For Quick Alerts
  ALLOW NOTIFICATIONS  
  For Daily Alerts

  ಸಾರಾ ಅಲಿ ಖಾನ್‌ಗೆ ವಿಜಯ್ ದೇವರಕೊಂಡ ಮೇಲೆ ಆಸೆ!

  |

  ಸಿನಿಮಾ ರಂಗದಲ್ಲಿ ಒಂದು ಒಳ್ಳೆಯ ಸಿನಿಮಾ ಒಬ್ಬ ಸಾಮಾನ್ಯ ನಟನನ್ನು ಸ್ಟಾರ್ ಮಾಡಿಬಿಡಬಹುದು ಎಂಬುದಕ್ಕೆ ವಿಜಯ್ ದೇವರಕೊಂಡ ಅತ್ಯುತ್ತಮ ಉದಾಹರಣೆ.

  'ಅರ್ಜುನ್ ರೆಡ್ಡಿ'ಗೆ ಮುನ್ನ ಕೆಲವು ಸಿನಿಮಾಗಳನ್ನು ವಿಜಯ್ ದೇವರಕೊಂಡ ಮಾಡಿದ್ದರು. ಆದರೆ ಅವ್ಯಾವುವೂ ಹೆಸರು ಗಳಿಸಲಿಲ್ಲ. ಆದರೆ 'ಅರ್ಜುನ್ ರೆಡ್ಡಿ' ಸಿನಿಮಾ ವಿಜಯ್ ದೇವರಕೊಂಡಗೆ ನಿರೀಕ್ಷೆಯೇ ಮಾಡದಿರದಷ್ಟು ದೊಡ್ಡ ಮಟ್ಟದ ಸ್ಟಾರ್‌ಡಮ್ ತಂದು ಕೊಟ್ಟಿತು.

  ಈಗ ವಿಜಯ್ ದೇವರಕೊಂಡ ಕೇವಲ ತೆಲುಗು ಭಾಷೆಗೆ ಸೀಮಿತವಾದ ನಟನಲ್ಲ ಬದಲಿಗೆ ಪ್ಯಾನ್ ಇಂಡಿಯಾ ಸ್ಟಾರ್. ತೆಲುಗು ಸಿನಿಮಾಗಳ ಜೊತೆಗೆ ಬಾಲಿವುಡ್‌ಗೂ ಕಾಲಿಡುತ್ತಿದ್ದಾರೆ. ವಿಜಯ್ ದೇವರಕೊಂಡ ಜೊತೆ ನಟಿಸಲು ಬಾಲಿವುಡ್ ನಟಿಯರೇ ಕಾಯುತ್ತಿದ್ದಾರೆ. ಅದರಲ್ಲೊಬ್ಬರು ನಟಿ ಸಾರಾ ಅಲಿ ಖಾನ್.

  ವಿಜಯ್ ದೇವರಕೊಂಡ ಜೊತೆ ನಟಿಸುವಾಸೆ

  ವಿಜಯ್ ದೇವರಕೊಂಡ ಜೊತೆ ನಟಿಸುವಾಸೆ

  ವರುಣ್ ಧವನ್, ರಣ್ವೀರ್ ಸಿಂಗ್, ಅಕ್ಷಯ್ ಕುಮಾರ್ ಅಂಥಹಾ ಸ್ಟಾರ್ ನಟರೊಟ್ಟಿಗೆ ನಟಿಸಿರುವ ಸಾರಾ ಅಲಿ ಖಾನ್‌ಗೆ ವಿಜಯ್ ದೇವರಕೊಂಡ ಜೊತೆ ನಟಿಸಬೇಕೆಂಬ ಆಸೆಯಂತೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಈ ನಟಿ, ''ನನಗೆ ವಿಜಯ್ ದೇವರಕೊಂಡ ಜೊತೆ ನಟಿಸಬೇಕೆಂಬ ಆಸೆಯಿದೆ. ಆತ ಕೇವಲ ಕೂಲ್ ಮಾತ್ರವಲ್ಲ ಸಖತ್ ಹಾಟ್ ಸಹ'' ಎಂದಿದ್ದಾರೆ.

  ಪಾರ್ಟಿ ಮಾಡಿದ್ದ ವಿಜಯ್ ಹಾಗೂ ಸಾರಾ

  ಪಾರ್ಟಿ ಮಾಡಿದ್ದ ವಿಜಯ್ ಹಾಗೂ ಸಾರಾ

  ವಿಜಯ್ ದೇವರಕೊಂಡ ಹಾಗೂ ಸಾರಾ ಅಲಿ ಖಾನ್‌ ಪರಿಚಿತರೇ. ಹಿಂದೊಮ್ಮೆ ಕರಣ್ ಜೋಹರ್ ಮನೆಯಲ್ಲಿ ವಿಜಯ್ ದೇವರಕೊಂಡ, ಕಿಯಾರಾ ಅಡ್ವಾಣಿ, ಪುರಿ ಜಗನ್ನಾಥ್, ಚಾರ್ಮಿ ಕೌರ್, ಫ್ಯಾಷನ್ ಡಿಸೈನರ್ ಮನೀಷ್ ಮಲ್ಹೋತ್ರಾ ಎಲ್ಲರೂ ಪಾರ್ಟಿ ಮಾಡಿದ್ದರು. ಆ ಚಿತ್ರಗಳು ಸಖತ್ ವೈರಲ್ ಆಗಿದ್ದವು. ಆಗಲೂ ಸಹ ಸಾರಾ ಅಲಿ ಖಾನ್, ವಿಜಯ್ ದೇವರಕೊಂಡ ಅನ್ನು ಬಹುವಾಗಿ ಹೊಗಳಿದ್ದರು.

  ಧನುಶ್‌ ಜೊತೆ ಸಾರಾ ಅಲಿ ಖಾನ್ ನಟನೆ

  ಧನುಶ್‌ ಜೊತೆ ಸಾರಾ ಅಲಿ ಖಾನ್ ನಟನೆ

  ಸಾರಾ ಅಲಿ ಖಾನ್ ಇದೀಗ ದಕ್ಷಿಣದ ಸ್ಟಾರ್ ನಟ ಧನುಶ್ ಜೊತೆ 'ಅತರಂಗಿ ರೇ' ಸಿನಿಮಾದಲ್ಲಿ ನಟಿಸಿದ್ದಾರೆ. 'ಅತರಂಗಿ ರೇ' ಸಿನಿಮಾವು ಪಂಜಾಬಿ ಹುಡುಗಿ ಹಾಗೂ ತಮಿಳುನಾಡು ಹುಡುಗನ ನಡುವಿನ ಪ್ರೇಮಕತೆಯನ್ನು ಹೊಂದಿದೆ. ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಸಹ ಇದ್ದು, ಇದೊಂದು ತ್ರಿಕೋನ ಪ್ರೇಮಕತೆಯುಳ್ಳ ಸಿನಿಮಾ ಆಗಿದೆ. ಈ ಹಿಂದೆ ಧನುಷ್ ನಟನೆಯ ಸೂಪರ್ ಹಿಟ್ ಹಿಂದಿ ಸಿನಿಮಾ 'ರಾಂಝನಾ' ನಿರ್ದೇಶಿಸಿದ್ದ ಆನಂದ್ ಎಲ್ ರಾಯ್ ಈಗ 'ಅತರಂಗಿ ರೇ' ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

  'ಲೈಗರ್' ಸಿನಿಮಾದಲ್ಲಿ ವಿಜಯ್ ಬ್ಯುಸಿ

  'ಲೈಗರ್' ಸಿನಿಮಾದಲ್ಲಿ ವಿಜಯ್ ಬ್ಯುಸಿ

  ಇನ್ನು ನಟ ವಿಜಯ್ ದೇವರಕೊಂಡ ಹಲವು ಸಿನಿಮಾಗಳನ್ನು ಬ್ಯುಸಿಯಾಗಿದ್ದಾರೆ. ಪ್ರಸ್ತುತ ಪುರಿ ಜಗನ್ನಾಥ್ ನಿರ್ದೇಶನದ 'ಲೈಗರ್' ಸಿನಿಮಾದಲ್ಲಿ ವಿಜಯ್ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ ಚೆಲುವೆ ಅನನ್ಯಾ ಪಾಂಡೆ ನಾಯಕಿ. ಈ ಸಿನಿಮಾದಲ್ಲಿ ಜಗದ್ವಿಖ್ಯಾತ ಬಾಕ್ಸರ್ ಮೈಕ್ ಟೈಸನ್ ಸಹ ನಟಿಸುತ್ತಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಚಾರ್ಮಿ ಕೌರ್. ಈ ಸಿನಿಮಾದ ಬಳಿಕ ಸುಕುಮಾರ್ ನಿರ್ದೇಶನದ ಹೊಸ ಸಿನಿಮಾದಲ್ಲಿ ವಿಜಯ್ ನಟಿಸಲಿದ್ದಾರೆ. ಇದು 'ಆರ್ಯ' ಸಿನಿಮಾದ ಮುಂದುವರೆದ ಭಾಗ ಆಗಿರಲಿದೆ ಎನ್ನಲಾಗುತ್ತಿದೆ. 'ಆರ್ಯ' ಪಾತ್ರವನ್ನು ಇನ್ನು ಮುಂದೆ ಅಲ್ಲು ಅರ್ಜುನ್ ಬದಲಿಗೆ ವಿಜಯ್ ದೇವರಕೊಂಡ ಮುಂದುವರೆಸಿಕೊಂಡು ಹೋಗಲಿದ್ದಾರೆ.

  English summary
  Bollywood actress Sara Ali Khan wants to act with Vijay Devarakonda. She said Vijay is not only cool he is hot also.
  Saturday, December 11, 2021, 16:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X