»   » ಗಗನಕ್ಕೇರಿತು ರಣ್ವೀರ್ ಸಿಂಗ್ ಸಂಭಾವನೆ: ಎಲ್ಲಾ 'ಪದ್ಮಾವತ್' ಕೃಪೆ.!

ಗಗನಕ್ಕೇರಿತು ರಣ್ವೀರ್ ಸಿಂಗ್ ಸಂಭಾವನೆ: ಎಲ್ಲಾ 'ಪದ್ಮಾವತ್' ಕೃಪೆ.!

Posted By:
Subscribe to Filmibeat Kannada

ಯಾರು ಎಷ್ಟೇ ಪ್ರತಿಭಟನೆ ಮಾಡಿದ್ರೂ, ವಿರೋಧ ವ್ಯಕ್ತ ಪಡಿಸಿದ್ರೂ, ಕೋರ್ಟ್ ಮೆಟ್ಟಿಲೇರಿದ್ರೂ, 'ಪದ್ಮಾವತ್' ಸಿನಿಮಾ ತೆರೆಗೆ ಅಪ್ಪಳಿಸಿತು. ಪ್ರೇಕ್ಷಕ ಮಹಾಪ್ರಭುಗಳು 'ಪದ್ಮಾವತ್' ಚಿತ್ರಕ್ಕೆ ಜೈಕಾರ ಹಾಕಿದ್ರು. ಪರಿಣಾಮ, 'ಪದ್ಮಾವತ್' ಚಿತ್ರದ ಕಲೆಕ್ಷನ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. 'ಪದ್ಮಾವತ್' ಸಿನಿಮಾ 200 ಕೋಟಿ ಕ್ಲಬ್ ಸೇರಿದೆ.

'ಪದ್ಮಾವತ್' ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಚಿತ್ರದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಪಾತ್ರ ನಿರ್ವಹಿಸಿದ್ದ ರಣ್ವೀರ್ ಸಿಂಗ್ ಬಗ್ಗೆ ಮಾತ್ರ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಲ್ಲಾವುದ್ದೀನ್ ಖಿಲ್ಜಿ ಪಾತ್ರಕ್ಕೆ ನ್ಯಾಯ ಒದಗಿಸಿರುವ ರಣ್ವೀರ್ ಸಿಂಗ್ ಅಭಿನಯಕ್ಕೆ ವಿಮರ್ಶಕರು ಕೂಡ ಭೇಷ್ ಎಂದಿದ್ದಾರೆ. ತಮ್ಮ ನಟನೆಯಿಂದ ಎಲ್ಲೆಲ್ಲೂ ಹಾಟ್ ಸೆನ್ಸೇಷನ್ ಆಗಿರುವ ರಣ್ವೀರ್ ಸಿಂಗ್ ಸಂಭಾವನೆ ಈಗ ಗಗನಕ್ಕೆ ಏರಿದ್ಯಂತೆ. ಹಾಗಾದ್ರೆ, ರಣ್ವೀರ್ ಸಿಂಗ್ ಸಂಭಾವನೆ ಎಷ್ಟು ಅಂದ್ರಾ.? ಮುಂದೆ ಓದಿರಿ...

ಹೆಚ್ಚಾಗಿದೆ ಆಗಿದೆ ರಣ್ವೀರ್ ಸಿಂಗ್ ಸಂಭಾವನೆ

'ಪದ್ಮಾವತ್' ಸಿನಿಮಾ ಸೂಪರ್ ಸಕ್ಸಸ್ ಆದ ಬೆನ್ನಲ್ಲೇ ರಣ್ವೀರ್ ಸಿಂಗ್ ಸಂಭಾವನೆ ಕೂಡ ಹೆಚ್ಚಾಗಿದೆ. ಮೂಲಗಳ ಪ್ರಕಾರ, ಮುಂಬರುವ ಸಿನಿಮಾಗೆ ರಣ್ವೀರ್ ಸಿಂಗ್ ಪಡೆಯಲಿರುವ ಸಂಭಾವನೆ ಬರೋಬ್ಬರಿ 13 ಕೋಟಿ ರೂಪಾಯಿ.!

'ಪದ್ಮಾವತ್' ಅಬ್ಬರಕ್ಕೆ ಬಾಕ್ಸ್ ಆಫೀಸ್ ಧೂಳಿಪಟ: 200 ಕೋಟಿ ದಾಟಿದ ಕಲೆಕ್ಷನ್.!

ಐದು ಕೋಟಿ ಹೆಚ್ಚಾಗಿದೆ ಸ್ವಾಮಿ.!

ಹಾಗ್ನೋಡಿದ್ರೆ, 'ಪದ್ಮಾವತ್' ಸಿನಿಮಾಗೆ ರಣ್ವೀರ್ ಸಿಂಗ್ ಏಳರಿಂದ ಎಂಟು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರಂತೆ. 'ಪದ್ಮಾವತ್' ಸೂಪರ್ ಹಿಟ್ ಆಗ್ತಿದ್ದಂತೆ ಐದರಿಂದ ಆರು ಕೋಟಿ ಸಂಭಾವನೆ ಹೈಕ್ ಮಾಡಿದ್ದಾರೆ ರಣ್ವೀರ್ ಸಿಂಗ್.

ದೀಪಿಕಾ ಪಡುಕೋಣೆ ಸಂಭಾವನೆ ಎಷ್ಟು ಹೇಳಿ.?

ದೀಪಿಕಾ ಪಡುಕೋಣೆ ಕೂಡ ಸದ್ಯ ಚಿತ್ರವೊಂದಕ್ಕೆ ಹದಿಮೂರು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. 'ಪದ್ಮಾವತ್' ಸಿನಿಮಾದಲ್ಲಿ ದೀಪಿಕಾಗಿಂತ ಕಮ್ಮಿ ಸಂಭಾವನೆ ಪಡೆದಿದ್ದ ರಣ್ವೀರ್ ಸಿಂಗ್ ಇದೀಗ ದೀಪಿಕಾಗೆ ಸರಿಸಮಾನವಾದ ಸಂಭಾವನೆ ಪಡೆಯಲು ಮುಂದಾಗಿದ್ದಾರೆ.

ಇದೇ ವರ್ಷ ರಣ್ವೀರ್-ದೀಪಿಕಾ ಮದುವೆಯಂತೆ.! ಹೌದಾ.?

ರಣ್ವೀರ್ ಮುಂಬರುವ ಸಿನಿಮಾಗಳು ಯಾವುವು.?

ಸದ್ಯಕ್ಕೆ 'ಗಲ್ಲಿ ಬಾಯ್' ಚಿತ್ರದ ಶೂಟಿಂಗ್ ನಲ್ಲಿ ರಣ್ವೀರ್ ಸಿಂಗ್ ಬಿಜಿಯಾಗಿದ್ದಾರೆ. ಅದು ಮುಗಿದ ಬಳಿಕ ರೋಹಿತ್ ಶೆಟ್ಟಿ ಅವರ 'ಸಿಂಬಾ' ಚಿತ್ರ ಸೆಟ್ಟೇರಲಿದೆ. ಈ ಎರಡು ಸಿನಿಮಾ ಕಂಪ್ಲೀಟ್ ಆದ್ಮೇಲೆ '1983' ಸಿನಿಮಾ ಶುರು ಆಗಲಿದೆ. ಸಂಭಾವನೆ ಜಾಸ್ತಿ ಮಾಡಿದರೂ, ರಣ್ವೀರ್ ಕಾಲ್ ಶೀಟ್ ಗೆ ಡಿಮ್ಯಾಂಡ್ ಇದೆ ಅನ್ನೋದಕ್ಕೆ ಈ ಚಿತ್ರಗಳ ಪಟ್ಟಿಯೇ ಉದಾಹರಣೆ.

English summary
According to the latest reports, Bollywood Actor Ranveer Singh has increased his remuneration post 'Padmaavat' success.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada