»   » ಯಾಕೂಬ್ ಮೆಮನ್ ಗಲ್ಲು: ಸಲ್ಮಾನ್ ಖಾನ್ Tweets

ಯಾಕೂಬ್ ಮೆಮನ್ ಗಲ್ಲು: ಸಲ್ಮಾನ್ ಖಾನ್ Tweets

Posted By:
Subscribe to Filmibeat Kannada

1993ರ ಸರಣಿ ಬಾಂಬ್ ಸ್ಪೋಟದ ಪ್ರಮುಖ ಅಪರಾಧಿ ಯಾಕೂಬ್ ಅಬ್ಬುಲ್ ರಜಾಕ್ ಮೆಮನ್ ಗಲ್ಲಿಗೇರಿಸುವ ವಿಚಾರದಲ್ಲಿ ಬಿಟೌನ್ ನಲ್ಲಿ ಭಾರಿ ಚರ್ಚೆಯಾಗುತ್ತಿದೆ. ಈ ಬಗ್ಗೆ ಬಾಲಿವುಡ್ ಬಿಗ್ ಸ್ಟಾರ್ ಗಳು ಕೂಡ ತಮ್ಮ ತಮ್ಮ ಮೈಕ್ರೋ ಬ್ಲಾಗಿಂಗ್ ಸೈಟ್ ಗಳಲ್ಲಿ ಹಂಚಿಕೊಂಡಿರುವುದು ಲೇಟೆಸ್ಟ್ ಮಾಹಿತಿ.

ಇದೀಗ 1993ರ ಮುಂಬೈ ಸ್ಪೋಟದ ಪ್ರಕರಣದಲ್ಲಿ ಅಪರಾಧಿಯಾಗಿರುವ ಯಾಕೂಬ್ ಮೆಮನ್ ಗೆ ಗಲ್ಲು ಶಿಕ್ಷೆ ನೀಡಬಾರದು ಅಂತ ಬಾಲಿವುಡ್ ಬಾಕ್ಸಾಫೀಸ್ ಸರದಾರ ಸಲ್ಮಾನ್ ಖಾನ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. [ಯಾಕೂಬ್ ಮೆಮನ್ ಗಲ್ಲಿಗೇರಿಸಲು ಡೇಟ್ ಫಿಕ್ಸ್]

ಮುಂಬೈ ಸ್ಪೋಟ ಪ್ರಕರಣದಲ್ಲಿ ಅಪರಾಧಿಯಾಗಿ ತಲೆಮರೆಸಿಕೊಂಡಿರುವ ಟೈಗರ್ ಮೆಮನ್ ನಿಜವಾದ ಅಪರಾಧಿ. ಆತನನ್ನು ಗಲ್ಲಿಗೇರಿಸಬೇಕು. ಯಾಕೂಬ್ ಮೆಮನ್ ಮುಗ್ದ ವ್ಯಕ್ತಿ ಅಂತ ಸಲ್ಮಾನ್ ಖಾನ್ ಈ ಬಗ್ಗೆ ತಮ್ಮ ಮೈಕ್ರೋ ಬ್ಲಾಗಿಂಗ್ ಸೈಟ್ ನಲ್ಲಿ ಬರೆದುಕೊಂಡಿದ್ದಾರೆ. [ಹುಟ್ಟುಹಬ್ಬದ ದಿನ(ಜುಲೈ 30)ದಂದೇ ಯಾಕೂಬ್ ಗೆ ಗಲ್ಲು ಶಿಕ್ಷೆ]


ಟೈಗರ್ ಮೆಮನ್ ಮಾಡಿದ ತಪ್ಪಿಗೆ ಆತನ ಸಹೋದರ ಯಾಕೂಬ್ ನನ್ನು ಗಲ್ಲಿಗೇರಿಸುವುದು ಸರಿಯಲ್ಲ ಎಂದಿರುವ ಸಲ್ಮಾನ್ ಖಾನ್ ಪಾಕ್ ಪ್ರಧಾನಿ ನವಾಜ್ ಶರೀಫ್ ಜೊತೆ ಟೈಗರ್ ಮೆಮನ್ ನನ್ನು ಭಾರತಕ್ಕೆ ಹಸ್ತಾಂತರ ಮಾಡುವಂತೆ ಮನವಿ ಮಾಡಿದ್ದಾರಂತೆ.[ಗಲ್ಲು ಶಿಕ್ಷೆಯ ದಿನ ಯಾಕೂಬ್ ಮೆಮನ್ ದಿನಚರಿ]

Salman Khan opposes Yakub Memon death sentence

1993ರ ಮಾರ್ಚ್ 12 ರಂದು ಮುಂಬೈನಲ್ಲಿ ಸರಣಿ ಬಾಂಬ್ ಸ್ಫೋಟ ನಡೆದಿತ್ತು. ಸ್ಫೋಟದಲ್ಲಿ 257 ಮಂದಿ ಮೃತಪಟ್ಟು, 713 ಮಂದಿ ಗಾಯಗೊಂಡಿದ್ದರು. ಸ್ಫೋಟದ ತನಿಖೆ ನಡೆಸಿದ ಸಿಬಿಐ ದಾವೂದ್ ಇಬ್ರಾಹಿಂ ಸೇರಿದಂತೆ ಹಲವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು.

ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಯಾಕೂಬ್ ಸೇರಿದಂತೆ 10 ಮಂದಿಗೆ ಮುಂಬೈ ವಿಶೇಷ ಟಾಡಾ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಯಾಕೂಬ್ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ 2015ರ ಏಪ್ರಿಲ್‌ನಲ್ಲಿ ತಿರಸ್ಕರಿಸಿತ್ತು.

ಯಾಕೂಬ್ ಅಬ್ದುಲ್ ರಜಾಕ್ ಮೆಮನ್ ಗಲ್ಲಿಗೇರಿಸಲು ಮಹಾರಾಷ್ಟ್ರದ ನಾಗ್ಪುರ ಜೈಲಿನಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಜುಲೈ 30ರಂದು ಯಾಕೂಬ್‌ಗೆ ಗಲ್ಲು ಶಿಕ್ಷೆ ವಿಧಿಸಲಾಗುತ್ತದೆ.

English summary
Bollywood Actor Salman Khan has come out in defence of death row convict in the 1993 Mumbai blasts case Yakub Memon. Khan tweeted that 'innocent man killed is killing the humanity'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada