For Quick Alerts
  ALLOW NOTIFICATIONS  
  For Daily Alerts

  ಹೇಗಿದೆ ರಿಯಾ ಚಕ್ರವರ್ತಿ ಜೈಲು ಕೋಣೆ? ಯಾರು ಆಕೆಯ 'ನೆರೆ-ಹೊರೆ'?

  |

  ಮಾದಕ ವಸ್ತು ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ರಿಯಾ ಚಕ್ರವರ್ತಿ ಇಂದು ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದು, ಆಕೆಯನ್ನು ಮುಂಬೈ ನ ಬೈಕುಲ್ಲಾ ಜೈಲಿನಲ್ಲಿ ಇಡಲಾಗಿದೆ.

  ಭದ್ರತೆ ಕಾರಣಕ್ಕೆ ಆಕೆಯನ್ನು ಇತರ ಜೈಲು ನಿವಾಸಿಗಳೊಂದಿಗೆ ಇಡದೆ, ಪ್ರತ್ಯೇಕವಾಗಿ ಒಂಟಿ ಕೋಣೆಯಲ್ಲಿ ಇಡಲಾಗಿದೆ. ಆ ಕೋಣೆಯಲ್ಲಿ ಫ್ಯಾನ್ ಆಗಲಿ, ಬೆಡ್‌ ಹಾಗೂ ಇತರೆ ಹೊದಿಕೆಗಳನ್ನಾಗಲಿ ನೀಡಿಲ್ಲ ಜೈಲು ಅಧಿಕಾರಿಗಳು.

  ರಿಯಾ ಚಕ್ರವರ್ತಿ-ಸುಶಾಂತ್ 'ಧೂಮಲೀಲೆ' ವಿಡಿಯೋ ವೈರಲ್ರಿಯಾ ಚಕ್ರವರ್ತಿ-ಸುಶಾಂತ್ 'ಧೂಮಲೀಲೆ' ವಿಡಿಯೋ ವೈರಲ್

  ನ್ಯಾಯಾಲವು ಒಪ್ಪಿದರೆ ಆಕೆಯ ಕೋಣೆಗೆ ಒಂದು ಟೇಬಲ್ ಫ್ಯಾನ್ ಅನ್ನು ನೀಡುತ್ತೇವೆ, ಆದರೆ ಸೀಲಿಂಗ್ ಫ್ಯಾನ್ ಅನ್ನು ನೀಡುವುದಿಲ್ಲ. ಯಾವುದೇ ಹೊದಿಕೆ, ಬೆಡ್‌ ಅನ್ನು ನೀಡುವುದಿಲ್ಲ ಎಂದು ಜೈಲು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

  'ಸೆಲೆಬ್ರಿಟಿ ಅಪರಾಧಿ' ರಿಯಾ 'ನೆರೆ-ಹೊರೆ'

  'ಸೆಲೆಬ್ರಿಟಿ ಅಪರಾಧಿ' ರಿಯಾ 'ನೆರೆ-ಹೊರೆ'

  ರಿಯಾ ಚರ್ಕ್ರವರ್ತಿ ಪಕ್ಕದ ಕೋಣೆಯಲ್ಲಿ 'ಸೆಲೆಬ್ರಿಟಿ ಅಪರಾಧಿ' ಇಂದ್ರಾಣಿ ಮುಖರ್ಜಿಯನ್ನು ಇರಿಸಲಾಗಿದೆ. ಮಗಳು ಶೀನಾ ಬೋರಾ ಅನ್ನು ಕೊಂದ ಪ್ರಕರಣದಲ್ಲಿ ಇಂದ್ರಾಣಿ ಮುಖರ್ಜಿ ಅಪರಾಧಿಯಾಗಿದ್ದಾರೆ.

  ಆರು ಮಂದಿಯಿಂದ ಕಾವಲು

  ಆರು ಮಂದಿಯಿಂದ ಕಾವಲು

  ರಿಯಾ ಚಕ್ರವರ್ತಿ ಇರುವ ಕೊಠಡಿಯನ್ನು ಆರು ಮಂದಿ ಕಾನ್ಸ್‌ಟೇಬಲ್‌ಗಳು ದಿನಕ್ಕೆ ಮೂರು ಶಿಫ್ಟ್‌ಗನಲ್ಲಿ ಕಾವಲು ಕಾಯಲಿದ್ದಾರೆ. ಪ್ರಮುಖ ಪ್ರಕರಣವಾಗಿರುವ ಕಾರಣ ಭದ್ರತೆಯನ್ನು ಹೆಚ್ಚಿಗೆ ಇಡಲಾಗಿದೆ.

  ಮುಂಬೈನ ಏಕೈಕ ಮಹಿಳಾ ಜೈಲು

  ಮುಂಬೈನ ಏಕೈಕ ಮಹಿಳಾ ಜೈಲು

  ಬೈಕುಲ್ಲಾ ಜೈಲು, ಮುಂಬೈನ ಏಕೈಕ ಮಹಿಳಾ ಜೈಲಾಗಿದೆ. ಈ ಜೈಲಿನಲ್ಲಿ ಕೆಲವು ದಿನಗಳ ಮುಂಚೆ ಕೆಲವು ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದವು. ಹಾಗಾಗಿ ಜೈಲಿನಲ್ಲಿ ಅರಿಶಿಣ ಮಿಶ್ರಿತ ಹಾಲು ಹಾಗೂ ಇನ್ನಿತರ ರೋಗನಿರೋಧಕಶಕ್ತಿ ಉತ್ತೇಜಕ ಆಹಾರ ನೀಡಲಾಗುತ್ತಿದ್ದು, ರಿಯಾ ಗೂ ಇದೇ ಆಹಾರ ನೀಡಲಾಗುತ್ತದೆ ಎಂದಿದ್ದಾರೆ ಜೈಲು ಅಧಿಕಾರಿ.

  Rakesh Adiga spiritual Rap , ಕನ್ನಡಧ Rapperಗಳಿಗೆ ಕಿವಿಮಾತು | Rakesh Adiga | Filmibeat Kannada
  ಜಾಮೀನು ಅರ್ಜಿ ತಿರಸ್ಕಾರ

  ಜಾಮೀನು ಅರ್ಜಿ ತಿರಸ್ಕಾರ

  ರಿಯಾ ಚಕ್ರವರ್ತಿಯನ್ನು ಕಳೆದ ಮಂಗಳವಾರ ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದರು. ಆಕೆಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ರಿಯಾ ಸಲ್ಲಿಸಿದ್ದ ಜಾಮೀನು ಅರ್ಜಿ ಇಂದು ವಿಚಾರಣೆ ನಡೆದು, ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ.

  English summary
  Actress Rhea Chakraborty kept in separate room in Byculla jail in Mumbai for security reasons. She wont get fan or bed in her room.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X