For Quick Alerts
  ALLOW NOTIFICATIONS  
  For Daily Alerts

  ಶಾರುಖ್ ಜೊತೆ ನಟಿಸಿದ ದಿನಗಳ ನೆನಪಿಸಿಕೊಂಡ ರಮ್ಯಾ ಕೃಷ್ಣ

  |

  ನಯನತಾರಾ, ಅನುಷ್ಕಾ ಶೆಟ್ಟಿ, ಸಮಂತಾ ಅವರುಗಳಿಗೆ ಹೋಲಿಸಿದರೆ ಆ ಕಾಲದಲ್ಲಿಯೇ ನಟಿ ರಮ್ಯಾ ಕೃಷ್ಣ ಪಂಚಭಾಷಾ ನಟಿಯಾಗಿ ದೊಡ್ಡ ಹೆಸರು ಮಾಡಿದವರು.

  ತಮಿಳು, ಕನ್ನಡ, ತೆಲುಗು, ಮಲಯಾಳಂ, ಹಿಂದಿ ಭಾಷೆಗಳ ಹಲವು ಸಿನಿಮಾಗಳಲ್ಲಿ ರಮ್ಯಾ ಕೃಷ್ಣ ನಟಿಸಿದ್ದಾರೆ. ಹಲವು ಸ್ಟಾರ್ ನಟರ ಜೊತೆ ರಮ್ಯಾ ತೆರೆ ಹಂಚಿಕೊಂಡಿದ್ದಾರೆ. ಈಗಲೂ ಸಿನಿಮಾಗಳಲ್ಲಿ ಸಕ್ರಿಯವಾಗಿರುವ, ಬೇಡಿಕೆ ಉಳಿಸಿಕೊಂಡಿರುವ ಈ ನಟಿ ಶಾರುಖ್ ಖಾನ್ ಜೊತೆಗೆ ನಟಿಸಿದ ಅನುಭವ ಹಂಚಿಕೊಂಡಿದ್ದಾರೆ.

  ದಕ್ಷಿಣ ಭಾರತದ ಸಿನಿಮಾಗಳಿಗೆ ಹೋಲಿಸಿದರೆ ರಮ್ಯಾಕೃಷ್ಣ ಹಿಂದಿ ಸಿನಿಮಾಗಳಲ್ಲಿ ನಟಿಸಿರುವುದು ಕಡಿಮೆ. ನಟಿಸಿರುವ ಕಡಿಮೆ ಸಿನಿಮಾಗಳಲ್ಲಿಯೂ ಶಾರುಖ್ ಖಾನ್ ಜೊತೆ ನಟಿಸಿದ್ದಾರೆ ರಮ್ಯಾಕೃಷ್ಣ. ಇದೀಗ ತಮ್ಮ ಹೊಸ ಸಿನಿಮಾ 'ಲೈಗರ್'ನ ಪ್ರಚಾರದಲ್ಲಿ ಪಾಲ್ಗೊಂಡಿರುವ ರಮ್ಯಾ ಕೃಷ್ಣ ಶಾರುಖ್ ಖಾನ್ ಜೊತೆ ನಟಿಸಿದ ಅನುಭವ ಹಂಚಿಕೊಂಡಿದ್ದಾರೆ.

  ಶಾರುಖ್ ಹಾಗೂ ರಮ್ಯಾ ಕೃಷ್ಣ ಒಟ್ಟಿಗೆ ನಟಿಸಿದ್ದರು

  ಶಾರುಖ್ ಹಾಗೂ ರಮ್ಯಾ ಕೃಷ್ಣ ಒಟ್ಟಿಗೆ ನಟಿಸಿದ್ದರು

  'ಚಾಹತ್' ಹಿಂದಿ ಸಿನಿಮಾದಲ್ಲಿ ಶಾರುಖ್ ಹಾಗೂ ರಮ್ಯಾ ಕೃಷ್ಣ ಒಟ್ಟಿಗೆ ನಟಿಸಿದ್ದರು. ನಾನಾಗ ಹಿಂದಿ ಚಿತ್ರರಂಗಕ್ಕೆ ಹೊಸಬಳಾಗಿದ್ದೆ. ಆಗಲೇ ಶಾರುಖ್ ದೊಡ್ಡ ಸ್ಟಾರ್ ಆದರೂ ಅವರು ನನ್ನೊಂದಿಗೆ ಸಮಾನವಾಗಿ ವರ್ತಿಸಿದರು. ನಾನು ನೋಡಿದ ಅತ್ಯಂತ ವಿನಯಂತ ಸ್ಟಾರ್ ನಟ ಹಾಗೂ ಬಹಳ ಪರಿಶ್ರಮಿ ನಟ ಶಾರುಖ್ ಖಾನ್ ಎಂದಿದ್ದಾರೆ ನಟಿ ರಮ್ಯಾ ಕೃಷ್ಣ.

  ಅತ್ಯುತ್ತಮ ಸಹನಟ ಶಾರುಖ್ ಖಾನ್: ರಮ್ಯಾಕೃಷ್ಣ

  ಅತ್ಯುತ್ತಮ ಸಹನಟ ಶಾರುಖ್ ಖಾನ್: ರಮ್ಯಾಕೃಷ್ಣ

  ಶಾರುಖ್ ಖಾನ್ ಅನ್ನು ಭೇಟಿಮಾಡಿ ವರ್ಷಗಳೇ ಆದವು. ಆದರೆ ಅವರ ಎನರ್ಜಿ ನನಗಿನ್ನೂ ನೆನಪಿದೆ. ಈಗಿನ ರಣ್ವೀರ್ ಸಿಂಗ್ ಮಾದರಿಯಲ್ಲಿಯೇ ಅವರು ಆಗ ಎನರ್ಜೆಟಿಕ್ ಆಗಿರುತ್ತಿದ್ದರು. ಅವರು ಅದೆಲ್ಲಿಂದ ಆ ಎನರ್ಜಿಯನ್ನು ತರುತ್ತಿದ್ದರೋ ನನಗೆ ಗೊತ್ತಿಲ್ಲ. ಅವರೊಬ್ಬ ಒಳ್ಳೆಯ ಸಹ ನಟ, ಅತ್ಯುತ್ತಮ ವ್ಯಕ್ತಿಯಾಗಿ ನನಗೆ ಪರಿಚಿತರಾಗಿದ್ದರು'' ಎಂದಿದ್ದಾರೆ ರಮ್ಯಾ ಕೃಷ್ಣ. 'ಚಾಹತ್' ಸಿನಿಮಾದಲ್ಲಿ ಶಾರುಖ್ ಖಾನ್, ರಮ್ಯಾ ಕೃಷ್ಣ ಜೊತೆಗೆ ನಾಸಿರುದ್ದೀನ್ ಶಾ ಹಾಗೂ ಪೂಜಾ ಭಟ್, ಅನುಪಮ್ ಖೇರ್ ಅವರುಗಳು ನಟಿಸಿದದ್ದರು.

  ಲೈಗರ್‌ನಲ್ಲಿ ವಿಜಯ್ ದೇವರಕೊಂಡ ತಾಯಿ ರಮ್ಯಾಕೃಷ್ಣ

  ಲೈಗರ್‌ನಲ್ಲಿ ವಿಜಯ್ ದೇವರಕೊಂಡ ತಾಯಿ ರಮ್ಯಾಕೃಷ್ಣ

  ರಮ್ಯಾಕೃಷ್ಣ ಇದೀಗ ಪ್ಯಾನ್ ಇಂಡಿಯಾ ಸಿನಿಮಾ 'ಲೈಗರ್'ನಲ್ಲಿ ನಟಿಸಿದ್ದಾರೆ. ಲೈಗರ್‌ನಲ್ಲಿ ವಿಜಯ್ ದೇವರಕೊಂಡ ತಾಯಿಯ ಪಾತ್ರದಲ್ಲಿ ರಮ್ಯಾಕೃಷ್ಣ ನಟಿಸಿದ್ದು, ಈ ಸಿನಿಮಾದಲ್ಲಿ ಅವರದ್ದು ಭಿನ್ನವಾದ ತಾಯಿಯ ಪಾತ್ರ. ಸಖತ್ ರಗಡ್ ಆದ ತಾಯಿಯ ಪಾತ್ರ ಅವರದ್ದು. ಸಿನಿಮಾದಲ್ಲಿ ಅವರನ್ನು ಹುಲಿಗೆ ಹೋಲಿಸಲಾಗಿದೆಯಂತೆ. ಇತರೆ ಸಿನಿಮಾಗಳಿಗೆ ಹೋಲಿಸಿದರೆ ಈ ಸಿನಿಮಾದಲ್ಲಿ ರಮ್ಯಾಕೃಷ್ಣ ನಿರ್ವಹಿಸಿರುವ ತಾಯಿಯ ಪಾತ್ರ ಬಹಳ ಭಿನ್ನವಂತೆ.

  ಐದು ದಶಕದಿಂದಲೂ ನಟಿಸುತ್ತಿರುವ ರಮ್ಯಾ ಕೃಷ್ಣ

  ಐದು ದಶಕದಿಂದಲೂ ನಟಿಸುತ್ತಿರುವ ರಮ್ಯಾ ಕೃಷ್ಣ

  1980 ರ ದಶಕದಿಂದಲೂ ರಮ್ಯಾಕೃಷ್ಣ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದಲ್ಲಿ 1988 ರಲ್ಲಿ ಮೊದಲ ಬಾರಿಗೆ 'ಶಕ್ತಿ' ಹಾಗೂ 'ಕೃಷ್ಣ ರುಕ್ಮಿಣಿ' ಸಿನಿಮಾದಲ್ಲಿ ರಮ್ಯಾಕೃಷ್ಣ ನಟಿಸಿದ್ದರು. ಐದು ದಶಕದಿಂದಲೂ ರಮ್ಯಾಕೃಷ್ಣ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಈಗಲೂ ಹಲವು ಸಿನಿಮಾಗಳ ಅವಕಾಶ ಅವರ ಮುಂದಿದೆ. ಬಾಲನಟಿಯಾಗಿ ಕಾಲಿಟ್ಟ ರಮ್ಯಾಕೃಷ್ಣ ಈಗ ತಾಯಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಲವು ಧಾರಾವಾಹಿಗಳಲ್ಲಿ ಸಹ ರಮ್ಯಾಕೃಷ್ಣ ನಟಿಸಿದ್ದಾರೆ.

  Recommended Video

  Vijay Deverakonda | ಕ್ರೇಜ್ ನೋಡಿ ವಿಜಯ್ ಅನನ್ಯ ಫಿಧಾ | Ananya Panday *Press Meet
  English summary
  Senior Actress Ramya Krishna remember days when she worked with Shah Rukh Khan. She said he is a lovely co star.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X