»   » ಯರವಾಡ ಜೈಲಿನಲ್ಲಿ ತಾರೆ ರಾಣಿ ಮುಖರ್ಜಿ

ಯರವಾಡ ಜೈಲಿನಲ್ಲಿ ತಾರೆ ರಾಣಿ ಮುಖರ್ಜಿ

Posted By:
Subscribe to Filmibeat Kannada

'ಮರ್ದಾನಿ' ಚಿತ್ರದಲ್ಲಿ ದಕ್ಷ ಪೊಲೀಸ್ ಅಧಿಕಾರಿಯಾಗಿ ದುಷ್ಟರನ್ನ ಬಗ್ಗುಬಡಿದ ರಾಣಿ ಮುಖರ್ಜಿ, ಈಗ ಖುದ್ದು ಜೈಲಿಗೆ ತೆರಳಿದ್ದಾರೆ. ಹಾಗಂತ ಛೋಪ್ರಾ ಸೊಸೆ ಯಾವುದೇ ಅಪರಾಧ ಎಸಗಿಲ್ಲ. ಆಡಿದ ಮಾತನ್ನ ಉಳಿಸಿಕೊಳ್ಳೋದಕ್ಕೆ ರಾಣಿ ಯರವಾಡ ಸೆಂಟ್ರಲ್ ಜೈಲಿಗೆ ಎಂಟ್ರಿಕೊಟ್ಟಿದ್ದಾರೆ.

ಮಹಿಳೆಯರ ಹಕ್ಕುಗಳ ಪರ ಪ್ರತಿವಾದಿಸುವ ರಾಣಿ, 'ಮರ್ದಾನಿ' ಚಿತ್ರದ ಶೂಟಿಂಗ್ ವೇಳೆ ಖೈದಿಗಳ ಪುನರ್ವತಿ ಬಗ್ಗೆಯೂ ತಮ್ಮ ಅಭಿಪ್ರಯವನ್ನ ವ್ಯಕ್ತಪಡಿಸಿದ್ದರು. ಆದರೆ ಅದೆಲ್ಲವೂ ಪ್ರಚಾರಕ್ಕಾಗಿ ಮಾತ್ರ ಸೀಮಿತವಾಗಿಡದೆ, ಯರವಾಡ ಜೈಲಿಗೆ ಭೇಟಿ ನೀಡಿ ಮಹಿಳಾ ಖೈದಿಗಳ ಕಷ್ಟ-ಸುಖ ವಿಚಾರಿಸಿದ್ದಾರೆ.


ಯರವಾಡ ಬಂಧಿಖಾನೆ ಸಿಬ್ಬಂದಿ ವತಿಯಿಂದ ಶುರುವಾಗಲಿರುವ 'ರೇಡಿಯೋ YCP' ಮತ್ತು 'MAKA' ಬ್ರ್ಯಾಂಡ್ ನ ಬಿಡುಗಡೆ ಮಾಡುವುದಕ್ಕೆ ರಾಣಿ ಜೈಲಿಗೆ ತೆರಳಿದ್ದರು. 'ರೇಡಿಯೋ YCP' ಥೇಟ್ ರೇಡಿಯೋ ಸ್ಟೇಷನ್ ನಂತೆ ಕೆಲಸ ನಿರ್ವಹಿಸಲಿದ್ದು, ಖೈದಿಗಳೇ ಆರ್ ಜೆಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಇದೇ ವೇಳೆ, ಮಹಾರಾಷ್ಟ್ರ ಬಂಧಿಖಾನೆ ಇಲಾಖೆ ವತಿಯಿಂದ ಖೈದಿಗಳೇ ತಯಾರಿಸಿರುವ 'MAKA' ಬ್ರ್ಯಾಂಡ್ ಉತ್ಪನ್ನಗಳನ್ನೂ ರಾಣಿ ಬಿಡುಗಡೆ ಮಾಡಿದರು. ನಂತರ, ಐತಿಹಾಸಿಕ ಹಿನ್ನೆಲೆಯುಳ್ಳ ಯರವಾಡ ಸೆಂಟ್ರಲ್ ಜೈಲನ್ನ ಗಿರಿಕಿ ಹೊಡೆದ ರಾಣಿ, ಸ್ವತಂತ್ರ ಸಂಗ್ರಾಮದಲ್ಲಿ ಜೈಲು ಸೇರಿದ್ದ ಗಾಂಧೀಜಿ, ನೆಹರು, ಸರ್ದಾರ್ ವಲ್ಲಭಾಯ್ ಪಟೇಲ್ ಇದ್ದ ಸೆಲ್ ಗಳಿಗೂ ಭೇಟಿ ನೀಡಿದ್ರು.

Rani Mukerji

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ರಾಣಿ ಮುಖರ್ಜಿ ''ಯರವಾಡ ಬಂಧಿಖಾನೆಗೆ ಭೇಟಿ ನೀಡಿದ್ದು ವಿಶಿಷ್ಟ ಅನುಭವ ನೀಡಿದೆ. ಸ್ವಾತಂತ್ರ್ಯ ಹೋರಾಟಗಾರರಿದ್ದ ಸೆಲ್ ಗಳನ್ನ ಕಣ್ತುಂಬಿಕೊಂಡಿದ್ದು ನನ್ನ ಅದೃಷ್ಟ'' ಅಂತ ಹೇಳಿದ್ರು.

ಬಂಧಿಖಾನೆಯ ಅಡಿಷನಲ್ ಡಿ.ಸಿ.ಪಿ ಮೀರನ್ ಬೊರ್ವಾಂಕರ್ ಮಾತನಾಡಿ, ''ಬಂಧಿಖಾನೆಯ ಮೊದಲ ರೇಡಿಯೋ ಸ್ಟೇಷನ್ ಮತ್ತು 'MAKA' ಬ್ರ್ಯಾಂಡ್ ಉತ್ಪನ್ನಗಳನ್ನ ಬಿಡುಗಡೆ ಮಾಡಿರುವ ರಾಣಿ, ಕೊಟ್ಟ ಮಾತನ್ನ ಉಳಿಸಿಕೊಂಡಿದ್ದಾರೆ. ಮಹಿಳೆಯ ಹಕ್ಕುಗಳನ್ನ ಪ್ರತಿಪಾದಿಸುವ ರಾಣಿ, ಇಂದು ಅದನ್ನ ಪ್ರೂವ್ ಮಾಡಿದ್ದಾರೆ'' ಅಂದ್ರು. (ಫೋಟೋ ಕೃಪೆ - MANOJ KESHARWANI)

English summary
Rani Mukerji was invited by the Yerwada Central Prison officers and staff to launch the first radio station in the prison 'Radio YCP' and 'MAKA' brand manufactured by the prisoners. By this Rani Mukerji has proved that her commitment towards the cause of women and rehabilitation of prisoners is much deeper than the mere portrayal of a cop in Mardaani.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada