನೂ ಟೇಕ್ ಲೈಟ್ ಎಂಬಂತೆ ಸ್ವೀಕರಿಸುತ್ತಿದ್ದರು. ಕೊನೆಯ ಬಾರಿ ಆಕೆಯನ್ನು ಭೇಟಿ ಆದಾಗ ತಾನು ಸಂಪೂರ್ಣ ಸೋತಿದ್ದೇನೆ ಎನ್ನುತ್ತಿದ್ದರು.

ನಿಶ್ಯಬ್ಧ್ ಚಿತ್ರ ಆಕೆಗೆ ಹೆಸರು ತಂದುಕೊಟ್ಟಿತು. ಗಜಿನಿ ಚಿತ್ರವೂ ಅಷ್ಟೆ. ಹೌಸ್ ಫುಲ್ ಚಿತ್ರದ ಬಳಿಕ ಆಕೆ ಮೂರು ವರ್ಷ ಕೆಲಸವಿಲ್ಲದೆ ಸುಮ್ಮನೆ ಕುಳಿತಿದ್ದರು. ಆಕೆ ಅಷ್ಟೊಂದು ಖಿನ್ನಳಾಗಲು, ಭವಿಷ್ಯದ ಬಗ್ಗೆ ಅಷ್ಟೊಂದು ಭಯ ಪಡಲು ಕಾರಣ ಏನಿರಬಹುದು ಎಂಬುದು ಗೊತ್ತಾಗುತ್ತಿಲ್ಲ..." ಎಂದಿದ್ದಾರೆ.

ಜಿಯಾ ಖಾನ್ ಮೂಲ ಹೆಸರು ನಫೀಸಾ. ಚಿತ್ರರಂಗಕ್ಕೆ ಅಡಿಯಿಟ್ಟ ಬಳಿಕ ತಮ್ಮ ಹೆಸರನ್ನು ಜಿಯಾ ಎಂದು ಬದಲಿಸಿಕೊಂಡರು. ಬ್ರಿಟನ್ ಮೂಲದ ಭಾರತೀಯ ನಟಿಯಾದ ಈಕೆ ಹುಟ್ಟಿದ್ದು ಫೆಬ್ರವರಿ 20, 1988ರಲ್ಲಿ. ಈಕೆಯ ಹುಟ್ಟೂರು ಲಂಡನ್ ನ ಚೆಲ್ಸಿಯಾ. ಜಿಯಾ ಖಾನ್ ಯಾರು? (ಒನ್ಇಂಡಿಯಾ ಕನ್ನಡ)

Never ever seen a debutant actress with more spunk and more spirit than Jiah when i was directing her in Nishabd
— Ram Gopal Varma (@RGVzoomin) June 4, 2013

No matter what her problem was I just so wish she applied her on screen philosophy of Nishabd to her own life which is to .'take lite'
— Ram Gopal Varma (@RGVzoomin) June 4, 2013

I dont know the reason what led to this but jiah was very depressed about her career and scared for her future
— Ram Gopal Varma (@RGVzoomin) June 4, 2013

English summary
Ram Gopal Varma Tweets about actress Jiah Khan death, "Never ever seen a debutant actress with more spunk and more spirit than Jiah when i was directing her in Nishabd. No matter what her problem was I just so wish she applied her on screen philosophy of Nishabd to her own life which is to .'take lite'.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X