For Quick Alerts
  ALLOW NOTIFICATIONS  
  For Daily Alerts

  ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಸಚಿನ್ ತೆಂಡೂಲ್ಕರ್ ಮಗಳು

  |

  ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮಗಳು ಯಾವ ಸಿನಿಮಾ ನಟಿಯರಿಗೆ ಕಡಿಮೆ ಇಲ್ಲದಷ್ಟು ಸುಂದರಿ. ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಯೂ ಸಹ.

  ಸಾರಾ ತೆಂಡೂಲ್ಕರ್ ಸುತ್ತ ಕೆಲವು ಗಾಳಿ ಸುದ್ದಿಗಳು ಕೆಲ ವರ್ಷಗಳ ಹಿಂದೆ ಹರಿದಾಡಿದ್ದವು. ಸಾರಾ ತೆಂಡೂಲ್ಕರ್ ಸಿನಿಮಾ ರಂಗಕ್ಕೆ ಬರುತ್ತಾರೆಂದೂ, ರಣ್ಬೀರ್ ಕಪೂರ್ ಸಿನಿಮಾದಲ್ಲಿ ನಾಯಕಿಯಾಗಿ ಆಯ್ಕೆಯೇ ಆಗಿಬಿಟ್ಟಿದ್ದಾರೆಂದೂ ಹೇಳಲಾಗಿತ್ತು. ಆದರೆ ಅವೆಲ್ಲವೂ ಸುಳ್ಳಾದವು.

  ಸಾರಾ ತೆಂಡೂಲ್ಕರ್ ಸಿನಿಮಾ ರಂಗಕ್ಕೆ ಕಾಲಿಟ್ಟಿಲ್ಲವಾದರೂ ಮಾಡೆಲಿಂಗ್‌ಗೆ ಪದಾರ್ಪಣೆ ಮಾಡಿದ್ದಾರೆ. ಸಾರಾ, ಜನಪ್ರಿಯ ಬಟ್ಟೆಗಳ ಬ್ರ್ಯಾಂಡ್‌ನ ಜಾಹೀರಾತಿನಲ್ಲಿ ನಟಿಸಿದ್ದಾರೆ. ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಪ್ರಖ್ಯಾತ ಉಡುಪು ಬ್ರ್ಯಾಂಡ್ ಎಜಿಯೊನ ಹೊಸ ಉಡುಪು ಶ್ರೇಣಿಯನ್ನು ಹೊರತಂದಿದ್ದು ಅದಕ್ಕಾಗಿ ಸಾರಾ ತೆಂಡೂಲ್ಕರ್ ಮಾಡೆಲಿಂಗ್ ಮಾಡಿದ್ದಾರೆ. ಸಾರಾ ತೆಂಡೂಲ್ಕರ್ ಜೊತೆಗೆ ನಟಿ ಬನಿತಾ ಸಂಧು ಹಾಗೂ ಟಾನಿಯಾ ಶ್ರಾಫ್ ಸಹ ಇದ್ದಾರೆ. ಮೂವರು ಒಟ್ಟಿಗೆ ವಿಡಿಯೋನಲ್ಲಿ ಕಾಣಿಸಿಕೊಂಡಿದ್ದಾರೆ.

  ಇದು ಸಾರಾ ತೆಂಡೂಲ್ಕರ್ ಅವರ ಮೊದಲ ಜಾಹೀರಾತಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಮಾಡೆಲಿಂಗ್, ನಟನೆ ಮಾಡುವ ಸಾಧ್ಯತೆ ಇದೆ. ಬಾಲಿವುಡ್‌ಗೆ ಬಂದರೂ ಬರಬಹುದು ಸಾರಾ.

  ಜಾಹೀರಾತಿನಲ್ಲಿ ಸಾರಾ ಜೊತೆಗೆ ಕಾಣಿಸಿಕೊಂಡಿರುವ ಬನಿತಾ ಸಂಧು ನಟಿಯಾಗಿ ಈಗಾಗಲೇ ಬಾಲಿವುಡ್‌ನಲ್ಲಿ ಕೆಲವು ಸ್ಟಾರ್ ನಟರೊಂದಿಗೆ ನಟಿಸಿದ್ದಾರೆ. 2018 ರಲ್ಲಿ ಬಿಡುಗಡೆ ಆದ 'ಅಕ್ಟೋಬರ್' ಸಿನಿಮಾದಲ್ಲಿ ವರುಣ್ ಧವನ್ ಎದುರು ಅವರು ನಟಿಸಿದ್ದರು. ನಂತರ ತಮಿಳಿನ ಆದಿತ್ಯ ವರ್ಮಾ ಹೆಸರಿನ ಸಿನಿಮಾ ಮಾಡಿದರು. ಬಳಿಕ ಇಂಗ್ಲೀಷ್‌ನಲ್ಲಿ 'ಎಟರ್ನಲ್ ಬ್ಯೂಟಿ' ಹೆಸರಿನ ಸಿನಿಮಾದಲ್ಲಿ ನಟಿಸಿದರು. ಬಳಿಕ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆದ 'ಸರ್ದಾರ್ ಉದ್ಧಮ್' ಸಿನಿಮಾದಲ್ಲಿ ನಟಿಸಿದರು ಸಂಧು.

  ಇನ್ನು ಅದೇ ಜಾಹೀರಾತಿನಲ್ಲಿ ಸಾರಾ ತೆಂಡೂಲ್ಕರ್ ಹಾಗೂ ಬನಿತಾ ಸಂಧು ಜೊತೆಗೆ ಕಾಣಿಸಿಕೊಂಡಿರುವ ತಾನಿಯಾ ಶ್ರಾಫ್, ಮುಂಬೈನ ಜನಪ್ರಿಯ ಉದ್ಯಮಿ ಜೈದೇವ್ ಶ್ರಾಫ್ ಹಾಗೂ ರೂಮಿಲಾ ಶ್ರಾಫ್‌ ಅವರುಗಳ ಮಗಳು.

  English summary
  Sachin Tendulkar's daughtr Sara Tendulkar started modeling. She acted in a ad for Ajio brand.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X