For Quick Alerts
  ALLOW NOTIFICATIONS  
  For Daily Alerts

  ವರ್ಮಾ ಸತ್ಯ 2 ಚಿತ್ರದ ಮುನ್ನೋಟ

  By ಜೇಮ್ಸ್ ಮಾರ್ಟಿನ್
  |

  ರಾಮ್ ಗೋಪಾಲ್ ವರ್ಮಾ ಭೂಗತ ಜಗತ್ತಿನ ಬಗ್ಗೆ ಸಂಶೋಧನಾ ಮತ್ತು ಅಭಿವೃದ್ಧಿ ನಡೆಸುವವರಿಗೆ ಅಧಿಕೃತ ವಕ್ತಾರ ಎನ್ನಬಹುದು. ಸತ್ಯ ಎಂಬ ಚಿತ್ರದ ಮೂಲಕ ಇಡೀ ಹಿಂದಿ ಚಿತ್ರರಂಗಕ್ಕೆ ರಕ್ತದ ವಾಸನೆ, ಭೂಗತ ಜಗತ್ತಿನ ಭಯಂಕರ ಸತ್ಯಗಳು, ದೈನಂದಿನ ಬದುಕಿನ ತಲ್ಲಣಗಳ ಪರಿಚಯ ಮಾಡಿಕೊಟ್ಟ ನಿರ್ಮಾಪಕ, ನಿರ್ದೇಶಕ. ಈಗ ಈ ವಾರಂತ್ಯಕ್ಕೆ ಸತ್ಯ 2 ಚಿತ್ರವನ್ನು ಪ್ರೇಕ್ಷಕರಿಗೆ ನೀಡುತ್ತಿದ್ದಾರೆ.

  ಈಗ ಸತ್ಯ ಚಿತ್ರದ ಮುಂದುವರೆದ ಭಾಗದಲ್ಲಿ ಹೊಸ ಕಥೆಯನ್ನು ಹೇಳಲಾಗುತ್ತದೆ. ಅದು ಹೊಸಬರನ್ನು ಹಾಕಿಕೊಂಡು ಹೊಸ ಧಾಟಿ ನಿರೂಪಣೆ ಇರುತ್ತದೆ ಎನ್ನಲಾಗಿದೆ. ಸತ್ಯ 2 ಟ್ರೇಲರ್ ಈಗಾಗಲೇ ತೆಲುಗು, ತಮಿಳಿನಲ್ಲಿ ಬಿಡುಗಡಯಾದ ನಂತರ ಹಿಂದಿಯಲ್ಲೂ ಕಾಣಿಸಿಕೊಂದು ಅಭಿಮಾನಿಗಳಿಗೆ ಹುಚ್ಚೆಬ್ಬಿಸಿತ್ತು. ಎಂದಿನಂತೆ ಹೊಸಬರಿಗೆ ವರ್ಮಾ ಮಣೆ ಹಾಕಿದ್ದು. ಪುನೀತ್ ಸಿಂಗ್ ಹಿಂದಿ ಆವೃತ್ತಿಯಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ತೆಲುಗಿನಲ್ಲಿ ಶರ್ವಾನಂದ್ ನಟಿಸುತ್ತಿದ್ದಾರೆ.

  ಟ್ರೇಲರ್ ನಲ್ಲಿ ಹೊಸದೇನಿದೆ ಎಂದು ನೋಡಿದರೆ ಎಂದಿನಂತೆ ಮೊದಲ ದೃಶ್ಯದಲ್ಲೇ ಗಮನ ಸೆಳೆಯುವುದು ವರ್ಮಾ ಅವರ ತಂಡದ ಕೆಮೆರಾ ಕೈಚಳಕ ಹಾಗೂ ಹಿನ್ನೆಲೆ ಸಂಗೀತ ಎಂದು ಕಾಣುತ್ತದೆ.

  ದಾವೂದ್ ಇಬ್ರಾಹಿಂ ನಿವೃತ್ತಿ ಹೊಂದಿದ್ದಾನೆ. ಛೋಟಾ ಶಕೀಲ್ ನಿಷ್ಕ್ರಿಯನಾಗಿದ್ದಾನೆ. ಹೀಗಾಗಿ ಭೂಗತ ಜಗತ್ತು, ರೌಡಿಸಂ ಇನ್ನಿಲ್ಲ ಎಂದು ಅನೇಕ ಜನ ತಿಳಿದಿದ್ದಾರೆ. ಆದರೆ, ಮನುಷ್ಯರಲ್ಲಿ ಆಸೆ, ಆಕಾಂಕ್ಷೆ ಇರುವ ತನಕ ಭೂಗತ ಜಗತ್ತು ಮರೆಯಾಗುವುದಿಲ್ಲ. ಭೂಗತ ಜಗತ್ತಿನ ಸ್ವರೂಪ ಬದಲಾಗಬಹುದು ಅಷ್ಟೇ ಎಂದು ಟ್ರೇಲರ್ ನಲ್ಲಿ ಹೇಳಲಾಗಿತ್ತು.

  ಚರ್ಚ್ ಗೇಟ್ ರೈಲ್ವೆ ಸ್ಟೇಷನ್ ಬಳಿ ನಾಯಕನ ಪಾತ್ರಧಾರಿ ಸತ್ಯ ಬರುವ ದೃಶ್ಯ. ಡಾನ್ ಒಬ್ಬರನ್ನು ಭೇಟಿ ಮಾಡುವ ದೃಶ್ಯವಿದೆ. ದಾವೂದ್ ಇಬ್ರಾಹಿಂ, ಛೋಟಾ ಶಕೀಲ್ ಹಾಗೂ ಅಬು ಸಲೇಂ ಅವರು ಮಾಡಿದ ತಪ್ಪೆಂದರೆ ಅವರ ಕಂಪನಿಗೆ ಒಂದು ಹೆಸರು ನೀಡಿದ್ದು,ಜನ ಎಂದಿಗೂ ಕಾಣದೆ ಇರುವ ಶಕ್ತಿಗೆ ಹೆದರುವುದು ಜಾಸ್ತಿ.

  ಸತ್ಯ ಈ ಚಿತ್ರದಲ್ಲಿ ಮುಂಬೈನ ಮೂರು ಪ್ರಭಾವಿ ವ್ಯಕ್ತಿಗಳನ್ನು ಕೊಲ್ಲಲು ಸಂಚು ಹೂಡುತ್ತಾನೆ. ಶ್ರೀಮಂತ ಉದ್ಯಮಿ, ಪೊಲೀಸ್ ಆಯುಕ್ತ ಹಾಗೂ ಮಾಧ್ಯಮ ಚಾನೆಲ್ ಒಡೆಯ ಅವನ ಟಾರ್ಗೆಟ್.

  ಎಂದಿನಂತೆ ಈ ಕೊಲೆ ಸಂಚಿನ ನಡುವೆ ಪ್ರೇಮಕಥೆ ಇರುತ್ತದೆ. ಪ್ರೇಮಕಥೆಗೆ ಎಷ್ಟು ಮಹತ್ವ ಇದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯುತ್ತದೆ. ಭೂಗತ ಜಗತ್ತಿನ ಹೊಸ ಆವಿಷ್ಕಾರ ಅಥವಾ ಮರುಹುಟ್ಟು ಕಾಣಬಹುದು ಎಂದಿರುವ ವರ್ಮಾಗೂ ಈಗ ಮರು ಹುಟ್ಟು ಬೇಕಿದೆ, ಸಾಲು ಸಾಲು ಫ್ಲಾಪ್ ಚಿತ್ರಗಳ ನಂತರ ವರ್ಮಾ ಅವರ ಬಹು ಯಶಸ್ವಿ ಚಿತ್ರ ಸತ್ಯ ದ ಮುಂದಿನ ಭಾಗ ಮತ್ತೊಮ್ಮೆ ಜಯ ತಂದು ಕೊಡುವುದೇ ಕಾದುನೋಡಬೇಕಿದೆ.

  ಸತ್ಯ 2 ಚಿತ್ರ ಸುಮಾರು 15 ಕೋಟಿ ಬಜೆಟ್ ನಲ್ಲಿ ತಯಾರಾಗಿದೆ. ಚಿತ್ರಕ್ಕೆ ಎಂದಿನಂತೆ ಒಳ್ಳೆ ಹೈಪ್ ಇದೆ. ಅಕ್ಟೋಬರ್ 25ಕ್ಕೆ ತೆರೆ ಕಾಣಬೇಕಿದ್ದ ಚಿತ್ರ ನವೆಂಬರ್ 9ಕ್ಕೆ ಚಿತ್ರಮಂದಿರಕ್ಕೆ ಬರಲಿದೆ. ಕಾರ್ಪೊರೇಟ್ ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಪುನೀತ್, ಅನೈಕ್ ಸೊಟಿ ಹಾಗೂ ಅರಾಧಾನ ಗುಪ್ತ ಅವರಿಗೆ ಈ ಚಿತ್ರ ಬ್ರೇಕ್ ನೀಡುವುದೇ ಎಂಬುದೇ ಮುಂದಿರುವ ಪ್ರಶ್ನೆ (ಐಎಎನ್ಎಸ್)

  English summary
  The Diwali(Deepavali) season has just passed by but we haven't yet left the festivity behind. So gear up to experience the chills and thrills of an underworld drama this week. Ram Gopal Varma's upcoming film Satya 2 will hit the theatres on Friday, November 9.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X