For Quick Alerts
  ALLOW NOTIFICATIONS  
  For Daily Alerts

  'ದೃಶ್ಯಂ' ಖ್ಯಾತಿಯ ನಿರ್ದೇಶಕ ನಿಶಿಕಾಂತ್ ಕಾಮತ್ ಆರೋಗ್ಯ ಸ್ಥಿತಿ ಗಂಭೀರ

  |

  'ದೃಶ್ಯಂ' ಸಿನಿಮಾ ಖ್ಯಾತಿಯ ನಿರ್ದೇಶಕ ನಿಶಿಕಾಂತ್ ಕಾಮತ್ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿರುವ 50 ವರ್ಷದ ನಿಶಿತಾಂತ್ ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜುಲೈ 31ರಂದು ನಿಶಿಕಾಂತ್ ಹೈದರಾಬಾದ್ ನ ಆಸ್ಪತ್ರೆಗೆ ದಾಖಲಾಗಿದ್ದು, ತೀವ್ರ ನಿಗಾಘಟಕದಲ್ಲಿದ್ದಾರೆ.

  'ಮಳೆ' ಚಿತ್ರದಲ್ಲಿನ Sadhu Kokila , Prem , Amulya behind the scenes

  ರಾಕಿ ಹ್ಯಾಂಡ್ಸಮ್, ಮದಾರಿ ಅಂತಹ ಜನಪ್ರಿಯ ಸಿನಿಮಾಗಳನ್ನು ನೀಡಿರುವ ನಿಶಿಕಾಂತ್ ಕಾಮತ್, ದೃಶ್ಯಂ ಸಿನಿಮಾ ಮೂಲಕ ಮತ್ತಷ್ಟು ಖ್ಯಾತಿಗಳಿಸಿದ್ದರು. ನಿಶಿಕಾಂತ್ ಆರೋಗ್ಯ ಸ್ಥಿತಿ ಗಂಭೀರವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ವದಂತಿಗಳು ಹರಿದಾಡಲು ಪ್ರಾರಂಭವಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ನಟ ರಿತೇಶ್ ದೇಶಮುಖ್ "ನಿಶಿಕಾಂತ್ ಇನ್ನೂ ಜೀವಂತವಾಗಿದ್ದಾರೆ, ವೆಂಟಿಲೇಟರ್ ನಲ್ಲಿದ್ದಾರೆ." ಎಂದು ನಟ ರಿತೇಶ್ ದೇಶಮುಖ್ ಟ್ವೀಟ್ ಮಾಡಿದ್ದಾರೆ.

  ಇನ್ನೂ ನಿಶಿಕಾಂತ್ ಸ್ನೇಹಿತ ಮಿಲಾಪ್ ಜವೇರಿ ಪ್ರತಿಕ್ರಿಯೆ ನೀಡಿ "ನಿಶಿಕಾಂತ್ ಇನ್ನೂ ಜೀವಂತವಾಗಿದ್ದಾರೆ. ಆದರೆ ಅವರ ಕಂಡಿಷನ್ ಕ್ರಿಟಿಕಲ್ ಆಗಿದ್ದು, ವೆಂಟಿಲೇಟರ್ ನಲ್ಲಿದ್ದಾರೆ" ಎಂದು ಹೇಳಿದ್ದಾರೆ.

  ನಿಶಿಕಾಂತ್ ಮರಾಠಿ ಸಿನಿಮಾ ಮೂಲಕ ನಿರ್ದೇಶನಕ್ಕೆ ಕಾಲಿಟ್ಟಿದ್ದಾರೆ. 2005ರಲ್ಲಿ ರಿಲೀಸ್ ಆದ 'ಡೊಂಬಿವಾಲಿ ಫಾಸ್ಟ್' ನಿಶಾಂತ್ ನಿರ್ದೇಶದ ಚೊಚ್ಚಲ ಸಿನಿಮಾ. ಈ ಸಿನಿಮಾ ಮರಾಠಿಯಲ್ಲಿ ದೊಡ್ಡ ಮಟ್ಟಕ್ಕೆ ಹಿಟ್ ಆಗಿದೆ.

  2006ರಲ್ಲಿ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನೂ ಗೆದ್ದುಕೊಂಡಿದ್ದಾರೆ. ಇನ್ನೂ 2015ರಲ್ಲಿ ರಿಲೀಸ್ ಆದ ಅಜಯ್ ದೇವಗನ್ ಟಬು ಅಭಿನಯದ ಮಲಯಾಳಂನ ಸೂಪರ್ ಹಿಟ್ ದೃಶ್ಯಂ ಸಿನಿಮಾದ ಹಿಂದಿ ರಿಮೇಕ್ ಮಾಡಿ ರಾಷ್ಟ್ರೀಯ ಗಮನ ಸೆಳೆದಿದ್ದರು. ನಿಶಿಕಾಂತ್ ಬೇಗ ಗುಣಮುಖರಾಗಲಿ ಎಂದು ಸ್ನೇಹಿತರು, ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ.

  English summary
  Drishyam fame director Nishikant Kamat death rumours, Riteish Deshmukh says Nishikant kamat is on ventilator support. He is still alive & fighting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X