»   » ಶ್ರೀದೇವಿ ಕೊಹಿನೂರ್ ಡೈಮಂಡ್: ರಾಮ್ ಗೋಪಾಲ್ ವರ್ಮಾ

ಶ್ರೀದೇವಿ ಕೊಹಿನೂರ್ ಡೈಮಂಡ್: ರಾಮ್ ಗೋಪಾಲ್ ವರ್ಮಾ

Posted By:
Subscribe to Filmibeat Kannada

ದಕ್ಷಿಣ ಭಾರತ ಮೂಲದ ಬಾಲಿವುಡ್ ಪ್ರಸಿದ್ಧ ನಿರ್ದೇಶಕ ಹಾಗೂ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ, ಬಾಲಿವುಡ್ ಜನಪ್ರಿಯ ನಟಿ ಶ್ರೀದೇವಿ ಕುರಿತು ಟ್ವೀಟ್ ಮಾಡಿದ್ದಾರೆ. ಒಂದು ಕಾಲದ ಬಾಲಿವುಡ್ ಮಹಾರಾಣಿ ಶ್ರೀದೇವಿ ಅಭಿನಯದ 'ಇಂಗ್ಲಿಷ್ ವಿಂಗ್ಲಿಷ್' ಚಿತ್ರ ಬಿಡುಗಡೆಯಾಗಿರುವ (ಕಳೆದ ಶುಕ್ರವಾರ, 05 ಅಕ್ಟೋಬರ್ 2012) ಈ ಸಮಯದಲ್ಲಿ ಅವರು ಶ್ರೀದೇವಿ ಬಗ್ಗೆ ಟ್ವೀಟ್ ಮಾಡಿರುವುದು ಸಮಯೋಚಿತ ಎನಿಸಿದೆ.

ಶ್ರೀದೇವಿ ಚಿತ್ರ 'ಇಂಗ್ಲಿಷ್ ವಿಂಗ್ಲಿಷ್' ಬಿಡುಗಡೆಯಾದ ದಿನ ಮೊದಲ ಶೋ ನೋಡಿದ ಪ್ರೇಕ್ಷಕರು ಹಾಗೂ ವಿಮರ್ಶಕರು ಆ ಚಿತ್ರವನ್ನು ಅದ್ಯಾವ ಪರಿ ಮೆಚ್ಚಿಕೊಂಡಿದ್ದಾರೆ ಎಂದರೆ ಆ ಪ್ರಶಂಸೆಯ ಸುರಿಮಳೆ 'ಇಂಟರ್ ನ್ಯಾಷನಲ್ ಲೆವೆಲ್'ನಲ್ಲಿ ನ್ಯೂಸ್ ಆಗಿದೆ. ಅದು ಕಿವಿಗೆ ಬಿದ್ದಿದ್ದೇ ತಡ, ಶ್ರೀದೇವಿ ಮಹಾ ಫ್ಯಾನ್ ಆಗಿರುವ ವರ್ಮಾ, ಸಂಪೂರ್ಣ ಅಲರ್ಟ್ ಆಗಿದ್ದಾರೆ. ತಕ್ಷಣವೇ "ನಾನು ಶ್ರೀದೇವಿ ಮಹಾ ಫ್ಯಾನ್. ಅವರ ಚಿತ್ರವನ್ನು ಎಲ್ಲರಂತೆ ಕ್ಯೂನಲ್ಲಿ ನಿಂತು ಟಿಕೆಟ್ ತೆಗೆದುಕೊಂಡೇ ನೋಡಲಿದ್ದೇನೆ" ಎಂದಿದ್ದರು.

ಈಗಂತೂ ಚಿತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ವಿಮರ್ಶಕರಂತೂ ಈ ಚಿತ್ರವನ್ನು ಮೆಚ್ಚಿದ್ದಷ್ಟೇ ಅಲ್ಲ, ಎಂದೂ ಕೊಡದಷ್ಟು 'ರೇಟಿಂಗ್' ಅನ್ನು ಈ 'ಇಂಗ್ಲಿಷ್ ವಿಂಗ್ಲಿಷ್' ಚಿತ್ರಕ್ಕೆ ಕೊಟ್ಟಿದ್ದಾರೆ. ಶ್ರೀದೇವಿ ಕುರಿತಂತೆ ಪ್ರೇಕ್ಷಕರು, ವಿಮರ್ಶಕರು ಹಾಗೂ ಜಗತ್ತಿನಾದ್ಯಂತ ಇರುವ ಸಿನಿಮಾಪ್ರಿಯರು ಅಚ್ಚರಿ ಹಾಗೂ ಸಂತೋಷ ವ್ಯಕ್ತಪಡಿಸಿದ್ದಾರೆ. "ಅದೆಷ್ಟೋ ವರುಷ ತೆರೆಮೆರೆಗೆ ಸರಿದಿದ್ದರೂ ನಟನಾ ಪ್ರತಿಭೆಯಲ್ಲಿ ಕಿಂಚಿತ್ತೂ ಕುಂದಿಲ್ಲವೆಂಬುದು ಅಚ್ಚರಿಯಾದರೆ ಮತ್ತೆ ಶ್ರೀದೇವಿ ನಟಿಸಿದ್ದಾರೆ ಎಂಬುದು ಸಂತೋಷ" ಎಂಬ ಅಭಿಪ್ರಾಯ ಎಲ್ಲೆಡೆಯಿಂದ ವ್ಯಕ್ತವಾಗಿದೆ. 

ಇನ್ನು ಈ ಕುರಿತು ರಾಮ್ ಗೋಪಾಲ್ ವರ್ಮಾ "ಇಂಗ್ಲಿಷ್ ವಿಂಗ್ಲಿಷ್ ಅಗಬಹುದು, ಅಮೆರಿಕಾ ಗಿಮೆರಿಕಾ ಆಗಬಹುದು. ಇಂಡಿಯಾ ವಿಂಡಿಯಾ ಆಗಬಹುದು... ಆದ್ರೆ ಶ್ರೀದೇವಿ ವ್ರೀದೇವಿ ಆಗೋಕೆ ಸಾಧ್ಯವಿಲ್ಲ. ಜಗತ್ತಿನಲ್ಲಿ ಬೇಕಾದಷ್ಟು ಕೊಹಿನೂರ್ ವಜ್ರಗಳಿರಬಹುದು, ಆದ್ರೆ ನಮಗಿರೋದು ಒನ್ ಅಂಡ್ ಓನ್ಲಿ ಶ್ರೀದೇವಿ!". ಎಂದು ಟ್ವೀಟ್ ಮಾಡಿದ್ದಾರೆ. ವರ್ಮಾ ಪ್ರಶಂಸೆಯ ಈ ಟ್ವೀಟ್ ಬಗ್ಗೆ ಶ್ರೀದೇವಿ ಪ್ರತಿಭೆ ಹಾಗೂ ಸೌಂದರ್ಯ ಬಲ್ಲ ಯಾರೂ ಕೊಂಕು ಮಾತು ಆಡಲಾರರು. ಎಲ್ಲರೂ "ಇಬ್ಬರೂ ಗ್ರೇಟ್ " ಅನ್ನೋದು ಗ್ಯಾರಂಟಿ ಬಿಡಿ... (ಏಜೆನ್ಸೀಸ್)

English summary
Ram Gopal Varma, one of famous filmmaker in Bollywood praised of yesteryear diva Sridevi for her recent released movie 'Englisg Vinglish'. He tweeted that we have only one Kohinoor Diamond that is Sridevi. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada