»   » ಯಾರವಾಡ ಜೈಲಿನಲ್ಲಿ ಸಂಜಯ್ ದತ್ ಲುಂಗಿ ಡಾನ್ಸ್

ಯಾರವಾಡ ಜೈಲಿನಲ್ಲಿ ಸಂಜಯ್ ದತ್ ಲುಂಗಿ ಡಾನ್ಸ್

Posted By:
Subscribe to Filmibeat Kannada

ಬಾಲಿವುಡ್ ನಟ ಸಂಜಯ್ ದತ್ ಅವರು ಈಗ ಎಲ್ಲಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಯಾರವಾಡ ಜೈಲಿನಲ್ಲಿ ಈಗವರು ತಮ್ಮ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಜೈಲಿನಲ್ಲಿ ಅವರು ಹೇಗಿದ್ದಾರೆ? ಏನು ಮಾಡುತ್ತಿದ್ದಾರೆ ಎಂಬ ಕುತೂಹಲಕಾರಿ ಅಂಶಗಳನ್ನು ಹುಡುಕ ಹೊರಟಾಗ ಕ್ಯಾಮೆರಾ ಕಣ್ಣಿಲ್ಲಿ ಸೆರೆಯಾಗಿದ್ದಾರೆ.

ಜೈಲಿನಲ್ಲೂ ಸಂಜಯ್ ದತ್ ಖುಷಿಯಾಗಿಯೇ ಕಾಲ ಕಳೆಯುತ್ತಿದ್ದಾರೆ ಎಂಬುದು ಈ ಫೋಟೋಗಳನ್ನು ನೋಡಿದರೆ ಅರ್ಥವಾಗುತ್ತದೆ. ಅಲ್ಲಿನ ಖೈದಿಗಳ ಜೊತೆ ಕೈಜೋಡಿಸಿ ಜೈಲಿನಲ್ಲೇ ನಾಟಕಗಳನ್ನು ಆಡುತ್ತಾ ಮತ್ತೆ ಬಣ್ಣ ಹಚ್ಚಿದ್ದಾರೆ. ಒಟ್ಟು 50 ಖೈದಿಗಳು ಸಂಜು ಜೊತೆ ನಾಟಕದಲ್ಲಿ ಭಾಗಿಯಾಗಿದ್ದರು.

ಇದೆಲ್ಲಾ ಸಂಜು ಸುಮ್ಮನೆ ಮನರಂಜನೆಗಾಗಿ ಮಾಡುತ್ತಿಲ್ಲ. ಖೈದಿಗಳೇ ಇದಕ್ಕೆ ಬಂಡವಾಳ ಹೂಡಿದ್ದಾರೆ. ಈ ನಾಟಕವನ್ನು ಅವರೆಲ್ಲಾ ಸೇರಿ ಸೆಪ್ಟೆಂಬರ್ 26ರಂದು ಪ್ರದರ್ಶಿಸುತ್ತಿದ್ದಾರೆ. ನಿಧಿ ಸಂಗ್ರಹಕ್ಕಾಗಿ ಸಂಜಯ್ ಅವರಿಂದ ಈ ಅಳಿಲು ಸೇವೆ.

ಸಂಗ್ರಹವಾಗುವ ನಿಧಿಯಿಂದ ಜೈಲಿನಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ದಿಪಡಿಸಲು ಬಳಸಿಕೊಳ್ಳಲಾಗುತ್ತದೆ. ದೂರದರ್ಶನ ವಾಹಿನಿಯಲ್ಲಿ ಈ ನಾಟಕ ಪ್ರಸಾರವಾಗಲಿದೆ. ನಟ ಸಂಜಯ್ ದತ್ ನಾಟಕ ಪ್ರಾಕ್ಟೀಸ್ ಮಾಡುತ್ತಿರುವ ದೃಶ್ಯಗಳನ್ನು ಕಾಣಬಹುದು.

ಈ ನಾಟಕಕ್ಕಾಗಿ ಸಂಜಯ್ ತಮ್ಮ ಮುನ್ನಾಭಾಯ್ ಎಂಬಿಬಿಎಸ್ ಚಿತ್ರದ ಡೈಲಾಗ್ ಗಳನ್ನೂ ಬಳಸಿಕೊಳ್ಳುತ್ತಿದ್ದಾರೆ. ಚೆನ್ನೈ ಎಕ್ಸ್ ಪ್ರೆಸ್ ಚಿತ್ರದಲ್ಲಿನ ಲುಂಗಿ ಡಾನ್ಸ್ ಗೀತೆಗೂ ಸಂಜಯ್ ಹೆಜ್ಜೆ ಹಾಕಲಿದ್ದಾರೆ ಎಂಬ ಸುದ್ದಿಯೂ ಇದೆ. ಜೈಲಿನಲ್ಲಿರುವ ಸಂಜಯ್ ಚಿತ್ರಗಳು ಸ್ಲೈಡ್ ಗಳಲ್ಲಿ ನೋಡಿ...

ಮುನ್ನಾಬಾಯ್ ಪಾತ್ರದ ಬಗ್ಗೆ ಸುಳಿವಿಲ್ಲ

ಸಂಜಯ್ ದತ್ ಅವರೇನೋ ನಾಟಕದಲ್ಲಿ ಪಾರ್ಟ್ ಮಾಡುತ್ತಿದ್ದಾರೆ ಎಂಬುದೇನೋ ನಿಜ ಆದರೆ ಅವರ ಪಾತ್ರದ ಬಗ್ಗೆ ಮಾತ್ರ ಸುಳಿವು ಸಿಕ್ಕಿಲ್ಲ.

ನಾಟಕ ಪ್ರಾಕ್ಟೀಸ್ ನಲ್ಲಿ ಸಂಜು

ಯರವಾಡ ಜೈಲಿನಲ್ಲಿ ಮೈಕ್ ಹಿಡಿದು ನಾಟಕ ಪ್ರಾಕ್ಟೀಸ್ ಮಾಡುತ್ತಿರುವ ಸಂಜಯ್ ದತ್.

ಸಹ ಖೈದಿಗಳ ಜೊತೆ ಸಂಜು ಬಾಬಾ

ಸಹ ಖೈದಿಗಳ ಜೊತೆ ಕುಳಿತು ವೃತ್ತಿಪತ್ರಿಕೆ ಓದುತ್ತಿರುವ ಸಂಜು.

ಜೋರಾಗಿ ನಡೆಯುತ್ತಿರುವ ನಾಟಕ ಪ್ರಾಕ್ಟೀಸ್

ನಾಟಕ ಸಿದ್ಧತೆಯ ಫೊಟೋಗಳು. ತನ್ನ ಸಹ ಖೈದಿಗಳ ಜೊತೆ ಸಂಜಯ್ ಸಂಭಾಷಣೆಯಲ್ಲಿ ನಿರತರಾಗಿರುವ ದೃಶ್ಯಗಳನ್ನು ಕಾಣಬಹುದು.

ಇಷ್ಟಕ್ಕೂ ಸಂಜಯ್ ಅರೆಸ್ಟ್ ಆಗಿದ್ದು ಯಾಕೆಂದರೆ...

1993ರ ಮುಂಬೈ ಬಾಂಬ್ ಸ್ಫೋಟ ಘಟನೆಗೆ ಸಂಬಂಧಿಸಿದಂತೆ ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಸಂಬಂಧ ಸಂಜುಗೆ ಜೈಲು ಶಿಕ್ಷೆಯಾಗಿದೆ.

English summary
Bollywood actor Sanjay Dutt is at the Yerwada prison at the moment. For the first time, we have been able to fetch you a few images of Sanjay Dutt from inside the jail.
Please Wait while comments are loading...