»   » ಸಪ್ತಪದಿ ತುಳಿದ ಬಾಲಿವುಡ್ ತಾರೆ ಸಯಾಲಿ ಭಗತ್

ಸಪ್ತಪದಿ ತುಳಿದ ಬಾಲಿವುಡ್ ತಾರೆ ಸಯಾಲಿ ಭಗತ್

By: Sayali Bhagat Weds Navneet Pratap Singh
Subscribe to Filmibeat Kannada

ಮಾಜಿ ಮಿಸ್ ಇಂಡಿಯಾ ಬಾಲಿವುಡ್ ತಾರೆ ಸಯಾಲಿ ಭಗತ್ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ. ದೆಹಲಿ ಮೂಲದ ಉದ್ಯಮಿ ನವನೀತ್ ಪ್ರತಾಪ್ ಸಿಂಗ್ ಅವರನ್ನು ವರಿಸುವ ಮೂಲಕ ಹೊಸಬಾಳಿನ ಹೊಸಿಲು ತುಳಿದಿದ್ದಾರೆ. ಅಂದಹಾಗೆ ಇವರಿಬ್ಬರದ್ದೂ ಗುರುಹಿರಿಯರು ನಿಶ್ಚಯಿಸಿರುವ ಮದುವೆ.

ಪೋಷಕರು ಒಪ್ಪಿದ ಹುಡುಗನ ಕೈಹಿಡಿದಿದ್ದಾರೆ ಸಯಾಲಿ. ಸಾಮಾನ್ಯವಾಗಿ ಬಾಲಿವುಡ್ ನಲ್ಲಿ ತಾರೆಗಳ ಮದುವೆ ಎಂದರೆ ಧಾಂ ಧೂಂ ಎಂದು ನಡೆಯುತ್ತದೆ. ಆದರೆ ಸಯಾಲಿ ಮದುವೆ ಮಾತ್ರ ಸದ್ದಿಲ್ಲದಂತೆ ನಡೆದಿದೆ. ಮದುವೆ ಬಳಿಕವಷ್ಟೇ ಚಿತ್ರೋದ್ಯಮಕ್ಕೆ ಗೊತ್ತಾಗಿದ್ದು. ಇವರ ಮದುವೆ ಪಕ್ಕಾ ಗುಜರಾತಿ ಸಂಪ್ರದಾಯದಂತೆ ನಡೆಯಿತು.


ಡಿಸೆಂಬರ್ 10ರಂದು ಇಬ್ಬರೂ ಮದುವೆಯಾದರೂ ಇವರಿಬ್ಬರ ಮದುವೆ ಫೋಟೋಗಳು ರಿಲೀಸ್ ಆಗಿದ್ದು ಮಾತ್ರ ತಡವಾಗಿ. ಮನೆಯವರೆಲ್ಲರೂ ಹುಡುಗನನ್ನು ಒಪ್ಪಿದ ಮೇಲೆ ಡೇಟಿಂಗ್ ಎಂದು ಕಾಲಕಳೆಯಲು ನಮ್ಮಿಬ್ಬರಿಗೂ ಇಷ್ಟವಿರಲಿಲ್ಲ. ಹಾಗಾಗಿ ಆದಷ್ಟು ಬೇಗ ಗಟ್ಟಿಮೇಳ ಮೊಳಗಿತು ಎಂದಿದ್ದಾರೆ ಸಯಾಲಿ.

ಈಗ ಇಬ್ಬರೂ ಸೈಯಾರೆ ಸೈ ಎಂದು ಹನಿಮೂನ್ ಎಕ್ಸ್ ಪ್ರೆಸ್ ಹತ್ತಲು ಸಿದ್ಧವಾಗಿದ್ದಾರೆ. 207ರಲ್ಲಿ ದಿ ಟ್ರೈನ್ ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಅಡಿಯಿಟ್ಟ ಸಯಾಲಿ ಬಳಿಕ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದರು. ಗುಡ್ ಲಕ್, ಹಲ್ಲಾ ಬೋಲ್, ಘೋಸ್ಟ್ ಚಿತ್ರಗಳು ಒಂದಷ್ಟು ಹೆಸರು ತಂದುಕೊಟ್ಟವು. ಮದುವೆ ಬಳಿಕ ಪತಿ ಒಪ್ಪಿದರೆ ಬಣ್ಣ ಹಚ್ಚುತ್ತೇನೆ ಎಂಬ ವಿಶ್ವಾಸದಲ್ಲಿದ್ದಾರೆ ಸಯಾಲಿ. (ಏಜೆನ್ಸೀಸ್)

English summary
Former Miss India World and Bollywood Actress Sayali Bhagat got married to a family friend Navneet Pratap Singh, a Delhi based illustrious entrepreneur. The wedding took place in a traditional Gujarathi style at Hotel Sea Princess on Tuesday, Dec 10, 2013. 
Please Wait while comments are loading...