For Quick Alerts
  ALLOW NOTIFICATIONS  
  For Daily Alerts

  ಚೀನಾ-ಭಾರತದ ಯುದ್ಧ ಇತಿಹಾಸದ 'ಟ್ಯೂಬ್‌ಲೈಟ್' ಟೀಸರ್ ಔಟ್

  By Suneel
  |

  ಸಲ್ಮಾನ್ ಖಾನ್ ಅಭಿನಯದ ಈ ವರ್ಷದ ಬಹು ನಿರೀಕ್ಷಿತ ಸಿನಿಮಾ 'ಟ್ಯೂಬ್ ಲೈಟ್' ಚಿತ್ರದ ಟೀಸರ್ ನಿನ್ನೆ(ಮೇ 4) ರಿಲೀಸ್ ಆಗಿದೆ.

  'ಟ್ಯೂಬ್ ಲೈಟ್' 1962 ರಲ್ಲಿ ಚೀನಾ ಮತ್ತು ಭಾರತದ ನಡುವೆ ನಡೆದ ಯುದ್ಧ (Sino-Indian War) ಇತಿಹಾಸದ ಕುರಿತ ಸಿನಿಮಾ. ಯುದ್ಧ ಸನ್ನಿವೇಶಗಳಿಗೆ ಸಾಕ್ಷಿಯಾಗುವಂತೆ ಟೀಸರ್ ನಲ್ಲೇ ರೋಮಾಂಚನಕಾರಿಯಾದ ಯುದ್ಧ ಘಟನೆಗಳನ್ನು ಮತ್ತು ಹೆಚ್ಚು ಸೈನಿಕರನ್ನು ತೋರಿಸಿದ್ದು ಸಲ್ಮಾನ್ ರವರ 'ಸುಲ್ತಾನ್' ಚಿತ್ರಕ್ಕಿಂತ ಅತ್ಯಧಿಕ ಮಟ್ಟದಲ್ಲಿ ಹೆಸರು ಮಾಡುವ ಭರವಸೆ ಮೂಡಿಸಿದೆ. [10 ವರ್ಷಗಳ ನಂತರ ಒಂದೇ ಚಿತ್ರದಲ್ಲಿ ಶಾರುಖ್‌ ಮತ್ತು ಸಲ್ಮಾನ್‌]

  'ಟ್ಯೂಬ್ ಲೈಟ್' ಸಿನಿಮಾಗೆ ಚಿತ್ರಕಥೆ ಬರೆದು ಕಬೀರ್ ಖಾನ್ ನಿರ್ದೇಶನ ಮಾಡುತ್ತಿದ್ದಾರೆ. ಸಲ್ಮಾನ್ ಖಾನ್ ಮತ್ತು ನಿರ್ದೇಶಕ ಕಬೀರ್ ಖಾನ್ ಇಬ್ಬರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇನ್ನೊಂದು ವಿಶೇಷತೆ ಎಂದರೇ ಚಿತ್ರದಲ್ಲಿ ಶಾರುಖ್ ಖಾನ್ ಗೆಸ್ಟ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದು, ಸಲ್ಲು ಸಹೋದರ ಸೊಹೈಲ್ ಖಾನ್ ಸಹ ಅಭಿನಯಿಸಿದ್ದಾರೆ.

  ಚಿತ್ರದಲ್ಲಿ ಸಲ್ಮಾನ್ ಗೆ ಜೊತೆಯಾಗಿ ಚೀನಾ ಮೂಲದ ನಟಿ Zhu Zhu ಅಭಿನಯಿಸಿದ್ದಾರೆ. ಚಿತ್ರ ಜೂನ್ 23 ರಂದು ದೇಶದಾದ್ಯಂತ ತೆರೆಕಾಣಲಿದೆ. 'ಟ್ಯೂಬ್ ಲೈಟ್' ಚಿತ್ರದ ಟೀಸರ್ ನೋಡಲು ಕ್ಲಿಕ್ ಮಾಡಿ.

  English summary
  Salman Khan Starrer 'Tubelight' teaser released. This movie is written and directed by Kabir Khan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X