For Quick Alerts
  ALLOW NOTIFICATIONS  
  For Daily Alerts

  Urfi Javed : ಉರ್ಫಿ ಹೊಸ ಅವತಾರ ಕಂಡು ತಡೆಹಿಡಿದ ಸೆಕ್ಯೂರಿಟಿ ಗಾರ್ಡ್, ವೀಡಿಯೋ ವೈರಲ್!

  |

  ಈಗಾಗಲೇ ತಮ್ಮ ಔಟ್‌ಫಿಟ್‌ಗಳ ವಿಚಾರದಲ್ಲಿ ಉರ್ಫಿ ಜಾವೇದ್ ಹಲವು ಬಾರಿ ಟ್ರೋಲ್ ಆಗಿದ್ದಾರೆ. ಹಾಗ್ನೋಡಿದ್ರೆ, ಉರ್ಫಿ ಜಾವೇದ್ ಯಾವುದೇ ಡ್ರೆಸ್ ತೊಟ್ಟರೂ ಟ್ರೋಲ್ ಆಗುತ್ತಿದ್ದಾರೆ. ಟ್ರೋಲ್​ ಆಗುವ ರೀತಿಯಲ್ಲೇ ಪ್ರತಿಬಾರಿ ವಿಚಿತ್ರ ಉಡುಗೆಗಳನ್ನು ಧರಿಸಿ ಉರ್ಫಿ ಕ್ಯಾಮರಾಗೆ ಪೋಸ್​ ಕೊಡುತ್ತಾರೆ. ಈ ಸಮಯದಲ್ಲಿ ಸಾಕಷ್ಟು ಕಮೆಂಟ್‌ಗಳು ಬಂದರೂ ಉರ್ಫಿ ಜಾವೇದ್ ತಲೆ ಕೆಡಿಸಿಕೊಳ್ಳಲ್ಲ.

  ಬಿಗ್ ಬಾಸ್ ಒಟಿಟಿ ಖ್ಯಾತಿಯ ಉರ್ಫಿ ಜಾವೇದ್ ತನ್ನ ಅಸಾಂಪ್ರದಾಯಿಕ ಫ್ಯಾಷನ್ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಫಾಲೋವರ್ಸ್‌ಗಳ ಮುಂದೆ ತನ್ನ ವಿಚಿತ್ರ ಶೈಲಿಯ ಬಟ್ಟೆಗಳಲ್ಲಿ ಪ್ರತ್ಯಕ್ಷರಾಗುತ್ತಾರೆ. ಅಷ್ಟೇ ಅಲ್ಲದೆ ಪ್ರತೀ ಬಾರಿಯೂ ಟ್ರೋಲ್ ಆಗುವ ಉರ್ಫಿ ಜಾವೇದ್, ಮತ್ತದೇ ಅವತಾರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ತಾರೆ. ಕ್ಯಾಮರಾಗೆ ಪೋಸ್ ಕೂಡ ನೀಡುತ್ತಾರೆ.

  ಸಾಮಾಜಿಕ ಜಾಲತಾಣದಲ್ಲಿ ಭಾರಿ ಟ್ರೋಲ್‌ಗೆ ಒಳಗಾಗುವ ಉರ್ಫಿ ಜಾವೇದ್ ಇವತ್ತೂ ಕೂಡ ಮತ್ತೊಂದು ಅವತಾರದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಕಾಫಿ ಬಣ್ಣದ ವಿಚಿತ್ರ ಬಟ್ಟೆಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಈ ವೇಳೆ ಪಾರ್ಕ್‌ಗೆ ಹೋಗಿ ಅಲ್ಲಿ ಫೋಟೊಗೆ ಪೋಸ್ ಕೊಡುವ ತಯಾರಿಯಲ್ಲಿದ್ದ ಉರ್ಫಿಗೆ ತುಂಬಾ ನಿರಾಸೆಯಾಗಿದೆ. ಪಾರ್ಕ್ ಒಳಕ್ಕೆ ಇನ್ನೇನು ಪ್ರವೇಶ ಪಡೆಯಬೇಕು ಅನ್ನುವಷ್ಟರಲ್ಲಿ ಅಲ್ಲಿದ್ದ ಸೆಕ್ಯೂರಿಟಿ ಗಾರ್ಡ್ ಅವರನ್ನು ತಡೆದಿದ್ದಾರೆ.

  ಒಳಗೆ ಹೋಗಲು ಅವಕಾಶ ಇಲ್ಲ, ಇಲ್ಲಿಂದ ತೆರಳಿ ಎಂದಿದ್ದಾರೆ ಅಲ್ಲಿನ ಗಾರ್ಡ್. ಆದರೆ ಅದಕ್ಕೆ ಮುನಿಸಿಕೊಂಡ ಉರ್ಫಿ ನೆರೆದಿದ್ದ ಫೋಟೊಗ್ರಾಫರ್‌ಗಳಿಗೆ ಫೋಟೊ ಕ್ಲಿಕ್ಕಿಸಲು ಬಿಡದೆ ಮುಖ ಮುಚ್ಚಿಕೊಂಡಿದ್ದಾರೆ. ಅಲ್ಲದೆ ತನ್ನನ್ನು ತಡೆದ ಸೆಕ್ಯೂರಿಟಿ ಗಾರ್ಡ್‌ಗೆ ಕೈ ಮುಗಿದು "ನಾವು ಹೋಗುತ್ತೇವೆ. ಆದರೆ ಸಮಾಧಾನದಿಂದ ಮಾತನಾಡಿ. ನಮಗೂ ಗೌರವ ಇದೆ ಪ್ಲೀಸ್ ." ಎಂದಿದ್ದಾರೆ. ತದನಂತರ ಅಲ್ಲಿಂದ ಉರ್ಫಿ ಜಾವೇದ್ ತೆರಳಿದ್ದಾರೆ.

  ಉರ್ಫಿ ಜಾವೇದ್ ಈಗ ಟ್ಯಾಬ್ಲಾಯ್ಡ್‌ಗಳ ಕ್ವೀನ್ ಆಗಿಯೂ ಹೆಚ್ಚು ಪ್ರಚಾರದಲ್ಲಿದ್ದಾರೆ. ವಿಚಿತ್ರ ಬಟ್ಟೆ ಹಾಕುವ ಮೂಲಕವೆ ಯಾವಾಗಲೂ ಟಾಕ್ ಆಫ್ ದಿ ಟೌನ್ ಆಗಿರುತ್ತಾರೆ. ಬಿಗ್ ಬಾಸ್ ಒಟಿಟಿ ಖ್ಯಾತಿಯ ಉರ್ಫಿ ಜಾವೇದ್ ಸಾಮಾಜಿಕ ಮಾಧ್ಯಮದಲ್ಲಿ ಹೊಸ ಸೆನ್ಸೇಷನ್ ಸೃಷ್ಟಿಸುತ್ತಲೆ ಇರುತ್ತಾರೆ. ಅಲ್ಲದೇ ಉರ್ಫಿ ಜಾವೇದ್ ಫೋಟೊಗಳು ಮತ್ತು ವಿಡಿಯೋಗಳು ಸಾಕಷ್ಟು ವೀವ್ಸ್ ಪಡೆಯೋದು ಅಲ್ಲದೇ, ಉತ್ತಮ ಬೇಡಿಕೆ ಕೂಡ ಇದೆಯಂತೆ.

  English summary
  Security guards stopped Urfi Javed For Her New Avatar. Video goes viral,
  Tuesday, March 29, 2022, 10:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X