»   » ನ.18ರಂದೇ ಸಲ್ಮಾನ್ ಖಾನ್ ಮದ್ವೆ ಮುಹೂರ್ತ?

ನ.18ರಂದೇ ಸಲ್ಮಾನ್ ಖಾನ್ ಮದ್ವೆ ಮುಹೂರ್ತ?

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ತಂಗಿ ಅರ್ಪಿತಾ ಮದುವೆ ಸಂಭ್ರಮದಿಂದ ಮಿಂದಿರುವ ಸಲ್ಮಾನ್ ಖಾನ್ ಗೂ ನವೆಂಬರ್ 18ನೇ ದಿನಾಂಕಕ್ಕೂ ಬಿಡಿಸಿದ ನಂಟಿದೆ. ಹೀಗಾಗಿ ತಂಗಿ ಮದುವೆಗೂ ಇದೇ ದಿನ ಮುಹೂರ್ತ ಬರುವಂತೆ ಸಲ್ಮಾನ್ ಮಾಡಿದ್ದ. ಅದರೆ, ನ.18ರಂದು ಸಲ್ಮಾನ್ ಮದುವೆ ಮುಹೂರ್ತವೂ ಫಿಕ್ಸ್ ಆಗಿತ್ತಂತೆ!!!

ಸಲ್ಮಾನ್, ಅರ್ಭಾಜ್ ಸೊಹೈಲ್ ಮುದ್ದಿನ ತಂಗಿ ಅರ್ಪಿತಾ ಹಾಗೂ ಆಯೂಷ್ ಜೋಡಿ ಹಕ್ಕಿಗಳು ಇನ್ನೊಂದು ವರ್ಷ ವಿಹರಿಸುತ್ತಾ 2015ರಲ್ಲಿ ಮದುವೆಯಾಗಲು ನಿರ್ಧರಿಸಿದ್ದರು. ಅದರೆ, ಸಲ್ಮಾನ್ ಅವರು ಇದೇ ವರ್ಷ ಮದುವೆ ನಡೆಸಲು ನಿರ್ಧರಿಸಿದ. ತಂಗಿಯ ಆಸೆಯಂತೆ ಹೈದರಾಬಾದಿನ ಫಲಕ್ಮಾಮ ಅರಮನೆಯಲ್ಲೇ ಮದುವೆ ನಡೆಸಲಾಗಿದೆ.

ಅದರೆ, ನ.18ರ ದಿನಾಂಕವನ್ನೇ ಆಯ್ಕೆ ಮಾಡಿದ್ದರ ಬಗ್ಗೆ ಎಲ್ಲರಿಗೂ ಈಗಾಗಲೇ ತಿಳಿದಿದೆ. ಸಲ್ಮಾನ್ ಅವರ ತಂದೆ ತಾಯಿ ಸಲಿಂ ಖಾನ್ ಹಾಗೂ ಸಲ್ಮಾ ಅವರ ಮದುವೆ ನಡೆದಿದ್ದು ಇದೇ ದಿನಾಂಕವಾದ್ದರಿಂದ ತಂಗಿ ಮದುವೆಯೂ ಇದೇ ದಿನದಂದು ನಡೆಸಲು ಸಲ್ಲೂ ನಿರ್ಧರಿಸಿದ. ಅಪ್ಪ ಅಮ್ಮನ ವಿವಾಹ ವಾರ್ಷಿಕೋತ್ಸವ ಜೊತೆಗೆ ಅರ್ಪಿತಾ-ಆಯೂಷ್ ದಂಪತಿ ಮದುವೆ ಸಂಭ್ರಮವೂ ಸೇರಿಕೊಂಡಿದೆ. [ಗ್ಯಾಲರಿ: ಸಲ್ಮಾನ್ ತಂಗಿ ಮದುವೆ ಸಂಭ್ರಮ]

Salman Khan Wanted To Marry On November 18

ಸಲ್ಲೂ ಮದ್ವೆ ಮುಹೂರ್ತ: ಅದರೆ, ನ.18ರಂದು ಸಲ್ಮಾನ್ ಖಾನ್ ಕೂಡಾ ಮದುವೆಯಾಗಬೇಕಿತ್ತು. ಅದರೆ, ದುರಾದೃಷ್ಟ ಸಲ್ಲೂ ಬೆನ್ನು ಹತ್ತಿದ ಕಾರಣ ಮದುವೆ ಸಾಧ್ಯವಾಗಲಿಲ್ಲ ಎಂದು ಸಲ್ಲೂ ಆಪ್ತ ಗೆಳೆಯ ಸಾಜಿದ್ ನಾಡಿಯಾಡ್ವಾಲ ಹೇಳಿದ್ದಾನೆ.

