For Quick Alerts
  ALLOW NOTIFICATIONS  
  For Daily Alerts

  ಟಿಬಿ ರೋಗಕ್ಕೆ ತುತ್ತಾಗಿ, ದುಡ್ಡಿಲ್ಲದೆ ಒದ್ದಾಡುತ್ತಿದ್ದ ನಟಿಯ ಸಹಾಯಕ್ಕೆ ಬಂದ ನಟ ಇವರೇ!

  By Harshitha
  |

  1995 ರಲ್ಲಿ ತೆರೆಕಂಡ ಸಲ್ಮಾನ್ ಖಾನ್ ಅಭಿನಯದ 'ವೀರ್ ಗತಿ' ಚಿತ್ರದಲ್ಲಿ ಅಭಿನಯಿಸಿದ್ದ ನಟಿ ಪೂಜಾ ದದ್ವಾಲ್ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಸೇರಿದ್ದಾರೆ. ಟಿಬಿ ಕಾಯಿಲೆಯಿಂದ ಬಳಲುತ್ತಿರುವ ನಟಿ ಪೂಜಾ ದದ್ವಾಲ್ ರನ್ನ ಕುಟುಂಬದವರು ಬೀದಿಪಾಲು ಮಾಡಿದ್ದಾರೆ. ಹೀಗಾಗಿ ಅಕೆಯ ಬಳಿ ಬಿಡಿಗಾಸು ಇಲ್ಲ.

  ಹದಿನೈದು ದಿನಗಳ ಹಿಂದೆ ಮುಂಬೈನ ಟಿಬಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಪೂಜಾ ದದ್ವಾಲ್ ಬಳಿ ಔಷಧಿ ಖರ್ಚಿಗೂ ಹಣ ಇಲ್ಲ.

  ಒಂದ್ಕಾಲದಲ್ಲಿ ಸಲ್ಮಾನ್ ಖಾನ್ ಜೊತೆಗೆ ಅಭಿನಯಿಸಿದ್ದ ಈ ನಟಿ ಇಂದು ಅದೇ ಸಲ್ಲು ಭಾಯ್ ಸಹಾಯ ಕೋರಿದ್ದರು. ತಮ್ಮ ಆರ್ಥಿಕ ಸಂಕಷ್ಟ ಹಾಗೂ ಅನಾರೋಗ್ಯ ಪರಿಸ್ಥಿತಿಯನ್ನು ವಿವರಿಸಿ ಸಲ್ಮಾನ್ ಗೆ ಪೂಜಾ ಒಂದು ವಿಡಿಯೋ ಕೂಡ ಕಳುಹಿಸಿದ್ದರು. ಆದ್ರೆ, ಸಲ್ಮಾನ್ ಖಾನ್ ರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬದಲಾಗಿ ಇನ್ನೋರ್ವ ನಟ ಪೂಜಾ ದದ್ವಾಲ್ ಸಹಾಯಕ್ಕೆ ಬಂದಿದ್ದಾರೆ. ಯಾರು 'ಆ' ನಟ.? ಇಲ್ಲಿದೆ ಮಾಹಿತಿ...

  ಪೂಜಾ ಸಹಾಯಕ್ಕೆ ಬಂದಿರುವ ನಟ ಇವರೇ.!

  ಪೂಜಾ ಸಹಾಯಕ್ಕೆ ಬಂದಿರುವ ನಟ ಇವರೇ.!

  ಟಿಬಿ ಕಾಯಿಲೆಯಿಂದ ಬಳಲುತ್ತಿರುವ ನಟಿ ಪೂಜಾ ದದ್ವಾಲ್ ಸಹಾಯಕ್ಕೆ ಭೋಜ್ ಪುರಿ ನಟ ರವಿ ಕಿಶನ್ ಮುಂದಾಗಿದ್ದಾರೆ. ಪೂಜಾ ದದ್ವಾಲ್ ಗೆ ಆರ್ಥಿಕವಾಗಿ ಸಹಾಯ ಮಾಡಲು ರವಿ ಕಿಶನ್ ಮನಸ್ಸು ಮಾಡಿದ್ದಾರೆ.

  ಟಿಬಿ ಕಾಯಿಲೆಯಿಂದ ಬಳಲುತ್ತಿರುವ ಬಾಲಿವುಡ್ ಬೆಡಗಿ: ಸಲ್ಮಾನ್ ಸಹಾಯಕ್ಕೆ ಅಂಗಲಾಚುತ್ತಿರುವ ನಟಿಟಿಬಿ ಕಾಯಿಲೆಯಿಂದ ಬಳಲುತ್ತಿರುವ ಬಾಲಿವುಡ್ ಬೆಡಗಿ: ಸಲ್ಮಾನ್ ಸಹಾಯಕ್ಕೆ ಅಂಗಲಾಚುತ್ತಿರುವ ನಟಿ

  ಹೈದರಾಬಾದ್ ನಲ್ಲಿದ್ದ ನಟ ರವಿ ಕಿಶನ್

  ಹೈದರಾಬಾದ್ ನಲ್ಲಿದ್ದ ನಟ ರವಿ ಕಿಶನ್

  ಹೈದರಾಬಾದ್ ನಲ್ಲಿ ಚಿತ್ರವೊಂದರ ಚಿತ್ರೀಕರಣದಲ್ಲಿ ರವಿ ಕಿಶನ್ ತೊಡಗಿದ್ದರು. ಇದೇ ವೇಳೆ ನಟಿ ಪೂಜಾ ದದ್ವಾಲ್ ಅವರ ಪರಿಸ್ಥಿತಿ ರವಿ ಕಿಶನ್ ಅವರಿಗೆ ಗೊತ್ತಾಗಿದೆ. ಕೂಡಲೆ ಮುಂಬೈನಲ್ಲಿರುವ ಪರಿಚಯಸ್ಥರಿಗೆ ಫೋನ್ ಮಾಡಿ, ಹಣ್ಣುಗಳ ಜೊತೆಗೆ ಹಣವನ್ನೂ ಪೂಜಾಗೆ ನೀಡಿ ಬರುವಂತೆ ರವಿ ಕಿಶನ್ ಕೋರಿದ್ದಾರೆ. ರವಿ ಕಿಶನ್ ಕೋರಿಕೆ ಮೇರೆಗೆ ಪರಿಚಯಸ್ಥರು ನಟಿ ಪೂಜಾ ರನ್ನ ಭೇಟಿ ಮಾಡಿ ಹಣ ಸಹಾಯ ಮಾಡಿ ಬಂದಿದ್ದಾರೆ.

  ಪೂಜಾ ಜೊತೆಗೆ ಅಭಿನಯಿಸಿದ್ದ ರವಿ ಕಿಶನ್

  ಪೂಜಾ ಜೊತೆಗೆ ಅಭಿನಯಿಸಿದ್ದ ರವಿ ಕಿಶನ್

  ದಶಕಗಳ ಹಿಂದೆ ನಟಿ ಪೂಜಾ ದದ್ವಾಲ್ ಜೊತೆಗೆ ರವಿ ಕಿಶನ್ ಕೂಡ ಅಭಿನಯಿಸಿದ್ದರು. ಒಂದ್ಕಾಲದಲ್ಲಿ ತಮ್ಮೊಂದಿಗೆ ತೆರೆ ಹಂಚಿಕೊಂಡಿದ್ದ ಪೂಜಾಗೆ ಸಹಾಯ ಹಸ್ತ ಚಾಚಲು ರವಿ ಕಿಶನ್ ಮುಂದಾಗಿದ್ದಾರೆ.

  ಪೂಜಾಗೆ ಏನಾಗಿದೆ.?

  ಪೂಜಾಗೆ ಏನಾಗಿದೆ.?

  90 ರ ದಶಕದಲ್ಲಿ ತೆರೆಮೇಲೆ ಮಿನುಗಿದ್ದ ನಟಿ ಪೂಜಾ ದದ್ವಾಲ್, ಬಳಿಕ ಗೋವಾದ ಕೆಸಿನೋ ಒಂದರಲ್ಲಿ ಹಲವು ವರ್ಷಗಳ ಕಾಲ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸಿದ್ದರಂತೆ. ಆರು ತಿಂಗಳ ಹಿಂದೆ ಟಿ.ಬಿ ಕಾಯಿಲೆ ಇರುವುದು ಪೂಜಾಗೆ ಗೊತ್ತಾಗಿದೆ. ಪೂಜಾ ಆರೋಗ್ಯ ಕ್ಷೀಣಿಸುತ್ತಿದ್ದಂತೆ, ಆಕೆಯ ಪತಿ ಹಾಗೂ ಕುಟುಂಬದವರು ಬೀದಿಪಾಲು ಮಾಡಿದ್ದಾರೆ. ಹೀಗಾಗಿ ಪೂಜಾ ಕೈಯಲ್ಲಿ ಈಗ ದುಡ್ಡು ಇಲ್ಲ. ಒಂದು ಕಪ್ ಟೀ ಕುಡಿಯಬೇಕು ಅಂದರೂ ಇನ್ನೊಬ್ಬರನ್ನ ಬೇಡಿಕೊಳ್ಳುವ ಪರಿಸ್ಥಿತಿಗೆ ಪೂಜಾ ಬಂದುಬಿಟ್ಟಿದ್ದಾರೆ. ತಮ್ಮ ಆರ್ಥಿಕ ಸಂಕಷ್ಟ ಹಾಗೂ ಅನಾರೋಗ್ಯ ಪರಿಸ್ಥಿತಿಯನ್ನು ವಿವರಿಸಿ ಸಲ್ಮಾನ್ ಖಾನ್ ಗೆ ನಟಿ ಪೂಜಾ ದದ್ವಾಲ್ ಒಂದು ವಿಡಿಯೋ ಕಳುಹಿಸಿದ್ದರು. ಆದ್ರೆ, ಸಲ್ಮಾನ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈಗ ನಟಿಯ ಸಹಾಯಕ್ಕೆ ರವಿ ಕಿಶನ್ ಬಂದಿದ್ದಾರೆ.

  English summary
  Bollywood Actor Salman Khan's co star Pooja Dadwal who is suffering from TB, Actor Ravi Kishan has extended his helping hand.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X