»   » ಇದೇ ಮೊದಲ ಬಾರಿಗೆ ಕ್ರೀಡಾ ಪ್ರಧಾನ ಚಿತ್ರದಲ್ಲಿ ಸಲ್ಲು

ಇದೇ ಮೊದಲ ಬಾರಿಗೆ ಕ್ರೀಡಾ ಪ್ರಧಾನ ಚಿತ್ರದಲ್ಲಿ ಸಲ್ಲು

Posted By:
Subscribe to Filmibeat Kannada

ಇಷ್ಟು ದಿನ ಸಲ್ಮಾನ್ ಖಾನ್ ಬೆಳ್ಳಿಪರದೆಯ ಮೇಲೆ ಲವರ್ ಬಾಯ್ ಆಗಿಯೇ ಹೆಚ್ಚಾಗಿ ಗುರುತಿಸಿಕೊಂಡವರು. ಆದರೆ ಇದೇ ಮೊದಲ ಬಾರಿಗೆ ಅವರು ಕ್ರೀಡಾ ಪ್ರಧಾನ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಅವರ ಹೊಸ ಚಿತ್ರಕ್ಕೆ ಸುಲ್ತಾನ್ ಎಂದು ಹೆಸರಿಡಲಾಗಿದೆ.

ಈ ಚಿತ್ರಕ್ಕೆ ಅಲಿ ಅಬ್ಬಾಸ್ ಝಾಫರ್ ಅವರು ಆಕ್ಷನ್ ಕಟ್ ಹೇಳಿದ್ದು, ಇದೇ ಮೊದಲ ಬಾರಿಗೆ ಬಾಕ್ಸರ್ ಆಗಿ ಸಲ್ಮಾನ್ ಖಾನ್ ಕಾಣಿಸಲಿದ್ದಾರೆ. ಈ ಚಿತ್ರಕ್ಕಾಗಿ ಸಲ್ಲು ತಮ್ಮ ದೇಹವನ್ನು ಇನ್ನಷ್ಟು ಹುರಿಗಟ್ಟಿಸಬೇಕಾಗಿದೆ. ನಲವತ್ತು ವರ್ಷದ ಬಾಕ್ಸರ್ ಒಬ್ಬನ ಕಥೆ ಇದು ಎನ್ನುತ್ತವೆ ಮೂಲಗಳು.

salman-khan-in-sports-based-movie-sultan

ಒಂದೇ ತರಹದ ಚಿತ್ರಗಳನ್ನು, ಪಾತ್ರಗಳನ್ನು ನೋಡಿ ಸಲ್ಲು ಅಭಿಮಾನಿಗಳು ಅವರನ್ನು ಭಿನ್ನ ಗೆಟಪ್ ನಲ್ಲಿ ನೋಡಲು ಹಾತೊರೆಯುತ್ತಿದ್ದರು. ಬಹುಶಃ ಈಗ ಸಮಯ ಬಂದಿದೆ ಅನ್ನಿಸುತ್ತದೆ. ಈ ಚಿತ್ರ ಸೆಟ್ಟೇರಬೇಕಾದರೆ ಸ್ವಲ್ಪ ಸಮಯ ಬೇಕಾಗುತ್ತದೆ.

ಸದ್ಯಕ್ಕೆ ಸಲ್ಲು ಅವರು ಎರಡು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಒಂದು ಪ್ರೇಮ್ ರತನ್ ಧನ್ ಪಾಯೋ ಹಾಗೂ ಭಜರಂಗಿ ಭಾಯ್ ಜಾನ್. ಈ ಎರಡು ಚಿತ್ರಗಳು ಮುಗಿದ ಬಳಿಕ ಸುಲ್ತಾನ್ ಚಿತ್ರ ಆರಂಭವಾಗಲಿದೆ. ಉಳಿದ ತಾಂತ್ರಿಕ, ಪಾತ್ರವರ್ಗದ ಆಯ್ಕೆ ಇನ್ನಷ್ಟೇ ನಡೆಯಬೇಕು. (ಏಜೆನ್ಸೀಸ್)

English summary
Salman Khan is currently shooting for two of his upcoming films, Prem Ratan Dhan Payo and Bajrangi Bhaijaan, however Sallu Bhai has another interesting project in his hand and that is Sultan. The movie Sultan, directed by Ali Abbas Zafar, will be a sports based film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada