Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದೀಪಿಕಾ ಮದುವೆ ನಂತರ ಏನಿದೆಲ್ಲ.. ಶಾರೂಖ್ ಜೊತೆ ತುಂಬಾ ಓವರ್ ಆಯ್ತು: ಟ್ರೋಲ್ ಶುರು!
ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ನಟನೆಯ 'ಪಠಾಣ್' ಚಿತ್ರದ 'ಬೇಷರಂ ರಂಗ್' ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಹಾಡಿನಲ್ಲಿ ದೀಪಿಕಾ ಪಡುಕೋಣಿ ಮೊನಾಕಿನಿ ತೊಟ್ಟು ಬಿಸಿ ಏರಿಸಿದ್ದಾರೆ. ಡಿಪ್ಪಿ ಬೋಲ್ಡ್ ಅವತಾರ ನೋಡಿ ನೆಟ್ಟಿಗರು ಸಖತ್ ಟ್ರೋಲ್ ಮಾಡುತ್ತಿದ್ದಾರೆ.
ಜಾಕ್ವೆಲಿನ್
ಫರ್ನಾಂಡೀಸ್
ವಿರುದ್ಧ
ನೋರಾ
ಫತೇಹಿ
ದೂರು,
ಇದು
ಮಾಮೂಲಿ
ಜಡೇ
ಜಗಳವಲ್ಲ!
ವಿಶಾಲ್ ಹಾಗೂ ಶೇಖರ್ ಟ್ಯೂನ್ ಹಾಕಿರುವ ಹಾಡಿಗೆ ಕುಮಾರ್ ಲಿರಿಕ್ಸ್ ಬರೆದಿದ್ದಾರೆ. ಶಿಲ್ಪಾ ರಾವ್ ವಾಯ್ಸ್‌ನಲ್ಲಿ ಸಾಂಗ್ ಸಖತ್ ಕಿಕ್ ಕೊಟ್ಟಿದೆ. ವೈಭವಿ ಮರ್ಚೆಂಟ್ ಕೊರಿಯೋಗ್ರಫಿಯಲ್ಲಿ 'ಬೇಷರಂ ರಂಗ್' ಸಾಂಗ್ ಮೂಡಿ ಬಂದಿದೆ. ಸ್ಪೇನ್‌ನ ಅದ್ಭುತ ಲೊಕೇಶನ್‌ಗಳಲ್ಲಿ ಸಾಂಗ್ ಶೂಟ್ ಮಾಡಿದ್ದಾರೆ. ದೀಪಿಕಾ ಬಿಕಿನಿಯಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕುಣಿದು ಕುಪ್ಪಳಿಸಿದರೆ ಶಾರುಕ್ ಸಿಕ್ಸ್‌ಪ್ಯಾಕ್ ಹ್ಯಾಬ್ಸ್ ಪ್ರದರ್ಶಿಸಿ ರಂಗೇರಿಸಿದ್ದಾರೆ. ಕೊನೆಗೆ ಇಬ್ಬರು ತಬ್ಬಿ ಹಸಿಬಿಸಿಯಾಗಿ ಕಾಣಿಸಿಕೊಂಡಿದ್ದಾರೆ. ಇದು ಕೆಲವರ ಬೇಸರಕ್ಕೆ ಕಾರಣವಾಗಿದೆ.
ವಾರದ ಹಿಂದೆ ಸಾಂಗ್ ರಿಲೀಸ್ ಅನೌನ್ಸ್ ಮಾಡಿದಾಗಲೇ ದೀಪಿಕಾ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದ ಪೋಸ್ಟರ್ ರಿಲೀಸ್ ಆಗಿತ್ತು. ಆಗಲೇ ಕೆಲವರು ಮದುವೆ ಆದಮೇಲೆ ಏನು ಇದೆಲ್ಲಾ ಎಂದು ಚಕಾರ ಎತ್ತಿದ್ದರು. ಇದೀಗ ಹಾಡಿನಲ್ಲಿ ಶಾರುಕ್ ಹಾಗೂ ದೀಪಿಕಾ ಸಿಕ್ಕಾಪಟ್ಟೆ ಮಾದಕವಾಗಿ ಕಾಣಿಸಿಕೊಂಡಿರೋದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಶಾರುಕ್ ಚಿತ್ರದಲ್ಲಿ ಇದೆಲ್ಲಾ ನಿರೀಕ್ಷೆ ಮಾಡಿರಲಿಲ್ಲ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಒಟ್ಟಾರೆ ಸಾಂಗ್ ಅಂತೂ ಹಿಟ್ ಆಗಿದೆ.

ಇಂತಹ ಚಿತ್ರದಿಂದ ಬಾಲಿವುಡ್ ಗೆಲ್ಲುತ್ತಾ?
ಸತತ ಸೋಲುಗಳಿಂದ ಬಾಲಿವುಡ್ ಕಂಗೆಟ್ಟಿದೆ. ಈ ವರ್ಷ ಹಿಂದಿ ಬೆಲ್ಟ್‌ನಲ್ಲಿ ಕೂಡ ಸೌತ್ ಸಿನಿಮಾಗಳ ಕಾರುಬಾರು ಜೋರಾಗಿದೆ. 'ಜೀರೋ' ಸಿನಿಮಾ ಸೋಲಿನಿಂದ ಎದ್ದು ಬರಲು 3 ವರ್ಷಗಳಿಂದ ಕಿಂಗ್ ಖಾನ್ ಕಾಯುತ್ತಿದ್ದಾರೆ. 'ಪಠಾಣ್' ಸಿನಿಮಾ ಮೂಲಕ ಅದನ್ನು ಸಾಧಿಸುತ್ತಾರೆ. ಅಷ್ಟೇ ಅಲ್ಲ ಸೋಲಿನ ಸುಳಿಗೆ ಸಿಲುಕಿರುವ ಹಿಂದಿ ಚಿತ್ರರಂಗವನ್ನು ಕೂಡ ಮೇಲೆತ್ತುತ್ತಾರೆ ಎನ್ನಲಾಗುತ್ತಿದೆ. ಆದರೆ ಈ ಸಾಂಗ್ ನೋಡಿದವರು, ಇಂತಹ ಸಿನಿಮಾ ಮಾಡಿ ಬಾಲಿವುಡ್‌ನ ಗೆಲ್ಲಿಸ್ತೀರಾ ಶಾರೂಕ್ ಎಂದು ಕೇಳುತ್ತಿದ್ದಾರೆ.

ಸಾಂಗ್ ನೋಡಿ ಅಭಿಮಾನಿಗಳ ಬೇಸರ
'ಬೇಷರಂ ರಂಗ್' ಸಾಂಗ್‌ನಲ್ಲಿ ಕಿಂಗ್ ಖಾನ್ ಹಾಗೂ ದೀಪಿಕಾ ಕೆಮೆಸ್ಟ್ರಿ ಚೆನ್ನಾಗಿದೆ. ಆದರೆ ಎಲ್ಲಾ ಅತಿಯಾಯಿತು ಎಂದು ಕೆಲವರು ಹೇಳುತ್ತಿದ್ದಾರೆ. ನಮ್ಮತನ ಬಿಟ್ಟು ಇಂತಹ ಸಿನಿಮಾ ಮಾಡಿದ್ದಕ್ಕೆ ಬಾಲಿವುಡ್‌ಗೆ ಇಂತಹ ಸ್ಥಿತಿ ಬಂದಿದೆ. ಇನ್ನಾದರೂ ಎಚ್ಚೆತ್ತುಕೊಳ್ಳುವುದು ಬಿಟ್ಟು ಮತ್ತೆ ಇದನ್ನೇ ಮಾಡಿದರೆ ಹೇಗೆ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸಾಂಗ್ ಸ್ಕ್ರೀನ್ ಶಾಟ್ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.

ಜನವರಿ 25ಕ್ಕೆ 'ಪಠಾಣ್' ರಿಲೀಸ್
ಸಿದ್ದಾರ್ಥ್ ಆನಂದ್ ನಿರ್ದೇಶನದ 'ಪಠಾಣ್' ಚಿತ್ರದಲ್ಲಿ ಜಾನ್ ಅಬ್ರಹಾಂ ಕೂಡ ನಟಿಸಿದ್ದಾರೆ. ಕಿಂಗ್ ಖಾನ್ ಹಾಗೂ ಜಾನ್ ಕಾಂಬಿನೇಷನ್ ಬಗ್ಗೆ ಭಾರೀ ನಿರೀಕ್ಷೆ ಇದೆ. ಈಗಾಗಲೇ ಚಿತ್ರದ ಸ್ಯಾಂಪಲ್‌ಗಳಲ್ಲಿ ಆಕ್ಷನ್ ಝಲಕ್ ನೋಡಿ ಥ್ರಿಲ್ಲಾಗಿದ್ದಾರೆ. ದೀಪಿಕಾ ಕೂಡ ಭರ್ಜರಿ ಆಕ್ಷನ್ ಸೀನ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ಸಿಕ್ಕಾಪಟ್ಟೆ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಆಗಿದೆ. ಜನವರಿ 25ಕ್ಕೆ 'ಪಠಾಣ್' ಸಿನಿಮಾ ತೆರೆಗೆ ಬರ್ತಿದೆ.

'ಪಠಾಣ್' ಕನ್ನಡಕ್ಕೆ ಡಬ್ ಆಗ್ತಿಲ್ಲ
ಬಾಲಿವುಡ್ ಸಿನಿಮಾಗಳು ಕೂಡ ಈಗ ಕನ್ನಡಕ್ಕೆ ಡಬ್ ಆಗುತ್ತಿವೆ. ಆದರೆ ಈ ಚಿತ್ರವನ್ನು ತೆಲುಗು ಮತ್ತು ತಮಿಳಿಗೆ ಮಾತ್ರ ಡಬ್ ಮಾಡಿ ರಿಲೀಸ್ ಮಾಡಲಾಗುತ್ತಿದೆ. ಕನ್ನಡಕ್ಕೆ ಡಬ್ ಮಾಡದೇ ಇರುವುದು ಕೂಡ ಕೆಲವರ ಆಕ್ರೋಶಕ್ಕೆ ಕಾರಣವಾಗಿರುವುದು ಸುಳ್ಳಲ್ಲ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. ಮುಂದೆ ಚಿತ್ರಕ್ಕೆ ಕರ್ನಾಟಕದಲ್ಲಿ ಬಾಯ್ಕಾಟ್ ಬಿಸಿ ಎದುರಾಗುವ ಸುಳಿವು ಸಿಕ್ತಿದೆ.