»   » ಅಗ್ರಸ್ಥಾನದಿಂದ ಶಾರುಖ್ ಕೆಳಕ್ಕೆ ತಳ್ಳಿದ ಸಲ್ಮಾನ್

ಅಗ್ರಸ್ಥಾನದಿಂದ ಶಾರುಖ್ ಕೆಳಕ್ಕೆ ತಳ್ಳಿದ ಸಲ್ಮಾನ್

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಾಲಿವುಡ್ ಅತ್ಯಂತ ಜನಪ್ರಿಯ ನಟರಾದ ಸಲ್ಮಾನ್ ಹಾಗೂ ಶಾರುಖ್ ಸಮ್ಮಿಲನವನ್ನು ಜಗತ್ತಿನ ಅದ್ಭುತ ಎಂಬಂತೆ ಎಲ್ಲಾ ಮಾಧ್ಯಮಗಳು ವರದಿ ಮಾಡಿದ್ದನ್ನು ಅಭಿಮಾನಿಗಳು ಮರೆಯಲು ಸಾಧ್ಯವಿಲ್ಲ. ಅದರೆ, ಈಗ ಅಗ್ರಸ್ಥಾನದಿಂದ ಶಾರುಖ್ ಖಾನ್ ಅವರನ್ನು ಸಲ್ಮಾನ್ ಅವರು ಕೆಳಕ್ಕೆ ತಳ್ಳಿರುವ ಸುದ್ದಿ ಬಂದಿದೆ.

ಫೋರ್ಬ್ ಮ್ಯಾಗಜೀನ್ ನ ಜನಪ್ರಿಯ ಸೆಲೆಬ್ರಿಟಿ 2014ರ ಪಟ್ಟಿಯಲ್ಲಿ ಶಾರುಖ್ ಖಾನ್ ಅವರು ಅಗ್ರಸ್ಥಾನವನ್ನು ಸಲ್ಮಾನ್ ಗೆ ಬಿಟ್ಟುಕೊಟ್ಟಿದ್ದಾರೆ.

ಕಳೆದ ವರ್ಷ ಮೂರನೇ ಸ್ಥಾನದಲ್ಲಿದ್ದ ಸಲ್ಮಾನ್ ಖಾನ್ ಈಗ ನಂ.1 ಎನಿಸಿಕೊಂಡಿದ್ದಾರೆ. ಶಾರುಖ್ ಅವರ ಜನಪ್ರಿಯತೆ ಈ ವರ್ಷ ಕುಗ್ಗಿದೆ. ಹ್ಯಾಪಿ ನ್ಯೂ ಇಯರ್ ಚಿತ್ರಕ್ಕಾಗಿ ತಯಾರಿ ನಡೆಸಿದ ಶಾರುಖ್ ಅವರ ಯಾವುದೇ ಬಿಗ್ ಬಜೆಟ್ ಚಿತ್ರಗಳು ತೆರೆ ಕಂಡಿರಲಿಲ್ಲ. [ಫೋರ್ಬ್ಸ್ ಪಟ್ಟಿ: ಮಾಡೆಲಿಂಗ್ ಜಗತ್ತಿನ ರಾಣಿಯರು]

ಯಂಗೀಸ್ತಾನ್, ಭೂತ್ ನಾಥ್ ರಿಟರ್ನ್ಸ್ ಚಿತ್ರಗಳಲ್ಲಿ ಅತಿಥಿ ಪಾತ್ರದಲ್ಲಿ ಶಾರುಖ್ ಖಾನ್ ಕಾಣಿಸಿಕೊಂಡಿದ್ದರು. ಇತ್ತ ಸಲ್ಮಾನ್ ಅವರು ಕಿಕ್ ಹಾಗೂ ಜೈ ಹೋ ಚಿತ್ರಗಳ ಯಶಸ್ಸಿನ ಜೊತೆಗೆ ಟಿವಿ ಶೋ ಬಿಗ್ ಬಾಸ್ ನಿಂದ ಜನಪ್ರಿಯತೆ ಹೆಚ್ಚಿಕೊಂಡರು.

