For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಪ್ರಕರಣ: ಶಾರುಖ್ ಖಾನ್ ಕಾರು ಚಾಲಕನ ವಿಚಾರಣೆ

  |

  ಮಗ ಆರ್ಯನ್‌ ಖಾನ್‌ನ ಡ್ರಗ್ಸ್ ಪ್ರಕರಣ ಅಪ್ಪ ಶಾರುಖ್ ಖಾನ್‌ ಕೊರಳಿಗೂ ಸುತ್ತಿಕೊಳ್ಳುತ್ತದೆಯೇ? ಎಂಬ ಅನುಮಾನ ಮೂಡಿಬರುತ್ತಿದೆ.

  ಡ್ರಗ್ಸ್ ಪ್ರಕರಣದಲ್ಲಿ ಎನ್‌ಸಿಬಿಯು ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅನ್ನು ಬಂಧಿಸಿತ್ತು. ಇದೀಗ ಆರ್ಯನ್ ಖಾನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಕರಣದ ತನಿಖೆಯನ್ನು ಎನ್‌ಸಿಬಿ ಮುಂದುವರೆಸಿದ್ದು, ಶಾರುಖ್ ಖಾನ್‌ನ ಕಾರು ಚಾಲಕನನ್ನು ಎನ್‌ಸಿಬಿ ವಿಚಾರಣೆ ನಡೆಸಲಿದೆ.

  ಆರ್ಯನ್ ಖಾನ್‌ಗೆ ಇರುವ ಸಂಪರ್ಕವನ್ನು, ಆತ ಭೇಟಿ ಮಾಡುತ್ತಿದ್ದ ಸ್ಥಳಗಳು ಇನ್ನಿತರೆ ಮಾಹಿತಿಗಳನ್ನು ಕಲೆ ಹಾಕಲು ಚಾಲಕನನ್ನು ವಿಚಾರಣೆ ನಡೆಸಲಾಗುತ್ತಿದೆ. ಆರ್ಯನ್ ಖಾನ್‌ಗೆ ಪ್ರತ್ಯೇಕ ಡ್ರೈವರ್ ಇಲ್ಲ, ಅವರು ಅಪ್ಪನ ಕಾರು ಚಾಲಕರನ್ನೇ ತಮ್ಮ ಕಾರು ಚಾಲನೆಗೆ ಬಳಸುತ್ತಾರೆ ಎಂದು ಕೆಲವು ಬಾಲಿವುಡ್ ಮಾಧ್ಯಮಗಳು ವರದಿ ಮಾಡಿವೆ.

  ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿನಿಮಾ ನಿರ್ಮಾಪಕ ಇಮ್ತಿಯಾಜ್ ಖತ್ರಿ ಹೆಸರು ಸಹ ಹೊರಗೆ ಬಂದಿದ್ದು ಅವರನ್ನೂ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಬಂಧಿತರಲ್ಲಿ ಒಬ್ಬರ ವಿಚಾರಣೆ ವೇಳೆ ಇಮ್ತಿಯಾಜ್ ಖತ್ರಿ ಹೆಸರು ಹೊರಗೆ ಬಂದಿದ್ದು, ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿಯೂ ಇಮ್ತಿಯಾಜ್ ಹೆಸರು ಕೇಳಿ ಬಂದಿತ್ತು. ಇಮ್ತಿಯಾಜ್‌ ಖತ್ರಿಯ ವಿಚಾರಣೆ ನಡೆದಿದ್ದು ಇನ್ನಷ್ಟು ಬಾಲಿವುಡ್ ಮಂದಿಯ ಹೆಸರು ಹೊರಗೆ ಬರಲಿದೆ ಎನ್ನಲಾಗುತ್ತಿದೆ.

  ಮುಂಬೈನಲ್ಲಿ ಕ್ರೂಸ್ ಶಿಫ್‌ ಮೇಲೆ ಅಕ್ಟೋಬರ್ 02ರಂದು ಎನ್‌ಸಿಬಿ ಅಧಿಕಾರಿಗಳು ರೇಡ್ ಮಾಡಿದಾಗ ಆರ್ಯನ್ ಖಾನ್ ಹಾಗೂ ಇತರ ಆರು ಮಂದಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಅಕ್ಟೋಬರ್ 03 ರಂದು ಆರ್ಯನ್ ಖಾನ್, ಅರ್ಬಾಜ್ ಸೇಠ್ ಹಾಗೂ ಮಾಡೆಲ್ ಮುನ್‌ಮುನ್ ಧಮೇಚಾ ಅನ್ನು ಬಂಧಿಸಲಾಯ್ತು. ಆರ್ಯನ್ ಬಳಿ ಡ್ರಗ್ಸ್ ಪತ್ತೆ ಆಗಲಿಲ್ಲವಾದರೂ ಡ್ರಗ್ಸ್ ಜಾಲದೊಂದಿಗೆ ಅವರಿಗೆ ಸಂಪರ್ಕವಿದೆ ಎಂದು ಎನ್‌ಸಿಬಿ ಆರೋಪಿಸಿದೆ. ಆರ್ಯನ್‌ರ ಜಾಮೀನು ಅರ್ಜಿ ವಜಾಗೊಂಡಿದ್ದು 14 ದಿನ ನ್ಯಾಯಾಂಗ ಬಂಧನವನ್ನು ನ್ಯಾಯಾಲಯವು ವಿಧಿಸಿದೆ.

  ಆರ್ಯನ್ ಖಾನ್ ಪ್ರಕರಣ ದಿನಗಳೆದಂತೆ ಹೆಚ್ಚು ಕುತೂಹಲಕಾರಿಯಾಗುತ್ತಾ ಸಾಗುತ್ತಿದೆ. ಆರ್ಯನ್ ಖಾನ್ ಬಳಿ ಡ್ರಗ್ಸ್ ಇರಲಿಲ್ಲ ಎಂದು ಎನ್‌ಸಿಬಿ ಹೇಳಿತ್ತು. ಆದರೂ ಆರ್ಯನ್ ಅನ್ನು ಬಂಧಿಸಿದ ಬಗ್ಗೆ ಹಲವರು ಪ್ರಶ್ನೆ ಮಾಡಿದ್ದರು. ಕಳೆದ ವಿಚಾರಣೆಯಲ್ಲಿ ಹೊರಬಂದಿರುವ ಮಾಹಿತಿಯಂತೆ ಆರ್ಯನ್ ಖಾನ್‌ ಹಾಗೂ ಅವನ ಗೆಳೆಯ ಅರ್ಬಾಜ್ ಸೇಠ್ ಡ್ರಗ್ಸ್ ಬಗ್ಗೆ ಕೆಲವರೊಟ್ಟಿಗೆ ವಾಟ್ಸ್‌ಆಪ್‌ನಲ್ಲಿ ಮಾತನಾಡಿದ್ದರಂತೆ.

  ಆದರೆ ಆರ್ಯನ್ ಖಾನ್‌ ಜೊತೆ ಬಂಧನಕ್ಕೆ ಒಳಗಾಗಿರುವ ಅರ್ಬಾಜ್ ಸೇಠ್ ಕೆಲವು ದಿನಗಳ ಹಿಂದೆ ನ್ಯಾಯಾಲಯದಲ್ಲಿ ಎನ್‌ಸಿಬಿ ವಿರುದ್ಧವೇ ಆರೋಪ ಮಾಡಿದ್ದರು. ''ನಾವು ಡ್ರಗ್ಸ್ ಹೊಂದಿರಲಿಲ್ಲ. ನಮ್ಮ ಬಳಿಯಿಂದ ಎನ್‌ಸಿಬಿ ವಶಪಡಿಸಿಕೊಂಡ ಡ್ರಗ್ಸ್ ಅನ್ನು ಎನ್‌ಸಿಬಿ ಅಧಿಕಾರಿಗಳೇ ನಮ್ಮ ಬ್ಯಾಗ್‌ನಲ್ಲಿ ಇಟ್ಟಿದ್ದರು. ಬೇಕಿದ್ದರೆ ನೀವು ಸಿಸಿಟಿವಿ ಪರಿಶೀಲನೆ ನಡೆಸಿ'' ಎಂದಿದ್ದರು.

  ಕ್ರೂಸ್‌ನಲ್ಲಿ ಪಾರ್ಟಿ ಅರೇಂಜ್ ಮಾಡಿದ್ದ ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯನ್ನು ಎನ್‌ಸಿಬಿ ವಿಚಾರಣೆ ಸಹ ನಡೆಸದಿರುವುದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅನುಮಾನಗಳು ವ್ಯಕ್ತವಾದ ಬೆನ್ನೆಲ್ಲೇ ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ನಾಲ್ವರು ಸಿಬ್ಬಂದಿಯನ್ನು ಎನ್‌ಸಿಬಿ ಬಂಧಿಸಿತು.

  ಆರ್ಯನ್ ಖಾನ್ ಬಂಧನದ ಬಳಿಕ ಶಾರುಖ್ ಖಾನ್ ಆಗಲಿ ಪತ್ನಿ ಗೌರಿ ಖಾನ್ ಆಗಲಿ ಬಹಿರಂಗ ಹೇಳಿಕೆ ನೀಡಿಲ್ಲ. ಆದರೆ ಬಾಲಿವುಡ್‌ನ ಹಲವು ಮಂದಿ ಆರ್ಯನ್‌ ಖಾನ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಹೃತಿಕ್ ರೋಷನ್, ಆಲಿಯಾ ಭಟ್ ಸೇರಿ ಹಲವರು ಆರ್ಯನ್ ಖಾನ್ ಅನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಹಾಕಿದ್ದಾರೆ. ಆದರೆ ಬಾಲಿವುಡ್ ಸೆಲೆಬ್ರಿಟಿಗಳು ಆರ್ಯನ್ ಖಾನ್ ಪರವಾಗಿ ಪೋಸ್ಟ್‌ಗಳನ್ನು ಹಾಕುತ್ತಿರುವುದಕ್ಕೆ ನಟಿ ಕಂಗನಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  English summary
  Shah Rukh Khan's car driver summoned by NCB in drugs case. Aryan Khan was arrested by NCB in drugs case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X