ನ.18, 1999ರಂದು ಸಾಜಿದ್ ಮದುವೆ ಮುಹೂರ್ತ ಫಿಕ್ಸ್ ಆಗಿತ್ತು. ಇದೇ ದಿನ ಸಲ್ಲೂ ಕೂಡಾ ಹಸೆಮಣೆ ಏರಲು ಸಿದ್ಧನಾಗಿದ್ದನಂತೆ. ಅದರೆ, ಯಾರ ಜೊತೆ ಸಲ್ಲೂ ಮದುವೆಯಾಗಲು ನಿರ್ಧರಿಸಿದ್ದ ಎಂಬುದನ್ನು ಚಿತ್ರಕರ್ಮಿ ಸಾಜಿದ್ ಬಾಯ್ಬಿಟ್ಟಿಲ್ಲ. ಸಲ್ಲೂ ಗರ್ಲ್ ಫ್ರೆಂಡ್ಸ್ ಲಿಸ್ಟ್ ತೆಗೆದು ನೋಡಿದರೆ ಸುಲಭಕ್ಕೆ ಯಾರವಳು ಎಂಬುದು ಅರ್ಥವಾಗುತ್ತದೆ. ಆ ಕಾಲಕ್ಕೆ ಸಲ್ಲೂ ಜೊತೆಗಿದ್ದವಳು ಸಂಗೀತಾ ಬಿಜಲಾನಿ.

ಈ ವಿಷಯವನ್ನು ಸಲ್ಲೂ ಕೂಡಾ ಒಮ್ಮೆ ದೃಢಪಡಿಸಿದ್ದ. ಕರಣ್ ಜೋಹರ್ ಚಾಟ್ ಶೋನಲ್ಲಿ ಮಾತನಾಡುತ್ತಾ, ಸಂಗೀತಾ ಜೊತೆ ಮದುವೆ ತನಕ ಮಾತುಕತೆ ಮುಂದುವರೆದಿತ್ತು. ಲಗ್ನಪತ್ರಿಕೆ ಹಂಚಿಕೆ, ಆಹ್ವಾನ ಎಲ್ಲವೂ ಆರಂಭವಾಗಿತ್ತು.. ಅದರೆ... ಎಂದು ಹೇಳಿ ಸಲ್ಲೂ ಮೌನಕ್ಕೆ ಶರಣಾಗಿದ್ದ.

ಸಲ್ಲೂ ತನ್ನ ಗೆಳತಿಯರೊಡನೆ ಸಖ್ಯ ಮುರಿದುಕೊಳ್ಳಲು ಏನು ಕಾರಣ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗೇ ಉಳಿದಿದೆ. ಈ ಬಗ್ಗೆ ಸಲ್ಲೂ ಕೂಡಾ ಸ್ಪಷ್ಟವಾಗಿ ಮೌನ ಮುರಿದಿಲ್ಲ. ಅಪ್ಪ ಅಮ್ಮನ ಮದುವೆ ದಿನವೇ ಮದುವೆಯಾಗುವ ಕನಸು ಹೊತ್ತಿದ್ದ ಸಲ್ಲೂ ಕನಸಂತೂ ನನಸಾಗಲಿಲ್ಲ. ತನ್ನ ಕನಸನ್ನು ತಂಗಿ ಮದುವೆ ಮೂಲಕ ಸಕಾರಗೊಳಿಸಿಕೊಂಡಿದ್ದಾನೆ.ಮುಂದೊಂದು ದಿನ ಸಲ್ಲೂ ಕನಸು ನನಸಾಗುವುದೇ ಕಾದು ನೋಡೋಣ...

English summary
Salman Khan had once come very close to marrying his alleged girlfriend. The actor had chosen his parents, Salim Khan and Salma's marriage date to wed his lover but things didn't work out the way he planned.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada