Just In
Don't Miss!
- News
ಜಾಗತಿಕ ಮಟ್ಟದಲ್ಲಿ ಭಾರತೀಯ ಸಂಪ್ರದಾಯಕ್ಕೆ ಜಾತ್ಯತೀತತೆ ಬಹುದೊಡ್ಡ ಬೆದರಿಕೆ: ಯೋಗಿ
- Sports
ಐಪಿಎಲ್ 2021: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಂಪೂರ್ಣ ವೇಳಾಪಟ್ಟಿ, ದಿನಾಂಕ, ಸಮಯ ಹಾಗೂ ಸ್ಥಳ
- Finance
20 ತಿಂಗಳ ಬಳಿಕ ಗರಿಷ್ಠ ಮಟ್ಟ ತಲುಪಿದ ಕಚ್ಚಾ ತೈಲ ಬೆಲೆ
- Lifestyle
ಯಾವಾಗ ಅವಳಿ ಮಕ್ಕಳಾಗುವ ಸಾಧ್ಯತೆ ಹೆಚ್ಚು?
- Automobiles
ಬಿಡುಗಡೆಯಾಗಲಿದೆ ಲಾಂಗ್ ವೀಲ್ಹ್ಬೆಸ್ ಹೊಂದಿರುವ ಲ್ಯಾಂಡ್ ರೋವರ್ ಡಿಫೆಂಡರ್
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಮಿತಾಬ್ ಬಚ್ಚನ್ ಜೊತೆ 'ಸರ್ಕಾರ್' ಮಾಡಲ್ಲ: ರಾಮ್ ಗೋಪಾಲ್ ವರ್ಮಾ
ಅಮಿತಾಬ್ ಬಚ್ಚನ್ ಹಲವಾರು ನೆನಪುಳಿಯುವ ಪಾತ್ರಗಳನ್ನು ನೀಡಿದ್ದಾರೆ. ವಿಜಯ್, ವಿಜಯ್ ದೀನಾನಾಥ್ ಚೌಹಾಣ್, ಡಾನ್, ಕೂಲಿ ಹೀಗೆ ಅವರ ಹಲವು ಪಾತ್ರಗಳನ್ನೂ ಈಗಲೂ ಅನುಕರಿಸುತ್ತಾರೆ. ಅಂಥಹಾ ಪಾತ್ರಗಳಲ್ಲಿ ಒಂದು ಸುಭಾಷ್ ನಾಗರೆ ಉರುಫ್ ಸರ್ಕಾರ್ ಸಹ ಒಂದು.
ಕಪ್ಪು ಕುರ್ತಾ ಧರಿಸಿ ಮಣಿಗಳನ್ನು ಕೊರಳಿಗೆ ಧರಿಸಿ ಎದುರಿನವರನ್ನು ದಿಟ್ಟಿಸುತ್ತಾ, ಸಾಸರ್‌ನಲ್ಲಿ ಚಹ ಹೀರುತ್ತಿರುವ ಅಮಿತಾಬ್ ಬಚ್ಚನ್ ಚಿತ್ರ ಸುಲಭಕ್ಕೆ ಮರೆಯುವಂಥಹದ್ದಲ್ಲ.
ಸರ್ಕಾರ್ ಸಿನಿಮಾ ಈಗಾಗಲೇ ಮೂರು ಭಾಗಗಳಲ್ಲಿ ಬಂದಿದೆ. ಮೂರೂ ಭಾಗಗಳನ್ನು ರಾಮ್ ಗೋಪಾಲ್ ವರ್ಮಾ ಅವರೇ ನಿರ್ದೇಶಿಸಿದ್ದಾರೆ. ಆದರೆ ಮತ್ತೊಮ್ಮೆ ಸರ್ಕಾರ್ ಸಿನಿಮಾವನ್ನು ನಿರ್ದೇಶಿಸುವುದಿಲ್ಲ ಎಂದಿದ್ದಾರೆ ವರ್ಮಾ.

ಸರ್ಕಾರ್ 4 ನಿರ್ದೇಶಿಸುವುದಿಲ್ಲ: ವರ್ಮಾ
ಸರ್ಕಾರ್ ಸಿನಿಮಾ ಈಗಾಗಲೇ ಮೂರು ಭಾಗಗಳಲ್ಲಿ ಬಿಡುಗಡೆ ಆಗಿದೆ. ಸರ್ಕಾರ್ 4 ತೆಗೆದಲ್ಲಿ ಅದು ಪಾತ್ರದ ಹಾಗೂ ಕತೆಯನ್ನು ಉದ್ದೇಶಪೂರ್ವಕವಾಗಿ ಹಿಂಜಿದಂತಾಗುತ್ತದೆ. ಹಾಗೆ ಮಾಡಿದರೆ ಪಾತ್ರಕ್ಕೆ ಇರುವ ಘನತೆ ಹಾಳುಮಾಡಿದಂತಾಗುತ್ತದೆ ಎಂದಿದ್ದಾರೆ ವರ್ಮಾ.

ಭಿನ್ನ-ಭಿನ್ನ ಪಾತ್ರ ಸೃಷ್ಟಿಸಬಹುದು: ವರ್ಮಾ
ಆದರೆ ಅಮಿತಾಬ್ ಬಚ್ಚನ್ ಜೊತೆಗೆ ಬೇರೆಯದೇ ರೀತಿಯ ಸಿನಿಮಾ ಮಾಡುತ್ತೀನಿ ಎಂದಿರುವ ವರ್ಮಾ. ಅಮಿತಾಬ್ ಒಬ್ಬ ಅದ್ಭುತ ನಟ, ಅವರನ್ನು ಬಳಸಿ ಭಿನ್ನ-ಭಿನ್ನ ಪಾತ್ರ ಸೃಷ್ಟಿಸಬಹುದು, ಭಿನ್ನ-ಭಿನ್ನ ಕತೆ ಹೇಳಬಹುದು, ಅಂಥಹಾ ಪ್ರಯತ್ನ ಮಾಡಲಿದ್ದೇನೆ ಎಂದಿದ್ದಾರೆ ಆರ್‌ಜಿವಿ.

ವರ್ಮಾ ಸಿನಿಮಾದಲ್ಲಿ ನಟಿಸುತ್ತಾರೆಯೇ ಬಚ್ಚನ್
ರಾಮ್ ಗೋಪಾಲ್ ವರ್ಮಾ, ಲಾಕ್ ಡೌನ್ ಸಮಯದಲ್ಲಿ ಹಲವು ಸಿನಿಮಾಗಳನ್ನು ನಿರ್ದೇಶಿಸಿ, ನಿರ್ಮಿಸಿ ತಮ್ಮದೇ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದರು. ಸಾಫ್ಟ್ ಪಾರ್ನ್ ಮಾದರಿಯ ಸಿನಿಮಾಗಳನ್ನು ಸಹ ವರ್ಮಾ ಮಾಡಿದರು. ಅನೇಕ ವಿವಾದಗಳನ್ನು ಸಹ ಮೈಮೇಲೆ ಎಳೆದುಕೊಂಡರು.

ಹಲವು ಸಿನಿಮಾಗಳಲ್ಲಿ ನಟಿಸಲಿದ್ದಾರೆ ಅಮಿತಾಬ್
ಇನ್ನು ನಟ ಅಮಿತಾಬ್ ಬಚ್ಚನ್ ನಟನೆಯ ನಾಗರಾಜ್ ಮಂಜುಳೆ ನಿರ್ದೇಶನದ ಝುಂಡ್ ಸಿನಿಮಾ ಬಿಡುಗಡೆಗೆ ತಯಾರಾಗಿದೆ. ರಣಬೀರ್-ಆಲಿಯಾ ಜೊತೆಗೆ 'ಬ್ರಹ್ಮಾಸ್ತ್ರ' ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಪ್ರಭಾಸ್-ದೀಪಿಕಾ ಪಡುಕೋಣೆ ಸಿನಿಮಾದಲ್ಲಿಯೂ ಅಮಿತಾಬ್ ನಟಿಸಲಿದ್ದಾರೆ. ತಮಿಳಿನ ಪೊನ್ನಿಯನ್ ಸೆಲ್ವಂ ಸಿನಿಮಾದಲ್ಲಿಯೂ ನಟಿಸಲಿದ್ದಾರೆ ಅಮಿತಾಬ್.