Salman dethrones SRK in Forbes 2014 Celebrity 100 list

ಹೀರೋಯಿನ್ ಗಳ ಪೈಕಿ ದೀಪಿಕಾ ಈ ವರ್ಷ ಟಾಪ್ ಟೆನ್ ಸ್ಥಾನದಲ್ಲಿರುವ ಏಕೈಕ ಬಾಲಿವುಡ್ ನಟಿ ಎನಿಸಿಕೊಂಡಿದ್ದಾರೆ. ಹ್ಯಾಪಿ ನ್ಯೂ ಇಯರ್, ಫೈಂಡಿಂಗ್ ಫ್ಯಾನಿ ಚಿತ್ರಗಳ ಯಶಸ್ಸಿನ ನಂತರ ದೀಪಿಕಾ ಪಡುಕೋಣೆ ಅವರು 67.20 ಕೋಟಿ ಗಳಿಕೆ ಹೊಂದಿ 8ನೇ ಸ್ಥಾನದಲ್ಲಿದ್ದಾರೆ.

ಫೋರ್ಬ್ಸ್ ಪಟ್ಟಿಯಲ್ಲಿ ಜನಪ್ರಿಯತೆ ಜೊತೆಗೆ ಗಳಿಕೆಯನ್ನು ಪರಿಗಣಿಸಲಾಗುತ್ತದೆ. ನಟ, ನಟಿ, ಕ್ರೀಡಾಪಟು, ಲೇಖಕ, ಸಿನಿಮಾ ನಿರ್ದೇಶಕ, ಸಂಗೀತ ನಿರ್ದೇಶಕ ಮುಂತಾದವರೂ ಸೇರಿದ್ದಾರೆ. ಅಕ್ಟೋಬರ್ 1, 2013ರಿಂದ ಸೆಪ್ಟೆಂಬರ್ 30,2014ರ ತನಕದ ಜನಪ್ರಿಯತೆ(ಮುದ್ರಣ, ಟಿವಿ ಹಾಗೂ ಇಂಟರ್ನೆಟ್ ಮಾಧ್ಯಮಗಳಲ್ಲಿ), ಗಳಿಕೆಯನ್ನು ಅಳೆದು ಪಟ್ಟಿ ಪ್ರಕಟಿಸಲಾಗುತ್ತದೆ. [ಸಲ್ಲೂ ತಂಗಿ ಅರ್ಪಿತಾ ಹರಸಲು ಬಂದ ಶಾರುಖ್]

ಟಾಪ್ 10 ಸೆಲೆಬ್ರಿಟಿಗಳು ಹಾಗೂ ಅವರ ಗಳಿಕೆ ಪಟ್ಟಿ ಹೀಗಿದೆ: (ಗಳಿಕೆಯಲ್ಲಿ ವ್ಯತ್ಯಯವಿದ್ದರೂ ಜನಪ್ರಿಯತೆ ಆಧಾರದ ಮೇಲೆ ಟಾಪ್ ಟೆನ್ ನಿರ್ಧರಿಸಲಾಗಿದೆ).
1. ಸಲ್ಮಾನ್ ಖಾನ್ : 244.50 ಕೋಟಿ ರು
2. ಅಮಿತಾಬ್ ಬಚ್ಚನ್ : 196.75 ಕೋಟಿ ರು
3. ಶಾರುಖ್ ಖಾನ್ : 202.40 ಕೋಟಿ ರು
4. ಎಂಎಸ್ ಧೋನಿ : 141.80 ಕೋಟಿ ರು
5. ಅಕ್ಷಯ್ ಕುಮಾರ್ : 172 ಕೋಟಿ ರು
6. ವಿರಾಟ್ ಕೊಹ್ಲಿ : 58.43 ಕೋಟಿ ರು
7 . ಅಮೀರ್ ಖಾನ್ : 80.47 ಕೋಟಿ ರು
8. ದೀಪಿಕಾ ಪಡುಕೋಣೆ : 67.20 ಕೋಟಿ ರು
9. ಹೃತಿಕ್ ರೋಷನ್ : 85 ಕೋಟಿ ರು
10. ಸಚಿನ್ ತೆಂಡೂಲ್ಕರ್ 59.57 ಕೋಟಿ ರು

English summary
Actors Shah Rukh Khan and Salman Khan may be starting a new chapter of their friendship after an undeclared cold war, but the latter has dethroned the former by grabbing the top spot in Celebrity 100 list for 2014 of Forbes magazine.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada