For Quick Alerts
  ALLOW NOTIFICATIONS  
  For Daily Alerts

  ಜಮೀನು ಕಬ್ಜಾ ಮಾಡಿದ್ದಾನೆಂದು ಆರೋಪಿಸಿದ ವ್ಯಕ್ತಿ ವಿರುದ್ಧ ಸಲ್ಮಾನ್ ದೂರು

  |

  ಸಲ್ಮಾನ್ ಖಾನ್ ತಮ್ಮ ನೆರೆಯವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಸಲ್ಮಾನ್ ಖಾನ್ , ಪನ್‌ವೆಲಾನಲ್ಲಿ ಫಾರಂ ಹೌಸ್ ಹೊಂದಿದ್ದಾರೆ. ಕೃಷಿಯ ಜೊತೆಗೆ ಕುದುರೆ ಸಾಕುವುದು ಇನ್ನಿತರೆ ಕಾರ್ಯಗಳನ್ನು ಪನ್ವೇಲಾದ ಫಾರಂ ಹೌಸ್‌ನಲ್ಲಿ ಸಲ್ಮಾನ್ ಮಾಡುತ್ತಾರೆ.

  ಸಲ್ಮಾನ್‌ರ ಪನ್ವೇಲಾದ ಫಾರಂ ಹೌಸ್ ಪಕ್ಕದಲ್ಲಿಯೇ ಕೇತನ್ ಕಕ್ಕಡ್ ಹೆಸರಿನ ವ್ಯಕ್ತಿಯೊಬ್ಬರ ಜಮೀನು ಇದೆ. ಅವರು ಯೂಟ್ಯೂಬ್ ಚಾನೆಲ್ ಒಂದರಲ್ಲಿ ಮಾತನಾಡುತ್ತಾ, ಸಲ್ಮಾನ್ ಖಾನ್ ತಮಗೆ ಸೇರಿದ ಜಮೀನನ್ನು ಕಬ್ಜಾ ಮಾಡಿದ್ದಾರೆ. ನನ್ನದು ಮಾತ್ರವಲ್ಲ ಇತರರ ಜಮೀನು ಸಹ ಕಬ್ಜಾ ಮಾಡಿದ್ದಾರೆ, ಪನ್ವೆಲಾದಲ್ಲಿ ಸಲ್ಮಾನ್ ಖಾನ್ ಭೂ ಮಾಫಿಯಾ ನಡೆಸುತ್ತಿದ್ದಾರೆ ಎಂದು ಆರೋಪ ಮಾಡಿದ್ದರು.

  ಕೇತನ್ ಕಕ್ಕಡ್ ಸಂದರ್ಶನ ನೀಡಿದ್ದ ಯೂಟ್ಯೂಬ್ ಚಾನೆಲ್‌ನಲ್ಲಿ ಸಲ್ಮಾನ್ ಖಾನ್ ಧರ್ಮವನ್ನು ಸಹ ಟೀಕಿಸಲಾಗಿತ್ತು. ತಮ್ಮ ವಿರುದ್ಧ ಆರೋಪ ಮಾಡಿದ ಕೇತನ್ ಕಕ್ಕಡ್ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆಯನ್ನು ಸಲ್ಮಾನ್ ಖಾನ್ ಹೂಡಿದ್ದಾರೆ.

  ಕೇತನ್ ಕಕ್ಕಡ್ ಮಾತ್ರವೇ ಅಲ್ಲದೆ ಯೂಟ್ಯೂಬ್ ಚಾನೆಲ್‌ನ ಸಂದರ್ಶನದಲ್ಲಿ ಹಾಜರಿದ್ದ ಇಬ್ಬರು ಯುವತಿಯರ ಮೇಲೂ ದಾವೆ ಹೂಡಲಾಗಿದೆ. ಆ ಇಬ್ಬರು ಮಹಿಳೆಯರು ಸಹ ಸಲ್ಮಾನ್ ಖಾನ್ ಅನ್ನು ದೂಷಿಸಿದ್ದರು. ಸಲ್ಮಾನ್ ಖಾನ್‌ರ ಹಳೆಯ ಪ್ರಕರಣಗಳ ಬಗ್ಗೆಯೂ ಯೂಟ್ಯೂಬ್ ಸಂದರ್ಶನದಲ್ಲಿ ಕಕ್ಕಡ್ ಮತ್ತು ಇಬ್ಬರು ಮಹಿಳೆಯರು ಚರ್ಚೆ ಮಾಡಿ, ಸಲ್ಮಾನ್ ಖಾನ್ ಅನ್ನು ದೂಷಿಸಿದ್ದಾರೆ.

  ತಮ್ಮ ವಿರುದ್ಧ ನೇರವಾಗಿ, ಪರೋಕ್ಷವಾಗಿ, ಸಾಮಾಜಿಕ ಜಾಲತಾಣದಲ್ಲಿ ಅಥವಾ ಇನ್ನಾವುದೇ ಕಡೆಗಳಲ್ಲಿ ಇಲ್ಲ-ಸಲ್ಲದ, ಸುಳ್ಳು ಹೇಳಿಕೆಗಳನ್ನು, ಸಂದರ್ಶನಗಳನ್ನು ನೀಡುವುದರ ವಿರುದ್ಧ ತಡೆಯಾಜ್ಞೆ ನೀಡಬೇಕು ಎಂದು ಸಲ್ಮಾನ್ ಖಾನ್ ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ.

  ಅರ್ಜಿಯ ವಿಚಾರಣೆ ನಿನ್ನೆ ನಡೆದಿದ್ದು, ಕಕ್ಕಡ್ ಕಡೆಯ ವಕೀಲರು, ಸಲ್ಮಾನ್ ಖಾನ್ ಅರ್ಜಿಗೆ ಉತ್ತರ ನೀಡಲು ಸಮಯ ಕೇಳಿದ್ದಾರೆ. ''ನಮಗೆ ನಿನ್ನೆಯಷ್ಟೆ ನೋಟಿಸ್ ದೊರೆತಿದೆ. ಸಲ್ಮಾನ್ ಖಾನ್ ಕೇಸು ಹಾಕಲು ಒಂದು ತಿಂಗಳು ಕಾದಿದ್ದಾರೆ. ನಮಗೆ ಉತ್ತರ ನೀಡಲು ಕಾಲಾವಕಾಶ ಕೊಡಿ'' ಎಂದು ಮನವಿ ಮಾಡಿದ್ದಾರೆ. ಅರ್ಜಿಯ ವಿಚಾರಣೆ ಇದೇ ತಿಂಗಳ 21ನೇ ತಾರೀಖಿನಂದು ನಡೆಯಲಿದೆ.

  English summary
  Actor Salman Khan filed defamation case against his neighbor Kettan Kakkad. He has a land beside Salaman Khan's Panvel farm house.
  Saturday, January 15, 2022, 9:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X