»   » ಟ್ವಿಟ್ಟರ್ ನಲ್ಲಿ ಮೋದಿಯನ್ನು ಹಿಂದಿಕ್ಕಿದ ಶಾರುಖ್ ಖಾನ್

ಟ್ವಿಟ್ಟರ್ ನಲ್ಲಿ ಮೋದಿಯನ್ನು ಹಿಂದಿಕ್ಕಿದ ಶಾರುಖ್ ಖಾನ್

Posted By:
Subscribe to Filmibeat Kannada

ಬಾಲಿವುಡ್ ಬಾಕ್ಸ್ ಆಫೀಸ್ ಕಿಂಗ್ ಖಾನ್ ಶಾರುಖ್ ಹೊಸ ದಾಖಲೆಗೆ ಪಾತ್ರರಾಗಿದ್ದಾರೆ. ಅವರ ಟ್ವಿಟ್ಟರ್ ಖಾತೆಗೆ ಅಭಿಮಾನಿಗಳು ಮುಗಿಬೀಳುತ್ತಿದ್ದು ಇದುವರೆಗೆ 130 ಲಕ್ಷ ಮಂದಿ ಅವರನ್ನು ಫಾಲೋ ಮಾಡುವ ಮೂಲಕ ಟ್ಟಿಟ್ಟರ್ ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಆದರೆ ಬಿಗ್ ಬಿ ಅಮಿತಾಬ್ ಅವರಿಗಿಂತಲೂ ಮುಂದಿದು ಅವರನ್ನು 140 ಲಕ್ಷ ಮಂದಿ ಫಾಲೋ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಶಾರುಖ್ ಅವರಿಗಿಂತಲೂ ಹಿಂದಿದ್ದು 120 ಲಕ್ಷ ಮಂದಿ ಅವರನ್ನು ಫಾಲೋ ಮಾಡುತ್ತಿದ್ದಾರೆ. [ಅಗ್ರಸ್ಥಾನದಿಂದ ಶಾರುಖ್ ಕೆಳಕ್ಕೆ ತಳ್ಳಿದ ಸಲ್ಮಾನ್]

Shahrukh Khan 13 million milestone on Twitter

ಸದ್ಯಕ್ಕೆ ಟ್ವಿಟ್ಟರ್ ನಲ್ಲಿ #SRK13Million ಎಂಬ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ನಲ್ಲಿದೆ. ಈ ವರ್ಷ ಮಾರ್ಚ್ ಅಂತ್ಯಕ್ಕೆ ಶಾರುಖ್ ಫಾಲೋವರ್ಸ್ ಸಂಖ್ಯೆ 120 ಲಕ್ಷಗಳಷ್ಟಿತ್ತು. ಒಂದೂವರೆ ತಿಂಗಳಲ್ಲಿ ಅವರ ಫಾಲೋವರ್ಸ್ ಸಂಖ್ಯೆ 10 ಲಕ್ಷ ಹೆಚ್ಚಳವಾಗಿರುವುದು ವಿಶೇಷ.

ಆದರೆ ಶಾರುಖ್ ಈ ಬಗ್ಗೆ ಒಂದು ಸಣ್ಣ ಥ್ಯಾಂಕ್ಸ್ ಸಹ ಹೇಳದಿರುವುದು ಅವರ ಅಭಿಮಾನಿಗಳಿಗೆ ಕೊಂಚ ನಿರಾಶೆ ಉಂಟು ಮಾಡಿದೆ. ಇಷ್ಟಕ್ಕೂ ಶಾರುಖ್ ಇಷ್ಟೆಲ್ಲಾ ಫಾಲೋವರ್ಸನ್ನು ಹೇಗೆ ಗಳಿಸಿಕೊಂಡರು ಎಂದರೆ...

ಇನ್ನೂ 49ರ ಹರೆಯದ ಶಾರುಖ್ ಖಾನ್ ಟ್ವಿಟ್ಟರ್ ನಲ್ಲಿ ಸದಾ ಸಕ್ರಿಯನಾಗಿದ್ದು ತನ್ನ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾದ ನಟ. ಕೇವಲ ತನ್ನ ಚಿತ್ರಗಳ ಬಗ್ಗೆಯಷ್ಟೇ ಅಲ್ಲದೆ ತಮ್ಮ ಕುಟುಂಬ, ಮಗನ ಬಗ್ಗೆಯೂ ಟ್ವೀಟಿಸುತ್ತಾ ಬಂದಿದ್ದಾರೆ. ಬಹುಶಃ ಅವರ ಫಾಲೋವರ್ಸ್ ಸಂಖ್ಯೆ ಹೆಚ್ಚಾಗಲು ಇದೂ ಒಂದು ಕಾರಣವಿರಬಹುದು. (ಏಜೆನ್ಸೀಸ್)

English summary
Bollywood King Khan Shah Rukh Khan's Twitter following just swelled to 13 million. He's added a million followers since hitting 12 million at the end of March. #SRK13Million is, of course, trending on Twitter.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada