For Quick Alerts
  ALLOW NOTIFICATIONS  
  For Daily Alerts

  ವಿವಾದದಲ್ಲಿ ಸಿಲುಕಿದ್ದ 'ಪಠಾಣ್' ರೆಕ್ಕೆ–ಪುಕ್ಕ ಕಿತ್ತ ಸೆನ್ಸಾರ್: 10 ಕಟ್ಸ್.. ಬೇಷರಂ ಸಾಂಗ್ ಕಥೆಯೇನು?

  |

  ಬಾಲಿವುಡ್ ಕಿಂಗ್ ಶಾರುಖ್ ಖಾನ್ ಸಿನಿಮಾ 'ಪಠಾಣ್' ಜನವರಿ 25ಕ್ಕೆ ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಈ ಸಿನಿಮಾ ನೋಡುವುದಕ್ಕೆ ಅದೆಷ್ಟೋ ಮಂದಿ ಫ್ಯಾನ್ಸ್ ಕಾದು ಕೂತಿದ್ದಾರೆ. ಇನ್ನೊಂದು ಕಡೆ ಸಿನಿಮಾ ವಿವಾದಕ್ಕೂ ಸಿಕ್ಕಿಕೊಂಡು ವಿಲವಿಲ ಅಂತ ಒದ್ದಾಡುತ್ತಿದೆ.

  ಇತ್ತೀಚೆಗೆ 'ಪಠಾಣ್' ಸಿನಿಮಾದ "ಬೇಷರಂ ರಂಗ್.. " ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ತೊಟ್ಟಿದ್ದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಮತ್ತೆ ಕೆಲವರು ಹಾಡು ಅಶ್ಲೀಲವಾಗಿದೆ ಎಂದು ಕಿಡಿಕಾರಿದ್ದರು. ಅಲ್ಲದೆ ಸೆನ್ಸಾರ್ ಬೋರ್ಡ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು.

  ಶಾರುಖ್ ಖಾನ್ ಕೈಯಲ್ಲಿ ಬಾಲಿವುಡ್‌ ಭವಿಷ್ಯ: ಜರ್ಮಿನಿಯಲ್ಲಿ 'ಪಠಾಣ್‌' ಸಖತ್ ರೆಸ್ಪಾನ್ಸ್!ಶಾರುಖ್ ಖಾನ್ ಕೈಯಲ್ಲಿ ಬಾಲಿವುಡ್‌ ಭವಿಷ್ಯ: ಜರ್ಮಿನಿಯಲ್ಲಿ 'ಪಠಾಣ್‌' ಸಖತ್ ರೆಸ್ಪಾನ್ಸ್!

  ಇನ್ನೇನು ಸಿನಿಮಾ ಬಿಡುಗಡೆಗೆ ಸನಿಹದಲ್ಲಿರುವಾಗಲೇ ಸೆನ್ಸಾರ್ ಸಿನಿಮಾ ಕತ್ತರಿ ಹಾಕಿದೆ. ಹಾಗಿದ್ದರೆ ವಿವಾದಕ್ಕೆ ಸಿಲುಕಿದ್ದ 'ಪಠಾಣ್‌'ಗೆ ಸೆನ್ಸಾರ್ ಬೋರ್ಡ್ ಎಲ್ಲೆಲ್ಲಿ ಕತ್ತರಿ ಹಾಕಿದೆ? ಯಾವ ಸರ್ಟಿಫಿಕೇಟ್ ಸಿಕ್ಕಿದೆ? ಬೇಷರಂ ಹಾಡು ಇರುತ್ತಾ? ಇಲ್ವಾ? ಇವೆಲ್ಲದರ ಬಗ್ಗೆ ಮಾಹಿತಿ ತಿಳಿಯಲು ಮುಂದೆ ಓದಿ.

  'ಪಠಾಣ್‌'ಗೆ U/A ಸೆರ್ಟಿಫಿಕೇಟ್

  'ಪಠಾಣ್‌'ಗೆ U/A ಸೆರ್ಟಿಫಿಕೇಟ್

  ವಿವಾದ ಸುಳಿಗೆ ಸಿಲುಕಿ ಬೆಂಡಾಗಿದ್ದ ಶಾರುಖ್ ಖಾನ್‌ ಸಿನಿಮಾ 'ಪಠಾಣ್‌'ವನ್ನು ಸೆನ್ಸಾರ್ ಬೋರ್ಡ್ ವೀಕ್ಷಿಸಿದೆ. ಸೆನ್ಸಾರ್ ಅಧಿಕಾರಿಗಳು ಸಿನಿಮಾ ನೋಡಿ U/A ಸೆರ್ಟಿಫಿಕೇಟ್ ನೀಡಿದೆ. ಆದರೆ, ಸುಮಾರು 10 ಕಡೆಗಳಲ್ಲಿ ಕತ್ತರಿ ಹಾಕುವಂತೆ ಸೂಚನೆಯನ್ನು ನೀಡಿದೆ. ಇದರಲ್ಲಿ ಇತ್ತೀಚೆಗೆ ವಿವಾದಕ್ಕೆ ಒಳಗಾಗಿದ್ದ ಬೇಷರಂ ಹಾಡು ಕೂಡ ಇದೆ. ದೀಪಿಕಾ ಪಡುಕೋಣೆ ಕ್ಲೋಸ್‌ ಅಪ್ ದೃಶ್ಯ ಹಾಗೂ ಡೈಲಾಗ್‌ಗಳಿಗೆ ಕತ್ತರಿ ಹಾಕುವಂತೆ ತಿಳಿಸಿದೆ. ಸದ್ಯ 10 ದೃಶ್ಯಗಳಲ್ಲಿ ಏನಕ್ಕೆ ಕತ್ತರಿ ಪ್ರಯೋಗ ಮಾಡಿದೆ ಅನ್ನೋನ್ನು ಬಾಲಿವುಡ್ ಮಾಧ್ಯಮಗಳು ವರದಿ ಮಾಡಿವೆ.

  10 ಕಡೆ 'ಪಠಾಣ್' ಸಿನಿಮಾಗೆ ಕತ್ತರಿ

  10 ಕಡೆ 'ಪಠಾಣ್' ಸಿನಿಮಾಗೆ ಕತ್ತರಿ

  "ಬೇಷರಂ ರಂಗ್..." ಹಾಡನಲ್ಲಿ ಮೂರು ಬದಲಾವಣೆಗಳನ್ನು ಮಾಡುವಂತೆ ಸೆನ್ಸಾರ್ ಬೋರ್ಡ್ ಸೂಚಿದೆ. ದೀಪಿಕಾ ಕ್ಲೋಸ್ ಅಪ್ ಶಾರ್ಟ್ಸ್‌ನಲ್ಲಿ ಸೈಡ್ ಪೋಸ್, ಮಾದಕ ಡ್ಯಾನ್ಸ್ ಮೂವ್‌ಮೆಂಟ್ಸ್ ಹಾಗೂ ಬಹುತ್ ತಂಗ್ ಕಿಯ ( ತುಂಬಾನೇ ಸತಾಯಿಸಿ ಬಿಟ್ಟೆ) ಅನ್ನೋದನ್ನು ತೆಗೆದು ಹಾಕುವಂತೆ ಹೇಳಿದೆ ಎಂದು ಬಾಲಿವುಡ್ ಹಂಗಾಮ ವರದಿ ಮಾಡಿದೆ. ಅದರಂತೆಯೇ ಸೆನ್ಸಾರ್ ಸರ್ಟಿಫಿಕೇಟ್‌ನಲ್ಲಿ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದ ಕೇಸರಿ ಬಿಕಿನಿಯನ್ನು ತೆಗೆಯುವಂತೆ ಸೂಚಿಸಿಲ್ಲ ಎನ್ನಲಾಗಿದೆ.

  ಕೆಲವು ಪದಗಳಿಗೆ ಸೆನ್ಸಾರ್ ಕತ್ತರಿ

  ಕೆಲವು ಪದಗಳಿಗೆ ಸೆನ್ಸಾರ್ ಕತ್ತರಿ

  'ಪಠಾಣ್' ಸಿನಿಮಾದ ಡೈಲಾಗ್‌ಗಳಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡುವಂತೆ ಹೇಳಲಾಗಿದೆ. 'ರಾ' ಪದವನ್ನು 'ಹಮಾರೆ' ಅಂತಲೂ 'ಲಂಗ್ಡೆ ಲುಲ್ಲೆ' ಅನ್ನೋ ಪದಗಳ ಬದಲು 'ಟೂಟೆ ಫೂಟೆ' ಅಂತಲೂ ಸೇರಿಸುವಂತೆ ತಿಳಿಸಿದೆ. 13 ಕಡೆ 'ಪಿಎಂಓ' ಪದವನ್ನು ತೆಗೆದು ಹಾಕುವಂತೆ ಹೇಳಿದೆ. 'ಪಿಎಂ' ಬದಲು ಅಧ್ಯಕ್ಷ ಅಥವಾ ಮಿನಿಸ್ಟರ್ ಅಂತ ಸೇರಿಸುವಂತೆ ಹೇಳಲಾಗಿದೆ. 'ಮಿಸ್ಸಸ್ ಭಾರತ್‌ ಮಾತಾ' ಬದಲು 'ಹಮಾರಿ ಭಾರತ್‌ ಮಾತಾ' ಹಾಗೂ 'ಅಶೋಕ ಚಕ್ರ' ಬದಲು 'ವೀರ್ ಪುರಸ್ಕರ್' ಹಾಗೇ 'ಕೆಜಿಬಿ' ಬದಲು 'ಎಸ್‌ಬಿಯು' ಎಂದೂ, 'ಸ್ಕಾಚ್' ಬದಲು 'ಡ್ರಿಂಕ್' ಅಂತಲೂ ಬದಲಾಯಿಸುವಂತೆ ಹೇಳಿದೆ. ಹಾಗೇ ರಷ್ಯಾ ಪದವನ್ನು ತೆಗೆಯುವಂತೆ ಸೂಚಿಸಿದೆ ಎಂದು ವರದಿಯಾಗಿದೆ.

  'ಪಠಾಣ್' ವಿರುದ್ಧ ಪ್ರತಿಭಟನೆ

  'ಪಠಾಣ್' ವಿರುದ್ಧ ಪ್ರತಿಭಟನೆ

  ಇದೇ ಗುಜರಾತಿನ ಅಹಮದಾಬಾದ್‌ನಲ್ಲಿ 'ಪಠಾಣ್' ವಿರುದ್ಧ ಪ್ರತಿಭಟನೆ ನಡೆದಿದೆ. ಬಜರಂಗ ದಳದ ಟ್ವಿಟರ್‌ನಲ್ಲಿ ವಿಡಿಯೋ ಶೇರ್ ಆಗಿದ್ದು , ಘೋಷಣೆಗಳನ್ನು ಕೂಗಿದೆ. ಹಾಗೇ ಪೊಸ್ಟರ್‌ಗಳನ್ನು ಹರಿದು ಹಾಕಲಾಗಿದೆ.

  English summary
  Shah Rukh Khan and Deepika Padukone Pathaan Got U/A Censor Certificate With 10 Cuts,Know More.
  Thursday, January 5, 2023, 14:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X