For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ನವೆಂಬರ್ ನಲ್ಲಿ ಮದುವೆ ಆಗ್ತಾರಂತೆ, ಆದ್ರೆ ಯಾವ ವರ್ಷ.?

  By ಸೋನು ಗೌಡ
  |

  ಇಡೀ ಬಿಟೌನ್ ನಲ್ಲಿ ಉತ್ತರ ದೊರಕದ ಪ್ರಶ್ನೆ ಎಂದರೆ ಅದು ಭಾಯ್ ಜಾನ್ ಸಲ್ಮಾನ್ ಖಾನ್ ಅವರ ಮದುವೆ. ನಾವು ಹೀಗೆ ಹೇಳಲು ಕಾರಣ ಏನಪ್ಪಾ ಅಂದ್ರೆ ಕಳೆದ ಹಲವಾರು ವರ್ಷಗಳಿಂದ ಸಲ್ಮಾನ್ ಖಾನ್ ಮದುವೆ ವಿಚಾರದ ಬಗ್ಗೆ ಬಿಟೌನ್ ನಲ್ಲಿ ಭಾರಿ ಚರ್ಚೆಗಳು ಆಗುತ್ತಲೇ ಇರುತ್ತವೆ.

  ಅದಕ್ಕೆ ತಕ್ಕಂತೆ ಬಾಕ್ಸಾಫೀಸ್ ಸುಲ್ತಾನ ಸಲ್ಮಾನ್ ಖಾನ್ ಅವರು ಕೂಡ ತಮ್ಮ ಮದುವೆ ವಿಚಾರದ ಬಗ್ಗೆ ಯಾವುದೇ ರೀತಿಯ ಮಾಹಿತಿಯನ್ನು ಬಹಿರಂಗ ಮಾಡುತ್ತಿಲ್ಲ. ಆದರೆ ಇದೀಗ ಒಂದು ದಿನಾಂಕವನ್ನು ಮಾತ್ರ ಹೊರ ಹಾಕಿದ್ದಾರೆ. ಆ ದಿನದಂದೇ ಸಲ್ಲುಮೀಯಾ ಅವರು ಸಪ್ತಪದಿ ತುಳಿಯುತ್ತಾರಂತೆ.[ಮದುವೆ ಬಗ್ಗೆ ಪ್ರಚಾರ ಮಾಡಿದ್ದಕ್ಕೆ ಆಕ್ರೋಶಗೊಂಡ ಸಲ್ಮಾನ್ ಖಾನ್]

  ಇತ್ತೀಚೆಗೆ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರ 'ಏಸ್ ಅಗೈನ್ಸ್ಟ್ ಆಡ್ಸ್' ಎಂಬ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಬಾಗವಹಿಸಿದ್ದ ಸಲ್ಮಾನ್ ಖಾನ್ ಅವರಿಗೆ ಎಲ್ಲರೂ ಕೇಳುವಂತೆ ಸಾನಿಯಾ ಮಿರ್ಜಾ ಅವರು ಕೂಡ ಮದುವೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

  ಅದಕ್ಕೆ ಭಾಯ್ ಜಾನ್ ಸಲ್ಮಾನ್ ಖಾನ್ ಅವರು ತಕ್ಷಣ 'ನವೆಂಬರ್ 18' ಎಂದಿದ್ದಾರೆ. ಆದರೆ ಯಾವ ನವೆಂಬರ್ 18 ಎಂಬುದನ್ನು ಸಲ್ಲು ತಿಳಿಸಿಲ್ಲ.[ಸಾನಿಯಾಗೆ 'ರಾಕೆಟ್ ರಾಣಿ' ಎಂದು ಬಿರುದು ಕೊಟ್ಟ ಕಿಂಗ್ ಖಾನ್]

  ಅಂದಹಾಗೆ ನಟ ಸಲ್ಮಾನ್ ಖಾನ್ ಈ ದಿನಾಂಕ ಹೇಳಲು ಒಂದು ಪ್ರಮುಖ ಕಾರಣ ಇದೆ. ಯಾಕೆಂದ್ರೆ ಅವರ ತಂದೆ ಸಲೀಂ ಖಾನ್-ತಾಯಿ ಸಲ್ಮಾ ಖಾನ್ ಅವರು ಹಾಗೂ ಮುದ್ದು ತಂಗಿ ಅರ್ಪಿತಾ ಖಾನ್ ಮತ್ತು ಆಯುಷ್ ಶರ್ಮಾ ಅವರು ಕೂಡ ಇದೇ ದಿನಾಂಕದಂದು ಮದುವೆ ಆಗಿದ್ದರು.[ವಾವ್.! ಸಲ್ಮಾನ್ ಖಾನ್-ಲುಲಿಯಾ ಮದುವೆ ದಿನಾಂಕ ಫಿಕ್ಸ್ ಆಯ್ತು]

  ಆದ್ದರಿಂದ ಅದೇ ದಿನಾಂಕದಂದು ಭಾಯ್ ಜಾನ್ ಸಲ್ಮಾನ್ ಖಾನ್ ಅವರು ಕೂಡ ಮದುವೆ ಅಗುತ್ತಾರಂತೆ. ಆದ್ರೆ ಯಾವ ವರ್ಷ ಅಂತ ಹೇಳಲಾರೆ, ಬರೀ ದಿನಾಂಕ ಮಾತ್ರ ಹೇಳಬಲ್ಲೆ. ಇಲ್ಲಿಯತನಕ ಹಲವಾರು ನವೆಂಬರ್ 18 ಬಂದು ಹೋಗಿವೆ, ಇನ್ನೂ ಕೂಡ ಬರುತ್ತಲೇ ಇರುತ್ತೆ' ಎಂದು ಸಲ್ಮಾನ್ ಖಾನ್ ಅವರು ದೊಡ್ಡ ನಗೆಬಾಂಬ್ ಸಿಡಿಸಿದ್ದಾರೆ.

  English summary
  Bollywood Actor Salman Khan says he will get married on November 18, but doesn't really know which year would that fall on. During the launch of Sania Mirza's book, Ace Against Odds.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X