»   » ಸಂಜಯ್ ದತ್ ಬಯೋಗ್ರಫಿಯಲ್ಲಿ ಬಯಲಾಯ್ತು ಸ್ಫೋಟಕ ರಹಸ್ಯಗಳು.!

ಸಂಜಯ್ ದತ್ ಬಯೋಗ್ರಫಿಯಲ್ಲಿ ಬಯಲಾಯ್ತು ಸ್ಫೋಟಕ ರಹಸ್ಯಗಳು.!

Posted By:
Subscribe to Filmibeat Kannada

ಬಾಲಿವುಡ್ ನಟ ಸಂಜಯ್ ದತ್ ಜೀವನ ಕುರಿತು ಬಾಲಿವುಡ್ ನಲ್ಲಿ ಸಿನಿಮಾ ಸಿದ್ದವಾಗುತ್ತಿದೆ. ದತ್ ಪಾತ್ರದಲ್ಲಿ ರಣ್ಬೀರ್ ಕಪೂರ್ ನಟಿಸುತ್ತಿದ್ದು, ರಾಜ್ ಕುಮಾರ್ ಹಿರಾನಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಈ ಮಧ್ಯೆ ಸಂಜಯ್ ದತ್ ಜೀವನದ ಬಗ್ಗೆ ಬಯೋಗ್ರಫಿಯೊಂದು ಬಿಡುಗಡೆಯಾಗಿದೆ. ''ದಿ ಕ್ರೇಜಿ ಅನ್ ಟೋಲ್ಡ್ ಸ್ಟೋರಿ ಆಫ್ ಬಾಲಿವುಡ್ ಬ್ಯಾಡ್ ಬಾಯ್'' ಎಂಬ ಹೆಸರಿನಲ್ಲಿ ಪುಸ್ತುಕ ಪ್ರಕಟವಾಗಿದೆ.

ಐಶ್ವರ್ಯ ರೈಗೆ 10 ಕೋಟಿ ಸಂಭಾವನೆ ಆಫರ್ ನೀಡಿದ್ದೇಕೆ?

ಜಗ್ಗರ್ ನೌತ್ ಪ್ರಕಟಿಸಿರುವ ಈ ಪುಸ್ತಕವನ್ನ ಬರೆದಿರುವುದು ಯಾಸೀರ್ ಅಸ್ಮಾನ್. ಈ ಪುಸ್ತಕದಲ್ಲಿ ಸಂಜಯ್ ದತ್ ಬಗ್ಗೆ ಹಲವು ಗೊತ್ತಿಲ್ಲದ ವಿಚಾರಗಳನ್ನ ಬಹಿರಂಗಡಿಸಲಾಗಿದ್ದು, ಕೆಲವು ಸ್ಫೋಟಕ ಮಾಹಿತಿಗಳನ್ನ ಬಿಚ್ಚಿಡಲಾಗಿದೆಯಂತೆ. ಇದೀಗ ಇದರ ವಿರುದ್ಧ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲು ಸಂಜಯ್ ದತ್ ಮುಂದಾಗಿದ್ದಾರೆ. ಹಾಗಿದ್ರೆ, ಯಾಸ್ಸೀರ್ ಅಸ್ಮಾನ್ ಬರೆದಿರುವ ಈ ಪುಸ್ತಕದಲ್ಲಿ ಏನೆಲ್ಲಾ ಮಾಹಿತಿಗಳಿದೆ ಎಂದು ಮುಂದೆ ಓದಿ....

ಮಾಧುರಿ ದೀಕ್ಷಿತ್ ಸಂಬಂಧದ ಬಗ್ಗೆ ಉಲ್ಲೇಖ

ಸಂಜಯ್ ದತ್ ಮತ್ತು ನಟಿ ಮಾಧುರಿ ದೀಕ್ಷಿತ್ ನಡುವಿನ ಸಂಬಂಧದ ಬಗ್ಗೆ ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಮಾಧುರಿ ಜೊತೆಗಿನ ಸಂಬಂಧವನ್ನ ಮುಂದುವರಿಸಲು ತನ್ನ ಪತ್ನಿ ರಿಚಾ ಶರ್ಮಾ ಅವರಿಗೆ ಡಿವೋರ್ಸ್ ನೀಡಲು ಮುಂದಾಗಿದ್ದರು ಎಂಬ ಸ್ಫೋಟಕ ಮಾಹಿತಿಯನ್ನ ಹೊರಹಾಕಲಾಗಿದೆ.

ತಾಯಿ ತೀರಿಕೊಂಡ 3 ವರ್ಷದ ನಂತರ ಕಣ್ಣಿಟ್ಟಿದ್ದ ದತ್

ಸಂಜಯ್ ದತ್ ಅವರ ತಾಯಿ ತೀರಿಕೊಂಡಾಗ ನಟ ದತ್ ಕಣ್ಣೀರಿಟ್ಟಿರಲಿಲ್ಲವಂತೆ. ಹೀಗಂತ ಈ ಪುಸ್ತಕದಲ್ಲಿ ಬರೆಯಲಾಗಿದೆ. ತಾಯಿ ಸಾವಿಗೀಡಾದ ನಂತರ ಸಂಜಯ್ ದತ್ ಅಮೆರಿಕಾದ ಡ್ರಗ್ಸ್ ಪುನರ್ವಸತಿ ಕೇಂದ್ರದಲ್ಲಿದ್ದರು. ಆಗ ತಂದೆ ಸುನಿತ್ ದತ್ ಪತ್ನಿಯ ಕೊನೆಯ ಆಸೆಗಳಿರುವ ಟೇಪುಗಳನ್ನು ಸಂಜಯ್ ದತ್ ಗೆ ಕಳುಹಿಸಿದ್ದರು. ಅದರಲ್ಲಿ ತನ್ನ ಮಗ ಡ್ರಗ್ಸ್ ವ್ಯಸನದಿಂದ ಹೊರಬರಬೇಕೆಂಬುದಿತ್ತು. ಅದನ್ನು ಕೇಳಿ ಸಂಜಯ್ ದತ್ ಗೆ ದುಃಖ ತಡೆಯಲಾಗದೆ ಅತ್ತಿದ್ದರು ಎಂದು ಬಯೋಗ್ರಫಿಯಲ್ಲಿ ತಿಳಿಸಲಾಗಿದೆ.

ಬಾಲಿವುಡ್ 'ಖಳನಾಯಕ್' ಕನ್ನಡಕ್ಕೆ ಬರ್ತಾರ.?

ನನ್ನ ಬಯೋಗ್ರಫಿ ಬರೆಯಲು ನಾನು ಸೂಚಿಸಿಲ್ಲ

ಯಾಸ್ಸೀರ್ ಅಸ್ಮಾನ್ ಅವರು ಬರೆದಿರುವ ಬಯೋಗ್ರಫಿ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಸಂಜಯ್ ದತ್ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದಾರೆ. ''ನನ್ನ ಬಯೋಗ್ರಫಿ ಬರೆಯಲು ನಾನೂ ಯಾರನ್ನೂ ಸೂಚಿಸಿಲ್ಲ. ಈ ಪುಸ್ತಕದಲ್ಲಿರುವ ಮಾಹಿತಿ ಎಲ್ಲವೂ ಸುಳ್ಳು. ಯಾವುದೇ ಸಂಶೋಧನೆ ಇಲ್ಲದೇ, ಕೇವಲ ಹಳೆ ಸಂದರ್ಶನಗಳು ಅಥವಾ ಮ್ಯಾಗ್ ಜಿನ್ ಗಳಲ್ಲಿ ಬಂದಂತಹ ಮಾಹಿತಿಯನ್ನ ಒಳಗೊಂಡಿದೆ. ಅದರಲ್ಲಿ ಸತ್ಯವಿಲ್ಲ. ಹೀಗಾಗಿ, ನನ್ನ ವಕೀಲರ ಬಳಿ ಮಾತನಾಡಿದ್ದೇನೆ'' ಎಂದು ದತ್ ಪ್ರತಿಕ್ರಿಯಿಸಿದ್ದಾರೆ.

ಸಂಜಯ್ ದತ್ ಅವರ ರೊಮ್ಯಾಂಟಿಕ್ ಫೋಟೋ ವೈರಲ್.!

ಕ್ಷಮೆ ಕೇಳಿದ ಪ್ರಕಟಣೆ ಸಂಸ್ಥೆ

ಇನ್ನು ಸಂಜಯ್ ದತ್ ಅವರ ಪ್ರತಿಕ್ರಿಯೆಗೆ ಫೇಸ್ ಬುಕ್ ನಲ್ಲಿ ಕ್ಷಮೆ ಕೇಳಿರುವ ಪ್ರಕಟಣೆ ಸಂಸ್ಥೆ ಜಗ್ಗರ್ ನೌತ್ ''ಈ ಪುಸ್ತಕವನ್ನ ಯಾಸ್ಸೀರ್ ಅಸ್ಮಾನ್ ಅವರು ಬರೆದಿದ್ದಾರೆ. ನಿಮ್ಮ ಕುಟುಂಬ ಆಪ್ತರು, ಮತ್ತು ಸ್ನೇಹಿತರ ಬಳಿ ಮಾಹಿತಿ ಪಡೆದುಕೊಂಡಿದ್ದಾರೆ. ಅವರು ಕೂಡ ನಿಮ್ಮ ಅಭಿಮಾನಿ. ನಮ್ಮಿಂದ ಬೇಸರವಾಗಿರುವುದಕ್ಕೆ ನಾವು ಕ್ಷಮೆ ಕೇಳುತ್ತೇವೆ'' ಎಂದಿದ್ದಾರೆ.

English summary
Sanjay Dutt has taken a legal action against the writer and publisher of 'The Crazy Untold Story of Bollywood's Bad Boy' as the actor says he had not unauthorised anyone for his biography.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X