For Quick Alerts
  ALLOW NOTIFICATIONS  
  For Daily Alerts

  ರಿಯಾ ಚಕ್ರವರ್ತಿ-ಸುಶಾಂತ್ 'ಧೂಮಲೀಲೆ' ವಿಡಿಯೋ ವೈರಲ್

  |

  ಸುಶಾಂತ್ ಪ್ರೇಯಸಿ ನಟಿ ರಿಯಾ ಚಕ್ರವರ್ತಿ ಪ್ರಸ್ತುತ ಎನ್‌ಸಿಬಿ ವಶದಲ್ಲಿದ್ದಾರೆ. ಮಾದಕ ವಸ್ತು ಕೊಳ್ಳಲು ಹಣ ಕೊಟ್ಟ ಆರೋಪದ ಮೇಲೆ ರಿಯಾರನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

  ತಾವು, ಸುಶಾಂತ್‌ ಗಾಗಿ ಗಾಂಜಾ ತರಿಸುತ್ತಿದ್ದುದಾಗಿ, ಸುಶಾಂತ್ ಗೆ ಗಾಂಜಾ ಸೇದುವ ಅಭ್ಯಾಸವಿತ್ತು ಎಂದು ರಿಯಾ, ಎನ್‌ಸಿಬಿ ಅಧಿಕಾರಿಗಳ ಬಳಿ ಹೇಳಿದ್ದಾರೆ ಎನ್ನಲಾಗುತ್ತಿದೆ.

  ರಿಯಾ ಅವರು ಕೆಲವು ದಿನಗಳ ಹಿಂದೆ ಸಂದರ್ಶನವೊಂದರಲ್ಲಿ 'ಸುಶಾಂತ್‌ ಗೆ ಗಾಂಜಾ ಸೇದುವ ಅಭ್ಯಾಸವಿತ್ತು, ನಾನು ಆತನನ್ನು ತಡೆಯುವ ಯತ್ನ ಮಾಡಿದ್ದೆ ಆತ ನನ್ನ ಮಾತು ಕೇಳಿರಲಿಲ್ಲ' ಎಂದಿದ್ದರು. ಆದರೆ ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಸುಶಾಂತ್ ಹಾಗೂ ರಿಯಾ ಒಟ್ಟಾಗಿ ಸಿಗರೇಟ್ ಸೇದುತ್ತಿದ್ದಾರೆ. ಆದರೆ ಇದು ಮಾರುಕಟ್ಟೆಯಲ್ಲಿ ದೊರಕುವ ಸಾಮಾನ್ಯ ಸಿಗರೇಟ್ ಅಲ್ಲ ಎಂಬುದು ಸ್ಪಷ್ಟ.

  'ಹರ್ಬಲ್ ಸ್ಟಿಕ್' ಎನ್ನುವ ರಿಯಾ

  'ಹರ್ಬಲ್ ಸ್ಟಿಕ್' ಎನ್ನುವ ರಿಯಾ

  ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ, ಸುಶಾಂತ್ ಸಿಂಗ್ ಸಣ್ಣನೆಯ ಸಿಗರೇಟ್ ಅನ್ನು ಸೇದುತ್ತಿದ್ದಾರೆ. ವಿಡಿಯೋ ಮಾಡುತ್ತಿರುವವನು 'ಇದು ಚರಸ್ ಹಾ?' ಎಂದು ಕೇಳುತ್ತಾರೆ. ಆಗ ರಿಯಾ, 'ಹರ್ಬಲ್ ಸ್ಟಿಕ್' (ನೈಸರ್ಗಿಕ ಕಡ್ಡಿ) ಎಂದು ಹೇಳುತ್ತಾರೆ.

  ಸಿಗರೇಟ್ ಬಗ್ಗೆ ತಮಾಷೆ ಮಾಡುವ ಸುಶಾಂತ್

  ಸಿಗರೇಟ್ ಬಗ್ಗೆ ತಮಾಷೆ ಮಾಡುವ ಸುಶಾಂತ್

  ವಿಡಿಯೋ ಮಾಡುತ್ತಿರುವವರು, 'ಓಹ್ ಇದು ಹರ್ಬಲ್ ಸಿಗರೇಟ್ ಹಾ' ಎಂದು ಕೇಳುತ್ತಾರೆ. ಇದಕ್ಕೆ ಉತ್ತರಿಸುವ ಸುಶಾಂತ್, 'ಅಲ್ಲ, ಇದು ವಿಎಫ್‌ಎಕ್ಸ್' ಎಂದು ತಮಾಷೆ ಮಾಡುತ್ತಾರೆ. ಕೋಣೆಯಲ್ಲಿರುವವರು ಸುಶಾಂತ್ ಜೋಕ್‌ಗೆ ನಗುತ್ತಾರೆ. ಸುಶಾಂತ್ ತಮ್ಮ ಕೈಯಲ್ಲಿದ್ದ ಸಿಗರೇಟ್ ಅನ್ನು ರಿಯಾ ಕೈಗೆ ಹಸ್ತಾಂತರಿಸುತ್ತಾರೆ.

  ಸಿಗರೇಟು ಸೇದುತ್ತಾ ಹಾಡುತ್ತಿದ್ದಾರೆ ರಿಯಾ-ಸುಶಾಂತ್

  ಸಿಗರೇಟು ಸೇದುತ್ತಾ ಹಾಡುತ್ತಿದ್ದಾರೆ ರಿಯಾ-ಸುಶಾಂತ್

  ವಿಡಿಯೋದಲ್ಲಿ ಸುಶಾಂತ್ ಹಾಗೂ ರಿಯಾ ಒಟ್ಟಿಗೆ ಸಿಗರೇಟು ಸೇದುತ್ತಾ ಹಾಡು ಹಾಡುತ್ತಿದ್ದಾರೆ. ಅವರ ಗೆಳೆಯರು ಸಂಗೀತ ವಾದ್ಯಗಳನ್ನು ಭಾರಿಸುತ್ತಿದ್ದಾರೆ. ವಿಡಿಯೋದಲ್ಲಿ ಒಬ್ಬ ಮಹಿಳೆಯೂ ಇದ್ದು, ಆಕೆಯ ಮುಖ ಅಸ್ಪಷ್ಟವಾಗಿದೆ.

  Sanjjana ಗೊಳಾಟಕ್ಕೆ full stop | Filmibeat Kannada
  ಸಿಗರೇಟ್ ಸೇದಿ ಕೆಮ್ಮುತ್ತಿರುವ ಸುಶಾಂತ್

  ಸಿಗರೇಟ್ ಸೇದಿ ಕೆಮ್ಮುತ್ತಿರುವ ಸುಶಾಂತ್

  ವಿಡಿಯೋದಲ್ಲಿ ಸಿಗರೇಟ್ ಸೇದಿದ ಬಳಿಕ ಸುಶಾಂತ್ ಕೆಮ್ಮುತ್ತಾರೆ, ಸಿಗರೇಟು ಸೇದಿದಾಗಲೆಲ್ಲಾ ನೀರು ಕುಡಿಯುತ್ತಾರೆ. ವಿಡಿಯೋದಲ್ಲಿ ಸುಶಾಂತ್ ಹಾಗೂ ರಿಯಾ ಜೊತೆಗೆ ಅವರ ಗೆಳೆಯರಾದ ಸ್ಯಾಮ್ಯುಯೆಲ್ ಹೌಕಿಪ್, ಸಿದ್ಧಾರ್ಥ್ ಪಿತಾನಿ ಸಹ ಇದ್ದಾರೆ.

  English summary
  Rhea Chakraborty and Sushant Singh smoking together. Old Video went viral on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X