For Quick Alerts
  ALLOW NOTIFICATIONS  
  For Daily Alerts

  ವರದನಾಯಕ ಬೆಡಗಿ ಸಮೀರಾಗೆ ಇಂದು ಮದುವೆ

  By ಉದಯರವಿ
  |

  ದಕ್ಷಿಣದ ಬೆಡಗಿ ಸಮೀರಾ ರೆಡ್ಡಿ ಮಂಗಳವಾರ (ಜ.21) ಸಂಜೆ ಹಸೆಮಣೆ ಏರುತ್ತಿದ್ದಾರೆ. ತಮ್ಮ ಬಹುಕಾಲದ ಗೆಳೆಯ ಅಕ್ಷಯ್ ವರ್ಧೆ ಕೈಹಿಡಿಯುತ್ತಿದ್ದಾರೆ ಸಮೀರಾ. ಏಪ್ರಿಲ್ ನಲ್ಲಿ ಮದುವೆಯಾಗುತ್ತಿದ್ದೇನೆ ಎಂದಿದ್ದ ಸಮೀರಾ ಈಗ ತರಾತುರಿಯಲ್ಲಿ ಸಪ್ತಪದಿ ತುಳಿಯುತ್ತಿದ್ದಾರೆ.

  ಸಮೀರಾ ಕೈಹಿಡಿಯುತ್ತಿರುವ ವರ ಮಹಾಶಯ ಅಕ್ಷಯ್ ವರ್ಧೆ (31) ಉದ್ಯಮಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಎರಡು ಎರಡುವರೆ ವರ್ಷಗಳಿಂದ ಸಮೀರಾ ಹಾಗೂ ವರ್ಧೆ ಡೇಟಿಂಗ್ ಮಾಡುತ್ತಿದ್ದರು.

  ಗ್ರಾಹಕರ ಅಭಿರುಚಿಗೆ ತಕ್ಕಂತೆ ಬೈಕ್ ಗಳನ್ನು ತಯಾರಿಸಿಕೊಡುವ ಉದ್ಯಮಿಯಾಗಿ ವರ್ಧೆ ಕೆಲಸ ನಿರ್ವಹಿಸುತ್ತಿದ್ದು, ಸಮೀರಾ ಅವರಿಗೂ ಬೈಕ್ ಗಳೆಂದರೆ ಕ್ರೇಜ್. ಇಬ್ಬರ ಅಭಿರುಚಿಗಳೂ ಒಂದೇ ಆಗಿದ್ದು ಇನ್ನಷ್ಟು ಹತ್ತಿರವಾಗಲು ಕಾರಣವಾಯಿತು.

  ಸಮೀರಾಗೆ ಪ್ರೇಮಾಂಕುರವಾಗಿದ್ದು ಹೇಗೆ?

  ಸಮೀರಾಗೆ ಪ್ರೇಮಾಂಕುರವಾಗಿದ್ದು ಹೇಗೆ?

  ಅಕ್ಷಯ್ ಅವರ ವರ್ದೆಂಚಿ ಕಂಪನಿಯ ಬೈಕ್ ಓಡಿಸಲು ಸಮೀರಾ ಹೋಗಿದ್ದರಂತೆ. ಸಮೀರಾ ಬೈಕ್ ಓಡಿಸುತ್ತಿದ್ದರೆ ಹಿಂದೆ ಅಕ್ಷಯ್ ಕುಳಿತಿದ್ದರಂತೆ. ಅಂಕುಡೊಂಕು ರಸ್ತೆಯಲ್ಲಿ ಬೈಕ್ ಸಾಗಬೇಕಾದರೆ ಇಬ್ಬರ ದೇಹಗಳು ಹಾಗೆ ಸುಮ್ಮನೆ ಟಚಿಂಗ್ ಟಚಿಂಗ್ ಆಗುತ್ತಿದ್ದವಂತೆ. ಅಲ್ಲೇ ಇಬ್ಬರ ನಡುವೆ ಪ್ರೇಮಾಂಕುರವಾಯಿತಂತೆ.

  ದಿಢೀರ್ ಎಂದು ಮದುವೆಗೆ ಸಿದ್ಧವಾದ ಜೋಡಿ

  ದಿಢೀರ್ ಎಂದು ಮದುವೆಗೆ ಸಿದ್ಧವಾದ ಜೋಡಿ

  ಇವರಿಬ್ಬರೂ ಏಪ್ರಿಲ್ ತಿಂಗಳಲ್ಲಿ ಮದುವೆಯಾಗಬೇಕೆಂದಿದ್ದರು. ಆದರೆ 15 ದಿನಗಳ ಹಿಂದೆ ದಿಢೀರ್ ಎಂದು ಡಿಸೈಡ್ ಮಾಡಿ ಈಗ ಹಾರಬದಲಾಯಿಸಿಕೊಳ್ಳಲು ಹೊರಟಿದ್ದಾರೆ. ಏಪ್ರಿಲ್ ನಲ್ಲಿ ಅಕ್ಷಯ್ ಸಿಕ್ಕಾಪಟ್ಟೆ ಬಿಜಿಯಂತೆ. ಹಾಗಾಗಿ ಮದುವೆ ತಾರಾತುರಿಯಲ್ಲಿ ನಡೆಯುತ್ತಿದೆ ಎನ್ನುತ್ತವೆ ಮೂಲಗಳು.

  ತೀರಾ ಖಾಸಗಿಯಾಗಿ ನಡೆಯುತ್ತಿರುವ ಮದುವೆ

  ತೀರಾ ಖಾಸಗಿಯಾಗಿ ನಡೆಯುತ್ತಿರುವ ಮದುವೆ

  ಆದರೆ ಇವರ ಮದುವೆ ತೀರಾ ಖಾಸಗಿಯಾಗಿ ನಡೆಯುತ್ತಿದ್ದು ಮಾಧ್ಯಮದವರಿಗೆ ಆಹ್ವಾನ ನೀಡಿಲ್ಲ. ಕೇಲವ ಬಂಧುಮಿತ್ರರಷ್ಟೇ ನೂತನ ದಾಂಪತ್ಯಕ್ಕೆ ಅಡಿಯಿಡುತ್ತಿರುವ ಸಮೀರಾರಿಗೆ ಶುಭಕೋರಲಿದ್ದಾರೆ. ಮುಂಬೈನ ಬಾಂದ್ರಾದಲ್ಲಿ ಮದುವೆ ನಡೆಯುತ್ತಿದೆ.

  ವರದನಾಯಕ ಚಿತ್ರದಲ್ಲಿ ಸಮೀರಾ ಅಭಿನಯ

  ವರದನಾಯಕ ಚಿತ್ರದಲ್ಲಿ ಸಮೀರಾ ಅಭಿನಯ

  ಕನ್ನಡದಲ್ಲಿ 'ವರದನಾಯಕ' ಚಿತ್ರದಲ್ಲಿ ಸುದೀಪ್ ಜೋಡಿಯಾಗಿ ಕಾಣಿಸಿಕೊಂಡಿದ್ದ ಸಮೀರಾ ರೆಡ್ಡಿ ಇತ್ತೀಚೆಗೆ ಭಾರಿ ಸುದ್ದಿ ಮಾಡಿದ್ದರು. ಚಿತ್ರವೊಂದರಲ್ಲಿ ಹೆಜ್ಜೆ ಹಾಕಲು ಬರೋಬ್ಬರಿ ರು.50 ಲಕ್ಷ ಎಣಿಸುವ ಸಮೀರಾ ಇದ್ದಕ್ಕಿದ್ದಂತೆ ಅರೆ ನಗ್ನ ಪೋಸ್ ನೀಡಿ ಫ್ಯಾಷನ್ ಪರೇಡ್ ನಲ್ಲಿ ಕಾಣಿಸಿಕೊಂಡಿದ್ದರು.

  ಅಭಿಮಾನಿಗಳಿಗೆ ಮತ್ತೊಂದು ಶಾಕಿಂಗ್ ನ್ಯೂಸ್

  ಅಭಿಮಾನಿಗಳಿಗೆ ಮತ್ತೊಂದು ಶಾಕಿಂಗ್ ನ್ಯೂಸ್

  ಬ್ಲೆಂಡರ್ಸ್ ಪ್ರೈಡ್ ಫ್ಯಾಷನ್ ಟೂರ್ ನಲ್ಲಿ ಸಮೀರಾ ಉಡುಗೆ ಕಂಡು ಅಭಿಮಾನಿಗಳು ಕೂಡಾ ಬೆಚ್ಚಿದ್ದರು. ಈಗ ಮದುವೆ ಮಾತೆತ್ತಿರುವ ಚೆಲುವೆ ಮದುವೆಯಾದ ನಂತರ ಚಿತ್ರರಂಗಕ್ಕೆ ಗುಡ್ ಬೈ ಹೇಳುವ ಸುಳಿವು ಕೊಟ್ಟಿರುವುದು ಅವರ ಅಭಿಮಾನಿಗಳಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಆಗಿದೆ.

  ಈಗಾಗಲೆ ನಿಶ್ಚಿತಾರ್ಥ ಆಗಿದೆ ಎಂಬ ಸುದ್ದಿ

  ಈಗಾಗಲೆ ನಿಶ್ಚಿತಾರ್ಥ ಆಗಿದೆ ಎಂಬ ಸುದ್ದಿ

  ಕಳೆದ ಡಿಸೆಂಬರ್ 14ರಂದೇ ಉದ್ಯಮಿ ಅಕ್ಷಯ್ ಜತೆ ಸಮೀರಾಗೆ ನಿಶ್ಚಿತಾರ್ಥ ಆಗಿದೆಯಂತೆ. ಹತ್ತಿರದ ಸಂಬಂಧಿಗಳು, ಗೆಳೆಯ ಗೆಳತಿಯರು ಮಾತ್ರ ಕಾರ್ಯಕ್ರಮಕ್ಕೆ ಹೋಗಿದ್ದರು ಎಂಬ ಸುದ್ದಿಯಿದೆ.

  English summary
  Actress Sameera Reddy’s hush-hush wedding to her beau Akshai Varde is slated for today. Though the fashionista had earlier announced that she would tie the knot in April, the wedding has reportedly been planned for today, January 21.
  Tuesday, January 21, 2014, 15:05
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X