»   » ಬಾಲಿವುಡ್ ನಟ ಶಾಹಿದ್ ಕಪೂರ್ ಹೆಸರು ಬದಲಿಸಿಕೊಂಡಿದ್ದು ಯಾಕೆ?

ಬಾಲಿವುಡ್ ನಟ ಶಾಹಿದ್ ಕಪೂರ್ ಹೆಸರು ಬದಲಿಸಿಕೊಂಡಿದ್ದು ಯಾಕೆ?

Posted By:
Subscribe to Filmibeat Kannada

ಬಾಲಿವುಡ್ ನಟ ಶಾಹಿದ್ ಕಪೂರ್ ಈಗ ಇದ್ದಕ್ಕಿದ್ದ ಹಾಗೆ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ. ಅದಕ್ಕೆ ಕಾರಣ ಆಗಿರುವುದು ಅವರ ಮುಂದಿನ ಸಿನಿಮಾ 'ಪದ್ಮಾವತಿ'.

ದೀಪಿಕಾ ಪಡುಕೋಣೆ 'ಪದ್ಮಾವತಿ' ಚಿತ್ರದ ಫಸ್ಟ್ ಲುಕ್ ಬಿಡುಗಡೆ

'ಪದ್ಮಾವತಿ' ಈ ವರ್ಷದ ಬಹು ನಿರೀಕ್ಷಿತ ಸಿನಿಮಾ. ದೀಪಿಕಾ ಪಡುಕೋಣೆ ನಟಿಸಿರುವ ಈ ಚಿತ್ರದಲ್ಲಿ ಶಾಹಿದ್ ಕಪೂರ್ ಒಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಶಾಹಿದ್ 'ರಾಜ ಮಹಾರಾವಲ್ ರತನ್ ಸಿಂಗ್' ಪಾತ್ರದಲ್ಲಿ ಅಭಿನಯಿಸಿದ್ದಾರೆ.

Shahid Kapoor changed his twitter account name

ಶಾಹಿದ್ ಕಪೂರ್ ಈ ಪಾತ್ರವನ್ನು ತುಂಬ ಪ್ರೀತಿಸಿದ್ದಾರೆ ಅದು ಯಾವ ಮಟ್ಟಿಗೆ ಎಂದರೆ ಈಗ ಅವರು ತಮ್ಮ ಟ್ವಿಟ್ಟರ್ ಖಾತೆಗೆ 'ಮಹಾರಾವಲ್ ರತನ್ ಸಿಂಗ್' ಎಂದೇ ಹೆಸರಿಟ್ಟಿದ್ದಾರೆ. ಇನ್ನು 'ಪದ್ಮಾವತಿ' ಚಿತ್ರದ ಅವರ ರಗಡ್ ಲುಕ್ ಇತ್ತೀಚಿಗಷ್ಟೆ ಹೊರಬಂದಿದೆ.

Shahid Kapoor changed his twitter account name

ಬಾಲಿವುಡ್ ಚಿತ್ರರಂಗದ ಮ್ಯಾಜಿಕಲ್ ಡೈರೆಕ್ಟರ್ ಸಂಜಯ್ ಲೀಲಾ ಬನ್ಸಾಲಿ ಅವರ ಕನಸಿನ ಸಿನಿಮಾ ಇದಾಗಿದೆ. 'ರಾಮ್ ಲೀಲಾ' ಮತ್ತು 'ಬಾಜೀರಾವ್ ಮಸ್ತಾನಿ' ಚಿತ್ರಗಳ ಬಳಿಕ ಮತ್ತೆ ಬನ್ಸಾಲಿ ದೀಪಿಕಾ ಜೋಡಿ ಇಲ್ಲಿ ಒಂದಾಗಿದೆ. ರಣ್ ವೀರ್ ಸಿಂಗ್ ಮತ್ತು ಅದಿತಿ ರಾವ್ ಹೈದರಿ ಕೂಡ ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ, 'ಪದ್ಮಾವತಿ' ಸಿನಿಮಾ ಡಿಸೆಂಬರ್ 1ಕ್ಕೆ ದೇಶಾದ್ಯಾಂತ ಬಿಡುಗಡೆ ಆಗಲಿದೆ.

English summary
Actor Shahid Kapoor changed his twitter account name as MaharawalRatan Singh.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada