Don't Miss!
- Finance
ಫೆಬ್ರವರಿ 1ರಿಂದ ಟಾಟಾ ಮೋಟರ್ಸ್ ಕಾರು ದುಬಾರಿ, ಯಾಕೆ, ಇಲ್ಲಿದೆ ಕಾರಣ?
- News
ಹಾಸನ ಟಿಕೆಟ್ ಬಗ್ಗೆ ಮಾತನಾಡಲು ರೇವಣ್ಣ ಬಿಟ್ಟರೆ ಯಾರಿಗೂ ಅವಕಾಶವಿಲ್ಲ; HDKಗೆ ಸೂರಜ್ ಟಾಂಗ್
- Technology
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- Sports
Women's Premier League : ಫೆಬ್ರವರಿ 2ನೇ ವಾರ ಆಟಗಾರರ ಹರಾಜು: ದೆಹಲಿಯಲ್ಲಿ ಹರಾಜು ಪ್ರಕ್ರಿಯೆ
- Automobiles
ಬಾಕ್ಸ್ ಆಫೀಸ್ನಲ್ಲಿ 'ಪಠಾಣ್' ಅಬ್ಬರ: ಈ ಚಿತ್ರದಲ್ಲಿ ಕಾಣಿಸಿಕೊಂಡ ಆಕರ್ಷಕ ಕಾರುಗಳಿವು...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ನನ್ನ ಮಗಳು ನಟಿಯಾಗ ಬಯಸಿದರೆ ಆಕೆಯ ಜೊತೆಗೂ ಮಲಗುತ್ತೇನೆ": ನಿರ್ಮಾಪಕನ ಕರಾಳ ಮುಖ ಬಿಚ್ಚಿಟ್ಟ ನಟಿ
ಮೀ ಟೂ ಅಭಿಯಾನ ಆರಂಭವಾದ ಬಳಿಕ ಕಾಸ್ಟಿಂಗ್ ಕೌಚ್‌ನ ಅದೆಷ್ಟೋ ಪ್ರಕರಣಗಳು ಹೊರ ಬಿದ್ದಿದೆ. ನಟಿಯಾಗುವ ಕನಸಿನಲ್ಲಿ ಅವಕಾಶ ಅರಸಿ ಬಂದ ಯುವತಿಯರನ್ನು ನಿರ್ಮಾಪಕರು ಅಥವಾ ಇತರ ವ್ಯಕ್ತಿಗಳು ದುರುಪಯೋಗ ಪಡಿಸಿಕೊಳ್ಳಲು ಯತ್ನಸಿದ ಅನೇಕ ಘಟನೆಗಳು ಚಿತ್ರರಂಗದಲ್ಲಿದೆ. ಈ ಕಾಸ್ಟಿಂಗ್ ಕೌಚ್ ಎನ್ನುವುದು ಎಲ್ಲಾ ಚಿತ್ರರಂಗದಲ್ಲಿದ್ದು, ಒಂದೊಂದೆ ಪ್ರಕರಣಗಳು ಬಹಿರಂಗವಾಗುತ್ತಿದೆ.
ಮೀ ಟೂ ಅಭಿಯಾನ ಆರಂಭವಾದ ಬಳಿಕ ಅನೇಕ ನಟಿಯರು ತಮಗಾದ ಕಹಿ ಅನುಭವಗಳನ್ನು ಸಾರ್ವಜನಿಕರವಾಗಿ ತೋಡಿಕೊಂಡಿದ್ದರು. ಇದರಿಂದ ಕನ್ನಡ ಚಿತ್ರರಂಗವೂ ಸೇರಿದಂತೆ ಭಾರತೀಯ ಚಿತ್ರರಂಗದ ಎಲ್ಲಾ ಭಾಗಗಳಲ್ಲೂ ಬಿರುಗಾಳಿ ಎದ್ದಿತ್ತು. ಕೆಲವು ಪ್ರಮುಖ ವ್ಯಕ್ತಿಗಳ ವಿರುದ್ಧವೂ ಆರೋಪ ಕೇಳಿಬಂದಿದ್ದು, ಕೆಲ ಪ್ರಕರಣಗಳು ಕೋರ್ಟ್ ಮೆಟ್ಟಿಲೇರಿದ್ದವು.
ಬಾಲಿವುಡ್
ಬ್ಯೂಟಿ
ಅಲ್ಲ,
'ಪುಷ್ಪ'-
2
ಐಟಂ
ಸಾಂಗ್‌ನಲ್ಲಿ
ಕುಣಿಯೋದು
ಆ
'ಲೋಕಲ್'
ಹುಡುಗಿ?
ಕಾಸ್ಟಿಂಗ್ ಕೌಚ್ ಎಂದರೆ ಮನರಂಜನಾ ಕ್ಷೇತ್ರದಲ್ಲಿ, ಅದರಲ್ಲೂ ಸಿನೆಮಾ ಮುಂತಾದವುಗಳಲ್ಲಿ ನಟನೆಯ ಅವಕಾಶಗಳನ್ನು ಕೇಳಿಬಂದವರನ್ನು ಚಿತ್ರದ ನಿರ್ದೇಶಕರು ಅಥವಾ ನಿರ್ಮಾಪಕರು ಲೈಂಗಿಕ ಸುಖಕ್ಕಾಗಿ ಬಳಸಿಕೊಳ್ಳಲು ಪ್ರಚೋದಿಸುವುದನ್ನು ಕಾಸ್ಟಿಂಗ್ ಕೌಚ್ ಎನ್ನುತ್ತಾರೆ. ಸದ್ಯ ಚಿತ್ರರಂಗದಲ್ಲಿ ಇಂತಹ ವಾತಾವರಣ ಕಮ್ಮಿಯಾಗಿದ್ದು, ಕೆಲ ವರ್ಷಗಳಿಂದ ಹಿಂದೆ ಇಂತಹ ಪರಿಸ್ಥಿತಿಯೆ ಹೆಚ್ಚಾಗಿತ್ತು. ಈ ಬಗ್ಗೆ ಆಗ್ಲೇ ಜನಮ್ ಮೋಹೆ ಬಿತಿಯಾ ಹಿ ಕಿಜೋ ಹಾಗೂ ಸಂತೋಷಿ ಮಾದಲ್ಲಿ ಕಾಣಿಸಿಕೊಂಡಿರುವ ನಟಿ ರತನ್ ರಜಪೂತ್ ಮಾತನಾಡಿದ್ದಾರೆ.
ಹಿಂದಿ ಕಿರುತೆರೆ ನಟಿ ರತನ್ ರಜಪೂತ್ ಹಿಂದಿ ಬಿಗ್ ಬಾಸ್ ಸೀಸನ್ 7ರ ಸ್ಫರ್ಧಿಯಾಗಿದ್ದು, ಈಗ ತಮ್ಮದೇ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ. ಇತ್ತೀಚಿಗೆ ತಮ್ಮ ಯೂಟ್ಯೂಬ್‌ನಲ್ಲಿ ಮಾತನಾಡಿದ ಅವರು, ನಿರ್ಮಾಪಕರೊಬ್ಬರು ಪರೋಕ್ಷವಾಗಿ ತಮ್ಮ ಜೊತೆ ಲೈಂಗಿಕ ಸಂಪರ್ಕ ಇಟ್ಟುಕೊಳ್ಳುವಂತೆ ಪ್ರಚೋದಿಸಿದ ಕಹಿ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಶಾರುಖ್
ಖಾನ್
ಮಾಡಿರುವ
ತಪ್ಪಾದರೂ
ಏನು?
ಸುಪ್ರೀಂಕೋರ್ಟ್
ಪ್ರಶ್ನೆ
"14 ವರ್ಷಗಳ ಹಿಂದೆ ಆಗಷ್ಟೇ ಮುಂಬೈಗೆ ತೆರಳಿದ್ದೆ. ನಟಿಯಾಗಬೇಕು ಎಂಬ ಆಸೆಯಿಂದ 60-65 ವರ್ಷದ ನಿರ್ಮಾಪಕರರೊಬ್ಬರನ್ನು ಭೇಟಿಯಾದೆ. ಆತ ನನ್ನನ್ನು ಅವಮಾನಿಸಿದರು. ನನ್ನ ಕೂದಲು, ನನ್ನ ಚರ್ಮದ ಬಗ್ಗೆ ಕಮೆಂಟ್ ಮಾಡಿದ ಅವರು, ನಿಮ್ಮನ್ನು ಸಂಪೂರ್ಣವಾಗಿ ಬದಲಾಯಿಸಬೇಕು. ನಿಮಗೆ ಸಂಪೂರ್ಣ ಮೇಕ್ ಓವರ್ ಅಗತ್ಯವಿದೆ. ಇದೆಲ್ಲವನ್ನೂ ಮಾಡಲು ಸುಮಾರು 2-2.5 ಲಕ್ಷ ರೂಪಾಯಿ ಖರ್ಚಾಗುತ್ತದೆ. ಇದನ್ನು ನಾನು ಉಚಿತವಾಗಿ ಮಾಡಲು ಆಗುವುದಿಲ್ಲ. ನೀನು ನನ್ನನ್ನು ಗಾಡ್‌ಫಾದರ್ ಆಗಿ ಸ್ವೀಕರಿಸು, ನೀನು ನನಗೆ ಸ್ನೇಹಿತೆಯಾಗಿರಬೇಕು ಎಂದು ಪರೋಕ್ಷವಾಗಿ ಮಾತನಾಡಿದರು" ಎಂದು ನಟಿ ಹೇಳಿದ್ದಾರೆ.
"60-65 ವರ್ಷದ ನಿರ್ಮಾಪಕರ ಮಾತು ಕೇಳಿ ನನಗೆ ಶಾಕ್ ಆಯ್ತು. ನಾನು ನಿಮ್ಮನ್ನು ಗೌರವಿಸುತ್ತೇನೆ. ನೀವು ನನ್ನ ತಂದೆ ವಯಸ್ಸಿನವರು, ನಾನು ನಿಮ್ಮ ಮಗಳಂತೆ, ನಾವು ಹೇಗೆ ಸ್ನೇಹಿತರಾಗಲು ಸಾಧ್ಯ ಎಂದು ಕೇಳಿದೆ. ಇಷ್ಟಕ್ಕೆ ಆ ವ್ಯಕ್ತಿ ಕೋಪಗೊಂಡು ನಾನು ಯಾರಿಗೂ ಉಚಿತವಾಗಿ ಏನು ನೀಡುವುದಿಲ್ಲ. ಇಲ್ಲಿ ಸ್ನೇಹ ಮಾತ್ರ ನಡೆಯುತ್ತದೆ. ನಿನಗೆ ನಟಿಯಾಗಲು ಇಷ್ಟವಿದ್ದರೆ, ಇತಂಹ ನಾಟಕಗಳನ್ನು ನಿಲ್ಲಿಸು ಎಂದು ನನ್ನ ಮೇಲೆ ಸಿಡುಕಿದರು" ಎಂದು ನಟಿ ವಿವರಿಸಿದ್ದಾರೆ.
"ನಾನು
ಶೋಕಿಗಾಗಿ
ಬಂದಿಲ್ಲ..
ಕನ್ನಡ
ಸಿನಿಮಾನ
ದೊಡ್ಡಮಟ್ಟದಲ್ಲಿ
ಬೆಳೆಸಬೇಕು":
ಯಶ್
15
ವರ್ಷಗಳ
ಹಳೇ
ಆಡಿಯೋ
ವೈರಲ್
ಮಾತು ಮುಂದುವರಿಸಿದ ನಟಿ ರತನ್, "ಬಳಿಕ ನಾನು ನಿಮ್ಮ ಮಗಳಿದ್ದಂತೆ ಎನ್ನುತ್ತಿದ್ದಂತೆ ಆ ವ್ಯಕ್ತಿ ಇನ್ನೂ ಕೋಪದಿಂದ, ನೋಡು, ನನ್ನ ಮಗಳು ನಟಿಯಾಗಬೇಕೆಂದು ಬಯಸಿದರೆ, ನಾನು ಅವಳ ಜೊತೆ ಕೂಡ ಮಲಗಲು ಸಿದ್ಧ ಎಂದರು. ಅವರ ಮಾತುಗಳನ್ನು ಕೇಳಿ ನನಗೆ ದಿಗ್ಭ್ರಮೆಯಾಯಿತು. ಕೂಡಲೇ ಅಲ್ಲಿಂದ ಹೊರಟು ಬಂದೆ, ಬಳಿಕ ಆ ವ್ಯಕ್ತಿ ನನಗೆ ಏನೂ ಮಾಡಿಲ್ಲ. ಆದರೆ ಆತ ಆಡಿರುವ ಮಾತುಗಳು ನನ್ನನ್ನು ಕಾಡುತಿತ್ತು ಈ ಘಟನೆಯಿಂದ ಹೊರಬರಲು ನನಗೆ ಒಂದು ತಿಂಗಳು ಬೇಕಾಯಿತು" ಎಂದು ತಮ್ಮ ಜೀವನದಲ್ಲಿ ಆದ ಕಹಿ ಘಟನೆಯನ್ನು ನೆನಪಿಸಿಕೊಂಡರು.