For Quick Alerts
  ALLOW NOTIFICATIONS  
  For Daily Alerts

  ಮಗಳ ಬಾಲಿವುಡ್ ಎಂಟ್ರಿಗೆ ಅಪ್ಪ ಸೈಫ್ ಅಲಿ ಖಾನ್ ಬೇಸರ!

  By Suneel
  |

  ಬಾಲಿವುಡ್ ನ ತುಂಬಾ ಸ್ಟೈಲಿಶ್ ನಟ ಅಂದ್ರೆ ಅದೂ ಸೈಫ್ ಅಲಿ ಖಾನ್. ಈ ನಟನಷ್ಟೆ ತುಂಬಾ ಗ್ಲಾಮರ್ ಹಾಗು ಸುಂದರವಾಗಿದ್ದಾಳೆ ಮಗಳಾದ ಸಾರಾ ಅಲಿ ಖಾನ್. ಈಗ ತಮ್ಮ ಫೋಷಕರಂತೆ ಸಾರಾ ಸಹ ಬಾಲಿವುಡ್ ನಲ್ಲಿ ನೆಲೆ ಕಂಡುಕೊಂಡಲು ಬಯಸಿದ್ದಾಳೆ.

  ಆದರೆ ಇತರೆ ತಂದೆಯರಂತೆ ಅಲ್ಲದ ನಟ ಸೈಫ್ ಅಲಿ ಖಾನ್ ತಮ್ಮ ಮಗಳು ಬಾಲಿವುಡ್ ಗೆ ಪಾದಾರ್ಪಣೆ ಮಾಡುವುದಕ್ಕೆ ತಡೆಯೊಡ್ಡುತ್ತಿದ್ದಾರಂತೆ. ಹಿಂದಿ ಚಿತ್ರರಂಗಕ್ಕೆ ಕಡ್ಡಾಯವಾಗಿ ಸಾರಾ ಎಂಟ್ರಿಕೊಡುವುದು ಬೇಡ ಎಂಬ ನಿಟ್ಟಿನಲ್ಲಿ ಸೈಫ್ ಹೇಳಿದ್ದಾರೆ. ಅವರ ಮಾತು ಕೇಳಿದರೆ.. ಎಂತಹವರಿಗೂ ಕಾರಣ ಏನಿರಬಹುದು ಎಂದು ಕಾಡುವುದು ಸಹಜ. ಅದಕ್ಕೆ ಉತ್ತರ ಇಲ್ಲಿದೆ. ಮುಂದೆ ಓದಿ..

  ಬಾಲಿವುಡ್ ಎಂಟ್ರಿ ಬಗ್ಗೆ ಸೈಫ್ ಅಸಮಾಧಾನ

  ಬಾಲಿವುಡ್ ಎಂಟ್ರಿ ಬಗ್ಗೆ ಸೈಫ್ ಅಸಮಾಧಾನ

  ಸಾರಾ ಅಲಿ ಖಾನ್ ಈಗಾಗಲೇ ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಚಿತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಗಳ ಬಾಲಿವುಡ್ ಎಂಟ್ರಿ ಬಗ್ಗೆ ಸೈಫ್ ಅಲಿ ಖಾನ್ ರಲ್ಲಿ ಪ್ರತಿಕ್ರಿಯೆ ಕೇಳಲಾಗಿತ್ತು. ಈ ಬಗ್ಗೆ ಡಿಎನ್‌ಎ ಗೆ ಉತ್ತರಿಸಿರುವ ಸೈಫ್, 'ಇಲ್ಲಿ ಮಾನಸಿಕ ಒತ್ತಡವಿದೆ. ಹಿಂದಿ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುವ ಭಯ ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಹೆಚ್ಚು ಕಾಡುತ್ತಿದೆ" ಎಂದಿದ್ದಾರೆ.

  ಎಲ್ಲರೂ ಆತಂಕದಿಂದಲೇ ಬದುಕುತ್ತಾರೆ

  ಎಲ್ಲರೂ ಆತಂಕದಿಂದಲೇ ಬದುಕುತ್ತಾರೆ

  "ಸಾರಾ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲು ಏಕೆ ನಿರ್ಧರಿಸಿದಳೋ ಗೊತ್ತಿಲ್ಲ. ನ್ಯೂಯಾರ್ಕ್ ನಲ್ಲಿ ಶಿಕ್ಷಣ ಪಡೆದಿದ್ದಾಳೆ. ಅಲ್ಲಿಯೇ ಯಾವುದಾದರೂ ವೃತ್ತಿ ಕಂಡುಕೊಳ್ಳುವ ಬದಲು.. ನಟಿ ಆಗಲು ಬಯಸುತ್ತಿರುವುದು ಏಕೆ?.. ಇದೊಂದು ಸ್ಥಿರವಲ್ಲದ ವೃತ್ತಿ. ಇಲ್ಲಿ ಎಲ್ಲರೂ ಆತಂಕದಿಂದಲೇ ಬದುಕುತ್ತಾರೆ" ಎಂದು ಸಂದರ್ಶನದ ವೇಳೆ ಸೈಫ್ ಅಲಿ ಖಾನ್ ಹೇಳಿದ್ದಾರೆ.

  ಆಕೆ ನಟನೆ ನೋಡಲು ಕಾತುರನಾಗಿಲ್ಲ

  ಆಕೆ ನಟನೆ ನೋಡಲು ಕಾತುರನಾಗಿಲ್ಲ

  ಸಂದರ್ಶನದಲ್ಲಿ ಸಾರಾ ಚಿತ್ರರಂಗದ ಎಂಟ್ರಿ ಬಗ್ಗೆ ಮಾತು ಮುಂದುವರೆಸಿದ ಸೈಫ್, "ನಾನು ಆಕೆ ಅಭಿನಯ ನೋಡಲು ಕಾತುರನಾಗಿಲ್ಲ. ಆದರೆ ಇದು ಹೆಚ್ಚು ಸ್ಥಿರವಾದ ವೃತ್ತಿ ಅಲ್ಲ. ಎಲ್ಲರೂ ಅವರದ್ದೇ ಆದ ಭಯದಲ್ಲಿ ಬದುಕುತ್ತಾರೆ. ಹೆಚ್ಚು ಶ್ರಮ ಇಲ್ಲದೇ ಇಲ್ಲಿ ಸಕ್ಸಸ್ ಆಗುವ ಬಗ್ಗೆ ಗ್ಯಾರಂಟಿ ಇರುವುದಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  ಸಾರಾಗೆ ಸೈಪ್ ಬಯಸಿದ್ದು ಈ ವೃತ್ತಿ ಅಲ್ಲ

  ಸಾರಾಗೆ ಸೈಪ್ ಬಯಸಿದ್ದು ಈ ವೃತ್ತಿ ಅಲ್ಲ

  "ಇತರೆ ಪೋ‍ಷಕರು ತಮ್ಮ ಮಕ್ಕಳಿಗೆ ಸಿನಿಮಾ ವೃತ್ತಿ ಬಯಸಬಹುದು. ಆದರೆ ನಾನು ಸಾರಾಗೆ ಈ ಲೈಫ್ ಬೇಕು ಎಂದು ಬಯಸಿಲ್ಲ. ಆಕೆ ಚಿತ್ರರಂಗಕ್ಕೆ ಬರುವುದರಲ್ಲಿ ನನ್ನ ಪಾತ್ರವಿಲ್ಲ. ಈ ಬಗ್ಗೆ ನಾನು ಮಾತನಾಡುವುದು ಇಲ್ಲ" ಎಂದು ಸಾರಾ ವೃತ್ತಿ ಬಗ್ಗೆ ತಳಮಳ ವ್ಯಕ್ತಪಡಿಸಿದ್ದಾರೆ.

  ಸಾರಾ ಅಲಿ ಖಾನ್

  ಸಾರಾ ಅಲಿ ಖಾನ್

  ಸಾರಾ ಅಲಿ ಖಾನ್ ಸಿನಿಮಾದಲ್ಲಿ ನಟಿಸುವುದನ್ನು ನೋಡಲು ತಾಯಿ ಅಮೃತಾ ಸಿಂಗ್ ಕಾತುರರಾಗಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಚಿತ್ರದಲ್ಲಿ ಸಾರಾ ಅಲಿ ಖಾನ್ ನಟಿಸುತ್ತಿದ್ದು, ಈ ಚಿತ್ರಕ್ಕೆ ಅಭಿಷೇಕ್ ಕಪೂರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  English summary
  Bollywood Actor Saif Ali Khan Is Trying To stop daughter Sara Ali Khan From Entering Bollywood!.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X